ದಾಬಸ್‍ಪೇಟೆ: ಬಿರುಗಾಳಿ ಸಹಿತ ಮಳೆಯಿಂದ ಎಕರೆ ಬಾಳೆ ತೋಟ ನಾಶವಾಗಿ ಸಂಕಷ್ಟಕ್ಕೀಡಾಗಿದ್ದ ರೈತನ ಮನೆಗೆ ಶಾಸಕ ಎನ್.ಶ್ರೀನಿವಾಸ್ ಭೇಟಿ ನೀಡಿ 1 ಲಕ್ಷ ರು. ಹಾಗೂ ಎನ್‍ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು 50 ಸಾವಿರ ರು. ವೈಯಕ್ತಿಕ ನೆರವು ನೀಡಿದರು.ಕಳೆದ ಒಂದು ವಾರದ ಹಿಂದೆ ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯ ಹಕ್ಕಿನಾಳು ಗ್ರಾಮದ ರೈತ ಕೃಷ್ಣಪ್ಪ ಚಿನ್ನಾಭರಣ ಅಡವಿಟ್ಟು ತಂದೆಯ 3 ಎಕರೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದರು. ಫಸಲು ಕೈ ಸೇರುವ ಹಂತದಲ್ಲಿತ್ತು. ಆದರೆ, ಬಿರುಗಾಳಿ ಸಹಿತ ಮಳೆಗೆ ಬೆಳೆ ಸಂಪೂರ್ಣ ನಾಶವಾಗಿತ್ತು. ಘಟನಾ ಹಿನ್ನೆಲೆ ಹಕ್ಕಿನಾಳು ಗ್ರಾಮದ ಕೃಷ್ಣಪ್ಪ ಶಾಸಕ ಎನ್.ಶ್ರೀನಿವಾಸ್ ಮನೆಗೆ ಭೇಟಿ ನೀಡಿ ರೈತ ಕೃಷ್ಣಪ್ಪನ ಕಷ್ಟ ಆಲಿಸಿದರು.ಇದೇ ವೇಳೆ ಸ್ಥಳೀಯ ಮುಖಂಡ ಚಿಕ್ಕಹನುಮೇಗೌಡ 25 ಸಾವಿರ, ಸೋಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಟ್ಟೆಕೆರೆ ಬಾಬು 10 ಸಾವಿರ, ಹನುಮಂತರಾಜು 10 ಸಾವಿರ ಸೇರಿದಂತೆ ಇತರರು ಆರ್ಥಿಕ ನೆರವು ನೀಡಿದರು.ಈ ವೇಳೆ ನಗರಸಭೆ ಅಧ್ಯಕ್ಷ ಎನ್.ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಟ್ಟೆಕೆರೆ ಬಾಬು, ಕುಮುದ್ವತಿ ಸಂಸ್ಥೆ ಮಾಲೀಕ ಚಿಕ್ಕಹನುಮೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಗಂಗರಂಗಯ್ಯ, ಮುಖಂಡರಾದ ಹನುಮಂತರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪ್ರೇಮ, ವಾಣಿ ಮತ್ತಿತರರು ಉಪಸ್ಥಿತರಿದ್ದರು.ಪೋಟೋ 4 : ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯ ಹಕ್ಕಿನಾಳು ಗ್ರಾಮದಲ್ಲಿ ಮಳೆಯಿಂದ ಬಾಳೆ ಬೆಳೆ ನಾಶವಾಗಿ ಸಂಕಷ್ಟಕ್ಕೀಡಾಗಿರುವ ರೈತ ಕೃಷ್ಣಪ್ಪ ಮನೆಗೆ ಶಾಸಕ ಎನ್.ಶ್ರೀನಿವಾಸ್ ಭೇಟಿ ಆರ್ಥಿಕ ನೆರವು ನೀಡಿದರು.