ಕನ್ನಡಪ್ರಭ ವಾರ್ತೆ ಮಂಗಳೂರು:
ಬೆಳಗ್ಗೆ ವೇದಮೂರ್ತಿ ಅರವಿಂದ ಭಟ್ ಅವರ ನೇತೃತ್ವದಲ್ಲಿ ಮಹಾಗಣಪತಿ ಹವನ ಹಾಗೂ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಮೂಹ ನಿರ್ದೇಶಕ ರವಿ ಹೆಗಡೆ, ಕನ್ನಡಪ್ರಭ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಬಿ.ಸಿ.ರಾಘವೇಂದ್ರ, ಕನ್ನಡಪ್ರಭ ಮಂಗಳೂರು ಕಚೇರಿ ಮುಖ್ಯಸ್ಥ ರಾಘವೇಂದ್ರ ಅಗ್ನಿಹೋತ್ರಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಅಕ್ಷರಸಂತ ಹರೇಕಳ ಹಾಜಬ್ಬ ಸ್ಥಳಾಂತರಿತ ಕಚೇರಿಗೆ ಶುಭ ಹಾರೈಸಿ ಮಾತನಾಡಿ, ತೆರೆಮರೆಯ ಸಾಧಕರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸವನ್ನು ಕನ್ನಡಪ್ರಭ-ಸುವರ್ಣ ನ್ಯೂಸ್ ಮಾಡುತ್ತಿರುವುದು ಶ್ಲಾಘನೀಯ. ಕಿತ್ತಳೆ ಮಾರುತ್ತಿದ್ದ ಸಾಮಾನ್ಯನಾದ ನನ್ನನ್ನು ವರ್ಷದ ವ್ಯಕ್ತಿ ಎಂದು ಗುರುತಿಸಿ ಪುರಸ್ಕರಿಸಿದ ಕನ್ನಡಪ್ರಭದ ಕಳಕಳಿ ಇತರರಿಗೆ ಮಾರ್ಗದರ್ಶಕ. ಕನ್ನಡಪ್ರಭದಿಂದಾಗಿಯೇ ನಾನು ಇಂದು ಎಲ್ಲೆಡೆ ಗುರುತಿಸುವಂತಾಗಿದೆ. ಇದೇ ಕಾರಣಕ್ಕೆ ನನಗೆ ಪದ್ಮಶ್ರೀ ಮತ್ತಿತರ ಮಹತ್ವದ ಪ್ರಶಸ್ತಿಗಳು ಬರಲು ಕಾರಣವಾಯಿತು. ಇಂತಹ ಕನ್ನಡಪ್ರಭಕ್ಕೆ ನಾನು ಸದಾ ಚಿರಋಣಿ ಎಂದರು.ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಮೂಹ ನಿರ್ದೇಶಕ ರವಿ ಹೆಗಡೆ ಮಾತನಾಡಿ, ಸ್ಥಳಾಂತರಿತ ಕಚೇರಿಯಲ್ಲಿ ಕಾರ್ಪೊರೇಟ್ ಶೈಲಿಯಲ್ಲಿದ್ದು, ಎಲ್ಲರೂ ಕನ್ನಡಪ್ರಭ-ಸುವರ್ಣ ನ್ಯೂಸ್‌ನ ಪ್ರಯೋಜನ ಪಡೆಯುವಂತಾಗಲಿ ಎಂದು ಹಾರೈಸಿದರು.
ಮಂಗಳೂರು ಆವೃತ್ತಿ ಹೊಂದಿರುವ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸ್ಥಳಾಂತರಿತ ಕಚೇರಿ ಹೊಸ ವಿಳಾಸದಲ್ಲಿ ಗುರುವಾರದಿಂದ ಕಾರ್ಯಾರಂಭಿಸಿದೆ. ಕನ್ನಡಪ್ರಭ-ಸುವರ್ಣ ನ್ಯೂಸ್, ಡೋರ್ ನಂಬರ್ 4-3-305/ 8, ಪ್ರಥಮ ಮಹಡಿ, ಅಸಿಸಿ ಕಾಂಪ್ಲೆಕ್ಸ್, ಜೈಲ್ ರಸ್ತೆ ಮಂಗಳೂರು-575004.