ಕನ್ನಡಪ್ರಭ ವಾರ್ತೆ ಕೆಜಿಎಫ್ ಸುಪ್ರಿಂಕೋಟ್ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ಅದೇಶವನ್ನು ಉಲ್ಲಂಘಸಿ, ಸಾರ್ವಜನಿಕರ ಹಣದಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಶಾಸಕರ ಹೆಸರು ಹಾಗೂ ಅವರ ಹಿಂಬಾಲಕರ ಹೆಸರನ್ನು ಕುಡಿವ ನೀರಿನ ಘಟಕಗಳು, ಸರ್ಕಾರಿ ಕಟ್ಟಡಗಳ ಕಾಮಗಾರಿ, ರಸ್ತೆಗಳ ಅಭಿವೃದ್ದಿ, ಮುಖ್ಯ ರಸ್ತೆಯ ಅಡ್ಡ ರಸ್ತೆಗಳಿಗೆ ನಾಮಫಲಕಗಳಲ್ಲಿ ಪ್ರದರ್ಶಿಸಿರುವುದರ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗಿವೆ.ಸುಪ್ರೀಂ ಅದೇಶದಲ್ಲಿ ಏನಿದೆಪ್ರಧಾನಮಂತ್ರಿ, ಮುಖ್ಯ ನ್ಯಾಯಮೂರ್ತಿ, ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ರಾಷ್ಟ್ರಪಿತ ಅವರ ಭಾವ ಚಿತ್ರ ಹೊರತುಪಡಿಸಿ ಬೇರೆ ಯಾವುದೇ ರಾಜಕೀಯ ಪಕ್ಷ, ಜನಪ್ರತಿನಿಧಿಗಳ ಭಾವಚಿತ್ರಗಳನ್ನು ಅಳವಡಿಸಬಾರದೆಂದು ಸುಪ್ರೀಂಕೋರ್ಟ್ ೨೦೧೫ರ ಮೇ ೧೩ ರಂದು ತೀರ್ಪು ನೀಡಿದೆ, ಈ ವಿಚಾರಕ್ಕೆ ಸಂಬಂಧಿಸದಂತೆ ೨೦೨೧ ರ ಅಗಸ್ಟ್ ೨೪ ರಂದು ನಗರಾಭಿವೃದ್ದಿ ಇಲಾಖೆ ಕೂಡ ಸುತ್ತೋಲೆ ಹೊರಡಿಸಿದ್ದು, ಸರ್ಕಾರಿ ವೆಚ್ಚದಲ್ಲಿ ಅಥವಾ ಸರ್ಕಾರದ ನೆರವಿನೊಂದಿಗೆ ಕೈಗೊಳ್ಳುವ ಯಾವುದೇ ಯೋಜನೆಗಳ ಅನುಷ್ಠಾನಗೊಳಿಸುವಾಗ ಜನ ಪ್ರತಿನಿಧಿಗಳ ಹೆಸರು ಮತ್ತು ಪೋಟೊಗಳನ್ನು ಅಳವಡಿಸಬಾರದೆಂದು ನಿರ್ದೇಶನ ನೀಡಿದೆ.
ಹೆಸರು ತೆಗೆಯಲು ಒತ್ತಾಯಸಾರ್ವಜನಿಕರ ಹಣದಲ್ಲಿ ಕೈಗೊಂಡಿರುವ ಕಾಮಗಾರಿಗಳ ನಾಮಫಲಕದಲ್ಲಿ ಜನಪ್ರತಿನಿದಿಗಳ ಹೆಸರುನ್ನು ಹಾಕಿರುವುದು ಕಾನೂನು ಉಲ್ಲಂಘನೆಯಾಗಿದೆ, ಕೂಡಲೇ ನಗರದ ಅಡ್ಡ ರಸ್ತೆಗಳಿಗೆ ಅಳವಡಿಸಿರುವ ಶಾಸಕರು ಮತ್ತು ನಗರಸಭೆ ಸದಸ್ಯ ಹೆಸರನ್ನು ತೆರವುಗೊಳಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಪಿ.ದಯಾನಂದ್ ಒತ್ತಾಯಿಸಿದ್ದಾರೆ.
ಫಲಕದಲ್ಲಿ ಜನಪ್ರತಿನಿಧಿಗಳ ಹೆಸರುಕೆಜಿಫ್ ನಗರದಲ್ಲಿ ಈಗ ಶಾಸಕರೇ ಕಾನೂನು ಉಲ್ಲಂಘನೆ ಮಾಡಿರುವುದು ಸರಿಯಲ್ಲ, ಕಾಮಗಾರಿಗಳು ಹಾಗೂ ರಸ್ತೆ ನಾಮಫಲಕದಲ್ಲಿ ಶಾಸಕರ ಹೆಸರನ್ನು ಅಳವಡಿಸಿರುವುದು ಸರಿಯಲ್ಲ, ನಗರ ಮತ್ತು ಗ್ರಾಮೀಣ ಬಾಗದ ಕುಡಿವ ನೀರಿನ ಘಟಕಗಳು ಹಾಗೂ ಹೈಮಾಸ್ಟ್ ದೀಪಗಳ ಉದ್ಘಾಟಿಸಿ ಶಾಸಕರ ಹೆಸರನ್ನು ಹಾಕಿಸಿಕೊಂಡಿದ್ದಾರೆ, ಅಧಿಕಾರಿಗಳು ಕೂಡಲೇ ತರವುಗೊಳಿಸುವ ಕೆಲಸವನ್ನು ಮಾಡಬೇಕಿದೆ ಎಂದು ಮಾಜಿ ಶಾಸಕ ಎಸ್.ರಾಜೇಂದ್ರನ್ ಒತ್ತಾಯಿಸಿದ್ದಾರೆ.