ನ್ಯಾಯಬೆಲೆ ಅಂಗಡಿಕಾರರ ಹೋರಾಟಕ್ಕೆ ಶಾಸಕ ಸವದಿ ಬೆಂಬಲ

KannadaprabhaNewsNetwork |  
Published : Jul 11, 2025, 01:47 AM IST
ರಬಕವಿ-ಬನಹಟ್ಟಿ ತಹಶೀಲ್ದಾರರಿಗೆ ನ್ಯಾಯಬೆಲೆ ಅಂಗಡಿಕಾರರಿಂದ ಮನವಿ ಅರ್ಪಿಸುವ ಸಂದರ್ಭ ತೇರದಾಳ ಶಾಸಕ ಸಿದ್ದು ಸವದಿ ಬೆಂಬಲ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

೪ ತಿಂಗಳಿಂದ ಕಮೀಷನ್ ದೊರೆತಿಲ್ಲವೆಂದು ಆರೋಪಿಸಿ ನ್ಯಾಯಬೆಲೆ ಅಂಗಡಿಕಾರರು ನಡೆಸುತ್ತಿರುವ ಹೋರಾಟಕ್ಕೆ ತೇರದಾಳ ಶಾಸಕ ಸಿದ್ದು ಸವದಿ ಬೆಂಬಲಿಸಿ ತಹಸೀಲ್ದಾರಗೆ ಸಂಘಟನೆ ಪರವಾಗಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

೪ ತಿಂಗಳಿಂದ ಕಮೀಷನ್ ದೊರೆತಿಲ್ಲವೆಂದು ಆರೋಪಿಸಿ ನ್ಯಾಯಬೆಲೆ ಅಂಗಡಿಕಾರರು ನಡೆಸುತ್ತಿರುವ ಹೋರಾಟಕ್ಕೆ ತೇರದಾಳ ಶಾಸಕ ಸಿದ್ದು ಸವದಿ ಬೆಂಬಲಿಸಿ ತಹಸೀಲ್ದಾರಗೆ ಸಂಘಟನೆ ಪರವಾಗಿ ಮನವಿ ಸಲ್ಲಿಸಿದರು.

ಬಳಿಕ ಅವರಿ ಮಾತನಾಡಿ, ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸುವಲ್ಲಿ ವಿಫಲವಾಗುತ್ತಿದ್ದು, ಇವುಗಳ ಅನುಷ್ಠಾನದಿಂದ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ಮರಿಚೀಕೆಯಾಗಿದೆ. ಸರ್ಕಾರದ ವಿರುದ್ಧ ವಿಪಕ್ಷ ಮಾಡುವ ಕಾರ್ಯ ರಾಜ್ಯದ ಪ್ರತಿಯೊಬ್ಬ ಪ್ರಜೆ ಮಾಡುವಂತಾಗಿದ್ದು, ರಾಜ್ಯ ಅಧೋಗತಿಯತ್ತ ಸಾಗಿದೆಯೆಂದು ಸವದಿ ಕಳವಳ ವ್ಯಕ್ತಪಡಿಸಿದರು.

ನ್ಯಾಯಬೆಲೆ ಅಂಗಡಿಕಾರರ ಸಂಘದ ಅಧ್ಯಕ್ಷ ಗಜಾನಂದ ನಾಗರಾಳ ಮಾತನಾಡಿ, ಸರ್ಕಾರ ಸಮರ್ಪಕವಾಗಿ ಕಮೀಷನ್ ವಿತರಣೆ ಸಮರ್ಪಕವಾಗಿ ಮಾಡದೆ ೬ ತಿಂಗಳಿಗೊಮ್ಮೆ ಪಾವತಿ ಮಾಡುತ್ತಿದೆ. ಕಳೆದ ವರ್ಷದ ಫೆಬ್ರುವರಿ, ಮಾರ್ಚ್ ತಿಂಗಳ ಕಮೀಷನ್ ಇನ್ನೂ ಕೊಟ್ಟಿಲ್ಲ. ಇದರಿಂದ ನ್ಯಾಯಬೆಲೆ ಅಂಗಡಿ ನಿರ್ವಹಣೆಗೆ ಪರದಾಡುವ ಸ್ಥಿತಿಯಾಗಿದೆ ಎಂದು ದೂರಿದರು. ಮಹಾದೇವ ಗಿಡದಾನಪ್ಪಗೋಳ ಮಾತನಾಡಿ, ಐದು ವರ್ಷಗಳಿಂದ ಇ-ಕೆವೈಸಿ ಹಣ ಬಿಡುಗಡೆಗೊಳಿಸಿಲ್ಲ. ಸರ್ಕಾರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಅಗಸ್ಟ್ ತಿಂಗಳ ಪಡಿತರ ಎತ್ತುವಳಿ ಸ್ಥಗಿತಗೊಳಸಿಲಾಗುವುದೆಂದು ತಿಳಿಸಿದರು.

ಮಹಾದೇವ ಕಡಬಲ್ಲನವರ, ತುಳಸಪ್ಪ ಕುಂಚನೂರ, ಚಂದ್ರಶೇಖರ ಸಜ್ಜನವರ, ಆರೀಪ್ ಕೊಣ್ಣೂರ, ಸುಭಾಸ ಗಿರಿಸಾಗರ, ರವೀಂದ್ರ ಗೊಂದಿ, ಸಿದ್ದಪ್ಪ ರಾಮಾಜಿ, ಶಂಕರ ಬೆಳ್ಳೂರ, ಹಣಮಂತ ಕುಂದಗೋಳ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!