ಐಜಿಪಿ, ಎಸ್ಪಿ ವರ್ಗಾವಣೆಗೆ ಶಾಸಕ ಶಿವಗಂಗಾ ಬರೆದ ಪತ್ರ ವೈರಲ್‌!

KannadaprabhaNewsNetwork |  
Published : Oct 27, 2026, 01:30 AM IST
(ಫೋಟೊಬಿಕೆಟಿ2, ಶಾಸಕ ಉಮೇಶ್ ಮೇಟಿ   ಅವರು ಬಾಗಲಕೋಟೆ: ತಾಲೂಕಿನ ಸುತಗುಂಡಾರ ಗ್ರಾಮದ ಕರವೀರೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಪ್ರಜಾ ಸೇವಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು) | Kannada Prabha

ಸಾರಾಂಶ

MLA Sivaganga's letter for transfer of IGP, SP went viral!

-ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್ ದಂಧೆ ಹೆಚ್ಚಳ ಹಿನ್ನೆಲೆ ಪತ್ರಕನ್ನಡಪ್ರಭ ವಾರ್ತೆ ದಾವಣಗೆರೆ

ಮಟ್ಕಾ, ಇಸ್ಪೀಟ್‌ ದಂಧೆ ಹಿನ್ನೆಲೆಯಲ್ಲಿ ಐಜಿಪಿ, ಎಸ್ಪಿ ವರ್ಗಾವಣೆಗೆ ಮುಖ್ಯಮಂತ್ರಿ, ಗೃಹ ಮಂತ್ರಿ, ಡಿಜಿಪಿಗೆ ಸಿಎಂ ಆಪ್ತ, ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಬರೆದ ಪತ್ರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಮಟ್ಕಾ, ಇಸ್ಪೀಟ್ ದಂಧೆ ಜೋರಾದ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಸರ್ಕಾರ, ಇಲಾಖೆ ವರಿಷ್ಠರಿಗೆ ಪತ್ರ ಬರೆದು ಬೇಸರ ಹೊರ ಹಾಕುವ ಜೊತೆಗೆ ಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿರುವುದು ಈಗ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆಯುತ್ತಿದೆ.

ಕಂತೆ ಕಂತೆ ನೋಟು ಹಿಡಿದು ಜೂಜಾಟದಲ್ಲಿ ತೊಡಗಿರುವ ವೀಡಿಯೋ ವೈರಲ್ ಆಗಿದ್ದರೂ ಇಲಾಖೆ ಕ್ರಮ ಕೈಗೊಂಡಿಲ್ಲ. ಆಡಳಿತ ಪಕ್ಷದ ಶಾಸಕರು ಹೇಳಿದ್ದರೂ ಮಟ್ಕಾ, ಇಸ್ಪೀಟ್ ದಂಧೆಗೆ ಮಟ್ಟ ಹಾಕುವ ಕೆಲಸವಾಗಿಲ್ಲವೆಂಬ ಮಾತು ಕೇಳಿ ಬರುತ್ತಿವೆ.

ಮಟ್ಕಾ, ಇಸ್ಪೀಟ್ ಜೂಜಾಟದ ಬಗ್ಗೆ ಐಜಿಪಿ ಎನ್.ಸತೀಶಕುಮಾರ, ಎಸ್ಪಿ ಡಾ.ಎಚ್.ಟಿ.ಶೇಖರ್ ವಿರುದ್ಧ ಸ್ವತಃ ತಾವೇ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಶಾಸಕ ಬಸವರಾಜ ವಿ.ಶಿವಗಂಗಾ ಸರ್ಕಾರಕ್ಕೆ ಬರೆದಿದ್ದಾರೆನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಸಭೆ ವಿಫಲ: ಪರಿಹಾರವಿಲ್ಲ
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ₹215 ಕೋಟಿ ಅಭಿವೃದ್ಧಿ ಯೋಜನೆ!