ಯಶ್ಪಾಲ್ ರನ್ನು ಕೂಡಲೇ ಬಂಧಿಸಿ: ಸುಂದರ ಮಾಸ್ಟರ್

KannadaprabhaNewsNetwork |  
Published : Jul 31, 2026, 02:45 AM IST
29ಸುಂದರ್ | Kannada Prabha

ಸಾರಾಂಶ

ಶಾಸಕ ಯಶ್ಪಾಲ್ ಸುವರ್ಣ ಮಾಡಿರುವ ಭಾಷಣ ಭಯೋತ್ಪಾದನೆಗೆ ಸಮಾನದ ಕೃತ್ಯವಾಗಿದೆ, ಆದ್ದರಿಂದ ಅವರನ್ನು ತಕ್ಷಣ ಬಂಧಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಆಗ್ರಹಿಸಿದ್ದಾರೆ.

ಉಡುಪಿ: ಶಾಸಕ ಯಶ್ಪಾಲ್ ಸುವರ್ಣ ಮಾಡಿರುವ ಭಾಷಣ ಭಯೋತ್ಪಾದನೆಗೆ ಸಮಾನದ ಕೃತ್ಯವಾಗಿದೆ, ಆದ್ದರಿಂದ ಅವರನ್ನು ತಕ್ಷಣ ಬಂಧಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಆಗ್ರಹಿಸಿದ್ದಾರೆ.ಬಿಜೆಪಿಯ ಪ್ರತಿಭಟನೆಯಲ್ಲಿ ಯಶ್‌ಪಾಲ್ ಸುವರ್ಣ ಅವರು ಭಾಷಣ, ಒಬ್ಬ ಜನಪ್ರತಿನಿಧಿಯಾಗಿ ಗೂಂಡಾ ವರ್ತನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಕ್ಕುದಾದ ಲಕ್ಷಣಗಳಲ್ಲ. ರಾಹುಲ್ ಗಾಂಧಿಯವರ ವಂಶವನ್ನು ಧ್ವಂಸ ಮಾಡುತ್ತೇವೆ. ಪ್ರಕಾಶ್ ರಾಜ್ ಅವರನ್ನು ಅರಬ್ಬಿ ಸಮುದ್ರಕ್ಕೆ ಹಾಕಿ ಮೀನಿಗೆ ಆಹಾರವಾಗುವಂತೆ ಮಾಡುತ್ತೇವೆ ಎನ್ನುವ ಮೂಲಕ ಅವರು ಕೊಲೆಯ ಸಂಚನ್ನು ರೂಪಿಸುವ ಸೂಚನೆ ನೀಡಿದ್ದಾರೆ. ಆದ್ದರಿಂದ ಅವರನ್ನು ಕೂಡಲೇ ಬಂಧಿಸಬೇಕು ಎಂದವರು ಆಗ್ರಹಿಸಿದ್ದಾರೆ. ಅವರು ಉಡುಪಿಯನ್ನು ಇನ್ನೊಂದು ಬಿಹಾರ ಅಥವಾ ಉತ್ತರಪ್ರದೇಶ ಮಾಡಲು ಹೊರಟಿದ್ದಾರೆ. ನೀಟ್ ಹಗರಣದ ವಿರುದ್ಧ ಪ್ರತಿಭಟಿಸಿದ ವಿಧ್ಯಾರ್ಥಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ, ಆದರೇ ಉಡುಪಿಯ ವಿದ್ಯಾರ್ಥಿಗಳು ಅನಕ್ಷರಸ್ಥರಲ್ಲಾ, ಎಲ್ಲವನ್ನೂ ತಿಳಿದುಕೊಳ್ಳುವ ಶಕ್ತಿ ಅವರಿಗಿದೆ, ಈ ದೇಶದ ಭವಿಷ್ಯದ ಪ್ರಜೆಗಳಾದ ವಿಧ್ಯಾರ್ಥಿಗಳು ಅವರ ಮಾತನ್ನು ಅರ್ಥಮಾಡಿಕೊಂಡು ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠಕಲಿಸಬೇಕು ಎಂದು ಸುಂದರ್ ಮಾಸ್ತರ್ ಕರೆ ನೀಡಿದ್ದಾರೆ. ಮಣಿಪಾಲದ ಡ್ರಗ್ಸ್ ದಂಧೆಯ ಸಂಪೂರ್ಣ ಮಾಹಿತಿ ತಮ್ಮಲ್ಲಿದೆ ಎಂದೂ ಹೇಳಿರುವ ಯಶ್ಪಾಲ್ ಸುವರ್ಣ ಅವರನ್ನು ಕೂಡಲೇ ಬಂಧಿಸಿ ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯಬೇಕು ಎಂದವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ

ಮುಂದಿನ ದಿನಗಳಲ್ಲಿ ಉಡುಪಿಯ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡಿದರೆ ಸಂವಿಧಾನ ಪರ ಸಂಘಟನೆಗಳು ಅನಿರ್ದಿಷ್ಟಾವದಿ ಚಳುವಳಿ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆತ್ಮವಿಶ್ವಾಸ, ತಾಳ್ಮೆ ಇದ್ದವರು ಶ್ರೇಷ್ಠ ಗುರು: ಆರ್. ನಾರಾಯಣ ಶೆಣೈ
ವಿದ್ಯಾರ್ಥಿಗಳು ಜಾಗೃತಿ ರಾಯಭಾರಿಗಳಾಗಬೇಕು: ಖಾದರ್‌