ಕಾಮಗಾರಿಗೆ ಶಾಸಕ ಸುರೇಶ್‌ಗೌಡ ಚಾಲನೆ

KannadaprabhaNewsNetwork |  
Published : Jun 18, 2026, 01:15 AM IST
9 | Kannada Prabha

ಸಾರಾಂಶ

ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗೂಳೂರು ಹೋಬಳಿಯ ದೊಡ್ಡಸಾರಂಗಿಪಾಳ್ಯ ಗ್ರಾಮದಲ್ಲಿ ಬುಧವಾರ ಶಾಸಕ ಬಿ. ಸುರೇಶ್‌ಗೌಡರು ತುಮಕೂರು ನಗರಾಭಿವೃದ್ಧಿ ಇಲಾಖೆಯಿಂದ ಅಂದಾಜು ಮೊತ್ತ 21 ಲಕ್ಷ ರು.ಗಳ ಅನುದಾನದಲ್ಲಿ ಸಿ.ಸಿ ರಸ್ತೆ ಹಾಗೂ ಸಿ.ಸಿ ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗೂಳೂರು ಹೋಬಳಿಯ ದೊಡ್ಡಸಾರಂಗಿಪಾಳ್ಯ ಗ್ರಾಮದಲ್ಲಿ ಬುಧವಾರ ಶಾಸಕ ಬಿ. ಸುರೇಶ್‌ಗೌಡರು ತುಮಕೂರು ನಗರಾಭಿವೃದ್ಧಿ ಇಲಾಖೆಯಿಂದ ಅಂದಾಜು ಮೊತ್ತ 21 ಲಕ್ಷ ರು.ಗಳ ಅನುದಾನದಲ್ಲಿ ಸಿ.ಸಿ ರಸ್ತೆ ಹಾಗೂ ಸಿ.ಸಿ ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.ಇದೇ ವೇಳೆ ಶಾಸಕರು,ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯಇಲಾಖೆಯಿಂದ ಅಂದಾಜು ಮೊತ್ತ 1.31 ಕೋಟಿ ರು..ಅಂದಾಜು ವೆಚ್ಚದಲ್ಲಿ ಜಲ ಜೀವನ್ ಮಿಷನ್‌ಯೋಜನೆಯಡಿಯಲ್ಲಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಯ ಭೂಮಿ ಪೂಜೆ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಗೂಳೂರು ಶಿವಕುಮಾರ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಹೆತ್ತೇನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ದೊಡ್ಡಸಾರಂಗಿ ಶಂಕರಣ್ಣ, ಮುಖಂಡರಾದ ಜಯಂತ್‌ಗೌಡ, ರಮೇಶ್, ಮಂಜುಳ, ವೀರಭದ್ರಸ್ವಾಮಿ, ನಟರಾಜ್,ಗಂಗಣ್ಣ, ಮಂಜುಳ, ಉಮಾಶಂಕರ್, ಗೋಪಿ, ಗುತ್ತಿಗೆದಾರರಾದ, ಚರಣ್, ಮಹದೇವಣ್ಣ ಚಿಕ್ಕಹನುಮಂತಯ್ಯಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಧಿಕಾರಿಗಳಿಂದ ರೈತರಿಂದ ಅರ್ಜಿಗಳ ಸ್ವೀಕಾರ
ಉದ್ಯೋಗ ಹುಡುಕುವವರಾಗದೆ ನೀಡುವವರಾಗಿ