ಕನ್ನಡಪ್ರಭ ವಾರ್ತೆ ತಾಳಿಕೋಟೆ
ಶುಕ್ರವಾರ ಧರಣಿ ನಿರತರ ಸ್ಥಳಕ್ಕೆ ಭೇಟಿ ನೀಡಿದ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಅವರು, ರಸ್ತೆ ದುರಸ್ತಿಗಾಗಿ ೨೦೨೪ರ ನವೆಂಬರ್ ನಲ್ಲಿ ₹೫ ಕೋಟಿ ಲೋಕೋಪಯೋಗಿ ಇಲಾಖೆಯಡಿ ಹಾಕಲಾಗಿತ್ತು. ಕೆಲವರ ಸ್ವಹಿತಾಸಕ್ತಿಗೆ ಈ ಕೆಲಸ ರದ್ದುಗೊಂಡಿತು. ಬಂದ ಅನುದಾನ ಬೇರೆಡೆ ಹೋಯಿತು. ಈಗ ರಸ್ತೆ ದುರಸ್ತಿಗೆ ಎಲ್ಲರ ಅಪೇಕ್ಷೆಯಂತೆ ಕೂಡಲೇ ತಾತ್ಕಾಲಿಕವಾಗಿ ಗರಸು ಹಾಕಿಸಿ ದರುಸ್ತಿ ಮಾಡಿಕೊಡಿಕೊಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ರಸ್ತೆ ಡಾಂಬರೀಕರಣ ಅನುದಾನಕ್ಕಾಗಿ ಸರ್ಕಾರ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಆದಷ್ಟು ಬೇಗ ಸರ್ಕಾರದಿಂದ ಮಂಜೂರಾತಿ ದೊರೆತ ತಕ್ಷಣವೇ ಡಾಂಬರೀಕರಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ರಾಜುಗೌಡ ಪಾಟೀಲ ಅವರ ಭರವಸೆ ಮೇರೆಗೆ ಧರಣಿ ನಿರತರು ಧರಣಿ ಸತ್ಯಾಗ್ರಹ ಹಿಂಪಡೆದುಕೊಳ್ಳುವುದಾಗಿ ತಿಳಿಸಿದರು.ತಹಸೀಲ್ದಾರ್ ಡಾ.ವಿನಯಾ ಹೂಗಾರ, ಪಿಡಬ್ಲುಡಿ ಅಧಿಕಾರಿ ಅರುಣಕುಮಾರ, ಜೆಡಿಎಸ್ ತಾಲೂಕು ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ರೈತ ಸಂಘದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹಣಮಂತ ವಡ್ಡರ, ಜಿಲ್ಲಾ ಉಪಾಧ್ಯಕ್ಷ ಮೈಹಿಬೂಬಾಷಾ ಮನಗೂಳಿ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಣುಕಾ ಪಾಟೀಲ, ತಾಲೂಕು ಅಧ್ಯಕ್ಷ ಅಶೋಕಗೌಡ ಪಾಟೀಲ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಗೌಡಪ್ಪಗೌಡ ಹಳಿಮನಿ ಅಸ್ಕಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶರಣು ಕೌದಿ, ಗ್ರಾಮ ಘಟಕದ ಅಧ್ಯಕ್ಷ ವಿಜಯಕುಮಾರ ಉಕ್ಕಲಿ, ಕೆಸರಟ್ಟಿ ಗ್ರಾಮದ ಮುಖಂಡರಾದ ರಾಮನಗೌಡ ಪಾಟೀಲ, ಬಸನಗೌಡ ಬಿರಾದಾರ, ಗುರುನಾಥಗೌಡ ಪಾಟೀಲ, ಬಿಂಜಲಭಾವಿ ಗ್ರಾಮದ ಮುಖಂಡರಾದ ಸಿದ್ದಣ್ಣ ಅಸ್ಕಿ, ಮಲಕನಗೌಡ ಬಿರಾದಾರ, ಸಾಯಬಣ್ಣ ಉಕ್ಕಲಿ, ಬಸಯ್ಯ ಹಿರೇಮಠ, ಶಾಂತಗೌಡ ಬಿರಾದಾರ, ಮಹ್ಮದಲಿ ಮಕಾಂದಾರ, ಚನ್ನಾರೆಡ್ಡಿಗೌಡ ಬಿರಾದಾರ, ಒಳಗೊಂಡು ಮೊದಲಾದವರು ಉಪಸ್ಥಿತರಿದ್ದರು.