- ಮಾ.11ರಂದು ಬೆಂಗಳೂರಿನಲ್ಲಿ ಪ್ರತಿಭಟನೆ
ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸುವ ಮೂಲಕ ಬಗೆಹರಿಸುತ್ತೇನೆ ಹಾಗೂ ಜಿಲ್ಲಾ ಸಂಘದ ಕಟ್ಟಡಕ್ಕೆ ₹10 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.
ತಾಲೂಕಿನ ಆಲದಗುಡ್ಡೆ ಸಮೀಪ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಮಹಿಳಾ ವಿದ್ಯುತ್ ಗುತ್ತಿಗೆದಾರರ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಪುರುಷ ಹಾಗೂ ಮಹಿಳಾ ಗುತ್ತಿಗೆದಾರರು ಸಂಘಟನಾತ್ಮಕ ಶಕ್ತಿ ಹೊಂದಿರಬೇಕು. ಆಗ ಸಂಘದ ಚಟುವಟಿಕೆ ಮುನ್ನೆಲೆಗೆ ಬರುವ ಜತೆಗೆ ಸಂಘದ ಬೇಡಿಕೆ ಈಡೇರಿಸಲು ಸಾಧ್ಯ. ಸಂಘ ಸಾರ್ವಜನಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರ ಕಲ್ಪಿಸಲಾಗುವುದು ಎಂದರು.ಆಧುನಿಕತೆ ಬೆಳೆದಂತೆ ವೃತ್ತಿ ಬದಲಾವಣೆಗೊಂಡಿದೆ. ಅಲ್ಲದೇ ವಿಶೇಷವಾಗಿ 400ಕ್ಕೂ ಮಹಿಳಾ ಗುತ್ತಿಗೆದಾರರು ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಆಶ್ಚರ್ಯ ಎಂದು ತಿಳಿಸಿದರು.
ರಾಜ್ಯದ ರೈತರು ನಿರ್ಮಿಸಿರುವ ಕೋಳಿ, ಕುರಿ ಸಾಕಾರಿಕೆ, ಹೈನುಗಾರಿಕೆ ಹಾಗೂ ತೋಟದ ಮನೆಗಳಿಗೆ ಹಾಗೂ ಇತರೆ ಕೃಷಿ ಚಟುವಟಿಕೆಗಳ ವಿದ್ಯುತ್ ಸಂಪರ್ಕಕ್ಕೆ ವಾಸ ದೃಢೀಕರಣ ಪತ್ರದಿಂದ ವಿನಾಯಿತಿ ನೀಡಬೇಕು. ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ನೀಡದೇ ತೊಂದರೆಯಾದ ಕೈಗಾರಿಕಾ ವಿದ್ಯುತ್ ಸಂಪರ್ಕಕ್ಕೆ ಓಸಿಯಿಂದ ವಿನಾಯಿ ನೀಡಲು ಆಗ್ರಹಿಸಿ ಮಾ.11ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಸಿದ್ದರಾಗಿದ್ದೇವೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಕೆಎಸ್‌ಎಲ್‌ಇಸಿಎನ ರಾಜ್ಯ ಗೌರವ ಉಪಾಧ್ಯಕ್ಷ ಹರೀಶ್ ರಾಚಪ್ಪಗೌಡ ಪಾಟೀಲ್, ವೀರಶೆಟ್ಟಿ ಶಿವಬಸಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಬಾಬು, ಜಂಟಿ ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ್, ಸಂಘಟನಾ ಕಾರ್ಯದರ್ಶಿಗಳಾದ ಎಂ.ರಮೇಶ್, ಜಿ.ರಾಮಯ್ಯ, ಮಹಮ್ಮದ್ ಎಜಾಜ್, ಮುಖಂಡರಾದ ಬೆವಿನಗುಡ್ಡ ಯ್ಯ, ಕೆ.ಚಂದ್ರಬಾಬು, ಪಾಂಡು, ಶೈಲಶ್ರೀ, ಮಮತಾ, ಕೆ.ಎಸ್.ವೀಣಾ ಇದ್ದರು.
- ಡಾ.ಸಿ.ಟಿ.ರವಿ, ಸದಸ್ಯರು, ವಿಧಾನಪರಿಷತ್ ( ಪೋಟೊ)ಫೋಟೋ