ಜಲಜೀವನ್ ಮಿಷನ್‌: ರಸ್ತೆಗಳ ದುರಸ್ತಿಗೆ ಶಾಸಕ ಶರತ್‌ ಬಚ್ಚೇಗೌಡ ವಾರದ ಗಡುವು

KannadaprabhaNewsNetwork |  
Published : Jul 13, 2024, 01:33 AM IST
ಫೋಟೋ : 11 ಹೆಚ್ ಎಸ್ ಕೆ 1ಹೊಸಕೋಟೆ ನಗರದ ತಾಲೂಕು ಕಛೇರಿ ಆವರಣದಲ್ಲಿ ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನ ಸಭೆಯನ್ನು ಶಾಸಕ ಶರತ್ ಬಚ್ಚೇಗೌಡ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. | Kannada Prabha

ಸಾರಾಂಶ

ಗ್ರಾಮಗಳಲ್ಲಿ ಬಾಕಿ ಇರುವ ಜಲಜೀವನ್ ಕಾಮಗಾರಿ ಹಾಗೂ ಪೈಪ್‌ಲೈನ್‌ ಅಳವಡಿಕೆಗೆ ರಸ್ತೆಗಳನ್ನು ಡ್ರಿಲ್ ಮಾಡಿ ಹಾಗೆ ಬಿಟ್ಟಿರುವುದನ್ನು ಒಂದು ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಗಡುವು ನೀಡಿದರು. ಹೊಕೋಟೆ ತಾಲೂಕು ಪಂಚಾಯಿತಿ ಆವರಣದಲ್ಲಿ ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

-ತಾಪಂ ಆವರಣದಲ್ಲಿ ಜಲಜೀವನ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಶರತ್ ಸೂಚನೆಕನ್ನಡಪ್ರಭ ವಾರ್ತೆ ಹೊಸಕೋಟೆ

ಗ್ರಾಮಗಳಲ್ಲಿ ಬಾಕಿ ಇರುವ ಜಲಜೀವನ್ ಕಾಮಗಾರಿ ಹಾಗೂ ಪೈಪ್‌ಲೈನ್‌ ಅಳವಡಿಕೆಗೆ ರಸ್ತೆಗಳನ್ನು ಡ್ರಿಲ್ ಮಾಡಿ ಹಾಗೆ ಬಿಟ್ಟಿರುವುದನ್ನು ಒಂದು ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಗಡುವು ನೀಡಿದರು.

ನಗರದ ತಾಪಂ ಆವರಣದಲ್ಲಿ ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,

ದೊಡ್ಡಹರಳಗೆರೆ ಗ್ರಾಪಂ ವ್ಯಾಪ್ತಿಯ ತೆನೆಯೂರು, ನಗರೇನಹಳ್ಳಿ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿ ೬ ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭಿಸಿಲ್ಲ ಎಂದು ಗುತ್ತಿಗೆದಾರರ ವಿರುದ್ಧ ಕಿಡಿಕಾರಿದರು. ಪ್ರಮುಖವಾಗಿ ಶೇ.೯೦ರಷ್ಟು ಗುತ್ತಿಗೆದಾರರು ಸ್ಥಳೀಯರಲ್ಲದ ಕಾರಣ ಅವರು ಯಾರೂ ಸ್ಥಳೀಯ ನಾಯಕರ ಕೈಗೆ ಸಿಗುತ್ತಿಲ್ಲ. ಗ್ರಾಮಗಳಲ್ಲಿ ನಾವು ಹಾಕಿದ ಸಿಸಿ ರಸ್ತೆಗಳೆಲ್ಲಾ ನಿಮ್ಮ ಕಾಮಗಾರಿಗೆ ಅಗೆದು ಹಾಗೆಯೇ ಬಿಟ್ಟಿದ್ದೀರ. ಇದರಿಂದ ಗ್ರಾಮಗಳಲ್ಲಿ ಜನರ ಮಧ್ಯೆ ನಾವು ಹೋಗೋಕೆ ಆಗ್ತಿಲ್ಲ. ಇದರಿಂದ ನಿಮ್ಮ ಕಾಮಗಾರಿ ಗುಣಮಟ್ಟ ಅರ್ಥ ಆಗುತ್ತೆ ಎಂದರು.

ಸಭೆಯಲ್ಲಿ ಜಲಜೀವನ್‌ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ ಇದೆ ಎಂದು ಗುತ್ತಿಗೆದಾರರ ಉತ್ತರಕ್ಕೆ, ಲೇಬರ್‌, ಮ್ಯಾನ್ ಪವರ್ ಇಲ್ಲ ಅಂದ್ರೆ ಟೆಂಡರ್ ಏಕೆ ಹಾಕ್ತೀರಾ ಎಂದು ಶಾಸಕ ಶರತ್ ಗರಂ ಆದರು. ನಿಮ್ಮ ಕೈಲಿ ಆಗೋಲ್ಲ ಅಂದ್ರೆ ಹೇಳಿ ರೀ ಟೆಂಡರ್ ಮಾಡುವುದಾಗಿ ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ವಿಜಯ್ ಕುಮಾರ್, ತಾಪಂ ಇಒ ನಾರಾಯಣಸ್ವಾಮಿ, ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದಿವ್ಯಾ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ