ಹಟ್ಟಿಚಿನ್ನದಗಣಿ: ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯವು ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಮಾನವೀಯ ಮೌಲ್ಯಗಳಿಗೆ ಮಹತ್ವದ ಕೊಡುಗೆ ನೀಡಿದೆ. ಅವರ ಜೀವನ ಮತ್ತು ಸಾಹಿತ್ಯವು ಸಮಾಜಕ್ಕೆ ಸತ್ಯ, ಧರ್ಮ, ನ್ಯಾಯ, ಸಮಾನತೆ ಹಾಗೂ ಮಾನವೀಯತೆಯ ಸಂದೇಶವನ್ನು ಸಾರುತ್ತದೆ ಎಂದು ಹಟ್ಟಿಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಕೋಶಾಧ್ಯಕ್ಷ ಸಿದ್ಧಪ್ಪ ಮುಂಡರಗಿ ಹೇಳಿದರು.ಹಟ್ಟಿ ಪಟ್ಟಣದ ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಆಚರಿಸಲಾದ ಜಯಂತಿ ಕಾರ್ಯಕ್ರಮದಲ್ಲಿ ಮಹಷಿಗಳ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಮಹರ್ಷಿ ಅವರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಇಡೀ ಮನುಕುಲಕ್ಕೆ ಬೇಕಾದ ಮಹಾನ್ ಸಂತರಾಗಿದ್ದಾರೆ ಎಂದರು. ಶಿವರಾಜ ಗೌಡ ಗುರಿಕಾರ ಮಾತನಾಡಿದರು.
ಪ್ರಮುಖರಾದ ಯಂಕೋಬ್ ಮಿಯ್ಯಾಪೂರ್, ಗ್ಯಾನಪ್ಪ, ಹನುಮಂತ ಗೌಡ, ಅಮರೇಶ ಬುದ್ಧಿನ್ನಿ, ನಾಗರಾಜ್ ನಾಯಕ, ಗುಂಡಪ್ಪ ಗೌಡ ಮಾಸ್ಟರ್, ಬಾಬು ಸಾಗರ, ಕುಪ್ಪಣ್ಣ, ಯಂಕೋಬ್ ಪೂಜಾರಿ, ಬಸವರಾಜ ಗೌಡ ಪೋ ಪಾಟೀಲ್, ದಂಡಪ್ಪ, ಮಡಿವಾಳಪ್ಪ ಗೌಡ, ಜಡಿಯಪ್ಪ ಜಾಲಹಳ್ಳಿ, ರಾಮಣ್ಣ ಬೆಂಕಿ, ರಂಗನಾಥ, ರಂಗಪ್ಪ ಬುದ್ದಿನಿ, ಮಾಲಪ್ಪ ಗಣೆಕಲ್, ರಮೇಶ ಗಣೆಕಲ್, ಮಂಜುನಾಥ್, ಬುಜ್ಜ ನಾಯಕ, ಸುರೇಶ ಗೌಡ ಗುರಿಕಾರ, ಸುರೇಶ ನಾಯಕ, ಸಾಬಣ್ಣ, ರೆಬಲ್, ಚಂದ್ರಕಾಂತ, ಪಂಪಣ್ಣ ಇದ್ದರು.