ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲು ಶಾಸಕ ಯಶ್ಪಾಲ್ ಸುವರ್ಣ ಆಗ್ರಹ

KannadaprabhaNewsNetwork |  
Published : Aug 24, 2025, 02:00 AM IST
ಯಶ್‌ಪಾಲ್ | Kannada Prabha

ಸಾರಾಂಶ

2023ರಿಂದ ಈವರೆಗೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದ ಕಾರಣ ರಾಜ್ಯದ ಅರ್ಹ ಕುಟುಂಬಗಳು ಪಡಿತರ ಚೀಟಿಯಿಲ್ಲದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ತಕ್ಷಣ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಇಲಾಖಾ ಸಚಿವರಿಗೆ ಶಾಸಕ ಯಶ್ಪಾಲ್ ಸುವರ್ಣ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಉಡುಪಿ

2023ರಿಂದ ಈವರೆಗೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದ ಕಾರಣ ರಾಜ್ಯದ ಅರ್ಹ ಕುಟುಂಬಗಳು ಪಡಿತರ ಚೀಟಿಯಿಲ್ಲದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ತಕ್ಷಣ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಇಲಾಖಾ ಸಚಿವರಿಗೆ ಶಾಸಕ ಯಶ್ಪಾಲ್ ಸುವರ್ಣ ಗಮನ ಸೆಳೆದರು.ಉಡುಪಿ ಜಿಲ್ಲಾಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಲಭ್ಯವಂತಾಗಲು ತುರ್ತಾಗಿ ಕ್ರಮ ವಹಿಸುವಂತೆ ಅಧಿವೇಶನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರಲ್ಲಿ ಆಗ್ರಹಿಸಿದ್ದು, ನೀರು ಸರಬರಾಜು ಮತ್ತು ನೈರ್ಮಲೀಕರಣದ ಭಾಗವಾದ ಎಸ್.ಟಿಪಿ ಮತ್ತು ಇ.ಟಿ.ಪಿ ಕೆಲಸವೂ ಸೇರಿದಂತೆ ಮೂಲ ವಿನ್ಯಾಸದ ಮಾರ್ಪಡಿನಿಂದ ಹಾಗೂ ಜಿ.ಎಸ್.ಟಿ ವ್ಯತ್ಯಾಸದ ಮೊತ್ತವೂ ಸೇರಿದಂತೆ ತಾಂತ್ರಿಕ ಸಲಹಾ ಸಮಿತಿಯ ಸೂಚನೆಯ ಪ್ರಕಾರ ಅನುದಾನ ಕಾಯ್ದಿರಿಸಲು ಕ್ರಮ ವಹಿಸುವುದು ಹಾಗೂ ಪಿಠೋಪಕರಣಗಳು ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿಗೆ ಮತ್ತು ಅಗತ್ಯ ಹೆಚ್ಚುವರಿ ವೈದ್ಯರು ಮತ್ತು ವೈದ್ಯಕೇತರ ಸಿಬ್ಬಂದಿಗಳ ಮಂಜೂರಾತಿಗೆ ಶೀಘ್ರ ಅನುಮೋದನೆ ನೀಡುವಂತೆ ಆಗ್ರಹಿಸಿದರು.ಆರೋಗ್ಯ ಸಚಿವರು, ತಾಂತ್ರಿಕ ಸಲಹಾ ಸಮಿತಿಯ ವರದಿಯಂತೆ ಕ್ರಿಯಾಯೋಜನೆಯಲ್ಲಿ ಅನುದಾನ ಕಾಯ್ದಿರಿಸಿ, ಕ್ರಮ ವಹಿಸುವುದಾಗಿ ತಿಳಿಸಿದರು.ಇಂಧನ ಇಲಾಖೆಯ ಸಿಬ್ಬಂದಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡುವ ಉದ್ದೇಶಕ್ಕೆ ಸರಕಾರದ ವಂತಿಕೆಯಾಗಿ ನೀಡುತ್ತಿದ್ದ ಸುಮಾರು ವಾರ್ಷಿಕ 2800 ಕೋಟಿ ರೂಪಾಯಿಗಳನ್ನು ವಿದ್ಯುತ್ ಬಳಕೆದಾರರ ಮಾಸಿಕ ಬಿಲ್ಗಳಿಂದ ವಸೂಲಿ ಮಾಡದೆ, ಹಿಂದಿನಂತೆ ಸರಕಾರ ಭರಿಸಲು ಸರ್ಕಾರ ಕ್ರಮ ವಹಿಸುವಂತೆ ಕೋರಿದರು.ನೆರೆ ಸಂತ್ರಸ್ತರ ಪುನರ್ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ರಾಜೀವ ಗಾಂಧಿ ವಸತಿ ನಿಗಮದಿಂದ ಅನುದಾನ ಮಂಜೂರಾಗಿ ವರ್ಷಗಳೇ ಕಳೆದರೂ, ಈವರೆಗೆ ಮಂಜೂರಾದ ಸಂಪೂರ್ಣ ಅನುದಾನ ಬಿಡುಗಡೆಯಾಗದಿರುವ ಕುರಿತು ಸರ್ಕಾರದ ಗಮನ ಸೆಳೆದರು.ಕರಾವಳಿ ಜಿಲ್ಲೆಗಳಲ್ಲಿ ನಿರ್ಮಾಣ ವಲಯಕ್ಕೆ ಅವಶ್ಯಕವಾಗಿರುವ ಕೆಂಪು ಕಲ್ಲು ಮತ್ತು ಮರಳಿನ ಅಲಭ್ಯತೆಯಿಂದ ಮನೆ-ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿದ್ದು, ನಿರ್ಮಾಣ ವಲಯ, ಕಟ್ಟಡ ಸಾಮಾಗ್ರಿ, ಸಾಗಾಟ ಹಾಗೂ ಪೂರಕ ಉದ್ಯೋಗ ವಲಯಗಳು ಸಂಕಷ್ಟಕ್ಕೊಳಗಾಗಿರುವುದ, ಜಿಲ್ಲೆಯ ಆರ್ಥಿಕತೆಗೂ ದೊಡ್ಡ ಹೊಡೆತ ಬಿದ್ದಿದ್ದು, ಮರಳು ಹಾಗೂ ಕೆಂಪು ಕಲ್ಲಿನ ಪೂರೈಕೆಯನ್ನು ಹಿಂದಿನಂತೆ ಲಭ್ಯಗೊಳಿಸಲು ಸರಕಾರದ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!