ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಶಾಸಕ ವಜ್ಜಲ್ ಅಡ್ಡಗಾಲು: ಹೂಲಗೇರಿ

KannadaprabhaNewsNetwork |  
Published : Nov 27, 2026, 01:30 AM IST
 | Kannada Prabha

ಸಾರಾಂಶ

ಲಿಂಗಸುಗೂರು ಪಟ್ಟಣದ ಹೊರ ವಲಯದ ನಾರಾಯಣಪುರ ಆಣೆಕಟ್ಟೆ ರಸ್ತೆಯ ಬದಿಯಲ್ಲಿ ನಿರ್ಮಾಣಗೊಂಡಿರುವ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಶಾಸಕ ಮಾನಪ್ಪ ವಜ್ಜಲ್ ಅಡ್ಡಗಾಲು ಆಗಿದ್ದಾರೆ ಎಂದು ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಡಿ.ಎಸ್.ಹೂಲಗೇರಿ ನೇರ ಆರೋಪ ಮಾಡಿದರು.

- ಕ್ಷೇತ್ರದ ಅಭಿವೃದ್ಧಿ ಕುಂಠಿತ: ಶಾಸಕರ ವಿರುದ್ಧ ವಾಗ್ದಾಳಿಕನ್ನಡಪ್ರಭ ವಾರ್ತೆ ಲಿಂಗಸುಗೂರು

ಲಿಂಗಸುಗೂರು ಪಟ್ಟಣದ ಹೊರ ವಲಯದ ನಾರಾಯಣಪುರ ಆಣೆಕಟ್ಟೆ ರಸ್ತೆಯ ಬದಿಯಲ್ಲಿ ನಿರ್ಮಾಣಗೊಂಡಿರುವ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಶಾಸಕ ಮಾನಪ್ಪ ವಜ್ಜಲ್ ಅಡ್ಡಗಾಲು ಆಗಿದ್ದಾರೆ ಎಂದು ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಡಿ.ಎಸ್.ಹೂಲಗೇರಿ ನೇರ ಆರೋಪ ಮಾಡಿದರು.

ಪಟ್ಟಣ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಅತ್ಯಂತ ಕಳಪೆ ಕಾಮಗಾರಿಗಳ ಮಾಡುವ ಶಾಸಕ ವಜ್ಜಲ್‌ರ ಕಾಮಗಾರಿ ನೋಡಲು ಅಸಹ್ಯವಾಗುತ್ತದೆ. 30 ರಿಂದ 35 ಕೋಟಿ ಖರ್ಚು ಮಾಡಿ ಜನರ ಆರೋಗ್ಯದ ಹಿತದೃಷ್ಠೀಯಿಂದ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಅಸ್ಪತ್ರೆ ಆರಂಭಕ್ಕೆ ಸಂಬಂಧಿಸಿದ ಸಚಿವರು ದಿನಾಂಕ ನೀಡಿದ್ದರು. ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ಶಾಸಕರಿಗೆ ಇರುತ್ತದೆ ಆದರೆ ಸಚಿವರು, ಅಧಿಕಾರಿಗಳು ಉದ್ಘಾಟನೆ ಮಾಡದೇ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಜನರ ಸೇವೆಗೆ ಆಸ್ಪತ್ರೆ ಆರಂಭಿಸಬೇಕೇ ಹೊರತು ವಿನಾಃಕಾರಣ ಜನರಿಂದ ಸೌಲತ್ತು ದೂರ ಆಗದಂತೆ ಶಾಸಕ ವಜ್ಜಲ್ ರವರು ನೋಡಿಕೊಳ್ಳಬೇಕೆಂದು ತಿಳಿಸಿದರು.

ಬೆಲೆ ಏರಿಕೆಗೆ ಮೂಲ ಕಾರಣ ಪೆಟ್ರೋಲ್, ಡಿಸೇಲ್ ದರ ಏರಿಕೆ ಪ್ರಮುಖ ಕಾರಣವಾಗಿದೆ, ಇದನ್ನು ಅರಿಯ ಶಾಸಕ ಮಾನಪ್ಪ ವಜ್ಜಲ್ ಹಾಗೂ ಬಿಜೆಪಿ ಪಕ್ಷದಿಂದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ, ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ನೇರ ಕಾರಣವಾಗಿದೆ. ಆದರೆ ಬಿಜೆಪಿ ಹಾಗೂ ಶಾಸಕ ವಜ್ಜಲ್ ರವರು ಪೂರ್ವಾಪರ ಆರಿತುಕೊಳ್ಳದೇ ಹೋರಾಟ ಮಾಡಿರುವುದು ಖಂಡನೀಯ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ಮಹ್ಮದ್ ರಫಿ, ವಿಶ್ವಕ್ರಾಂತಿ, ಸಂಜೀವಪ್ಪ ಹುನಕುಂಟಿ, ಉಮೇಶ ಐಹೊಳೆ ಸೇರಿದಂತೆ ಇದ್ದರು.

-----

26ಕೆಪಿಎಲ್‌ಎನ್‌ಜಿ01 : ಮಾಜಿ ಶಾಸಕ ಡಿ.ಎಸ್.ಹೂಲಗೇರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಟ್ಕಳದಲ್ಲಿ ಇಂದಿನಿಂದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ
ಸಂವಿಧಾನ ನೀಡಿದ ಹಕ್ಕು, ಕರ್ತವ್ಯ ನಿಭಾಯಿಸುವುದು ನಮ್ಮೆಲ್ಲರ ಹೊಣೆ: ನ್ಯಾ. ಬಸವರಾಜ