ರಾಮ ಜನ್ಮಭೂಮಿಯಲ್ಲಿ ರಾಯರ ಮಠ ನಿರ್ಮಾಣಕ್ಕೆ ಭೂಮಿ ಪೂಜೆ

KannadaprabhaNewsNetwork |  
Published : Oct 27, 2026, 01:30 AM IST
26ಕೆಪಿಆರ್‌ಸಿಆರ್‌ 02ಮತ್ತು03  | Kannada Prabha

ಸಾರಾಂಶ

ರಾಮನ ಜನ್ಮಭೂಮಿಯಲ್ಲಿ ಶ್ರೀಗುರುರಾಯರ ಮಠ ನಿರ್ಮಾಣ ಮಾಡಬೇಕು ಎನ್ನುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಬಹುದಿನಗಳ ಸಂಕಲ್ವವು ಕಡೆಗೂ ಕಾರ್ಯಪೂರ ತಾಳಿದ್ದು, ಅಯೋಧ್ಯೆಯಲ್ಲಿ ಶ್ರೀಮಂತ್ರಾಲಯದ ಶಾಖಾ ಮಠ ನಿರ್ಮಾಣಕ್ಕೆ ಕಟ್ಟಡ ಭೂಮಿ ಪೂಜೆ ನೆರವೇರಿಸುವುದರ ಮುಖಾಂತರ ಶ್ರೀಗಳು ಸೋಮವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಅಯೋಧ್ಯೆಗೆ ಭೇಟಿ ನೀಡಿದ ಶ್ರೀಗಳು ಅಯೋಧ್ಯೆಯಲ್ಲಿ ಶ್ರೀಮಠ ನಿರ್ಮಾಣಕ್ಕಾಗಿ ಗುರುತಿಸಲಾದ ಎರಡು ಸ್ಥಳಗಳಲ್ಲಿ ವಿಧಿವಿಧಾನಗಳೊಂದಿಗೆ ಭೂಮಿ ಪೂಜೆ ನೆರವೇರಿಸಿದರು.

ನಂತರ ಅಯೋಧ್ಯೆಯ ಶ್ರೀರಾಮನ ಮಂದಿರಕ್ಕೆ ತೆರಳಿ ದರ್ಶನ ಪಡೆದು, ಸಮಸ್ತ ಲೋಕದ ಕಲ್ಯಾಣಕ್ಕಾಗಿ ಶ್ರೀರಾಮ ದೇವರಲ್ಲಿ ಪ್ರಾರ್ಥಿಸಿದರು.

ಈ ವೇಳೆ ಆಶೀರ್ವಾದ ನೀಡಿದ ಶ್ರೀಗಳು, ಶ್ರೀರಾಮನ ನೆಲೆಯಲ್ಲಿ ಮಠದ ನಿರ್ಮಾಣವು ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಈ ಮಠದ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ, ಅಯೋಧ್ಯೆಗೆ ಭೇಟಿ ನೀಡುವ ಶ್ರೀರಾಯರ ಭಕ್ತಾದಿಗಳಿಗೆ ಮಠದಲ್ಲಿ ವಸತಿ, ಪ್ರಸಾದ ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಿದ್ದು, ಇಷ್ಟೇ ಅಲ್ಲದೇ ಶ್ರೀ ರಾಯರ ಮಠ ಮತ್ತು ಈ ಪವಿತ್ರ ಭೂಮಿಯ ನಡುವಿನ ಆಧ್ಯಾತ್ಮಿಕ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಯಾಗಲಿದೆ ಎಂದು ಶ್ರೀಗಳು ನುಡಿದರು.

ಈ ಸಂದರ್ಭದಲ್ಲಿ ರಾಜಾ ಅಪ್ರಮೇಯಾಚಾರ್ಯರು, ಕರಣಂ ಪ್ರಕಾಶ, ಬೆಂಗಳೂರಿನ ಸುಬ್ಬನರಸಿಂಹ, ಅಯೋಧ್ಯೆಯ ಶ್ರೀರಾಮ ದೇವಾಲಯದ ಪ್ರಧಾನ ಅರ್ಚಕರು ಹಾಗೂ ಶ್ರೀ ಮಠದ ಭಕ್ತರು ಮತ್ತು ಶಿಷ್ಯ ವರ್ಗದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಸಭೆ ವಿಫಲ: ಪರಿಹಾರವಿಲ್ಲ
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ₹215 ಕೋಟಿ ಅಭಿವೃದ್ಧಿ ಯೋಜನೆ!