ಪಲ್ಲಕ್ಕಿ ಹೊತ್ತು ಭಕ್ತಿಸೇವೆ ಸಲ್ಲಿಸಿದ ಶಾಸಕ ಸವದಿ

KannadaprabhaNewsNetwork |  
Published : Oct 22, 2023, 01:01 AM IST
ಶಾಸಕ ಲಕ್ಷ್ಮಣ ಸವದಿ  ಸ್ವಗ್ರಾಮ ನಾಗನೂರು ಪಿಕೆ ಗ್ರಾಮದಲ್ಲಿ  ಲಕ್ಷ್ಮಿ ದೇವಿಯ ಜಾತ್ರೆಯಲ್ಲಿ ಪಾಲ್ಗೊಂಡ ದೃಶ್ಯ. | Kannada Prabha

ಸಾರಾಂಶ

ನಾಗನೂರು ಜಾತ್ರೆಯಲ್ಲಿ ಶಾಸಕ ಸವದಿಯಿಂದ ಪಲ್ಲಕ್ಕಿ ಸೇವೆ

ಕನ್ನಡಪ್ರಭ ವಾರ್ತೆ ಅಥಣಿ ನಾವು ಬಾಲ್ಯದಿಂದ ಗ್ರಾಮದೇವತೆಯ ಜಾತ್ರೆಯಲ್ಲಿ ಭಾಗವಹಿಸುತ್ತ ಬಂದಿದ್ದೇವೆ. ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಮದವರು ಒಗ್ಗಟ್ಟಿನಿಂದ ನಾಡಹಬ್ಬ ದಸರಾ ಮಾದರಿಯಲ್ಲಿ ಗ್ರಾಮದೇವತೆಯ ಜಾತ್ರೆಯನ್ನು ಆಚರಿಸುತ್ತಿರುವುದು ಕಂಡು ನನಗೂ ಸಂತೋಷವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು . ಸ್ವಗ್ರಾಮ ನಾಗನೂರು ಪಿಕೆಯಲ್ಲಿ ನವರಾತ್ರಿ ಉತ್ಸವ ಹಾಗೂ ಗ್ರಾಮದೇವತೆ ಲಕ್ಷ್ಮೀದೇವಿ ಜಾತ್ರೆಯಲ್ಲಿ ಭಾಗವಹಿಸಿ ಪಲ್ಲಕ್ಕಿಗೆ ಹೆಗಲು ಕೊಟ್ಟು ತಮ್ಮ ಭಕ್ತಿ ಸೇವೆಗೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ವಿವಿಧ ಮೂಲೆಗಳಿಂದ ಶ್ರೇಷ್ಠ ಕಲಾವಿದರನ್ನು ಕರೆಸಿ ಗ್ರಾಮಸ್ಥರಿಗೆ ನಾಡಿನ ಸಂಸ್ಕೃತಿ ಮತ್ತು ಮನರಂಜನೆಯನ್ನು ಉಣಬಡಿಸುತ್ತಿದ್ದಾರೆ. ಗ್ರಾಮಸ್ಥರೆಲ್ಲರೂ ಭಾವೈಕ್ಯತೆಯಿಂದ ಈ ಜಾತ್ರೆಯಲ್ಲಿ ಪಾಲ್ಗೊಂಡಿರುವುದನ್ನು ಕಂಡು ನನಗೆ ಅತ್ಯಂತ ಸಂತೋಷವಾಗಿದೆ ಎಂದು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಗ್ರಾಮದೇವತೆ ಲಕ್ಷ್ಮೀದೇವಿಯ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿತು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’