ಹೆಳವರ ಕಾಲೋನಿಗೆ ಸಂಪರ್ಕಿಸುವ ರಸ್ತೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕಾಮಗಾರಿಗೆ ಭೂಮಿ ಪೂಜೆ
ಕನ್ನಡಪ್ರಭ ವಾರ್ತೆ, ಕಡೂರುಕ್ಷೇತ್ರದ ಅತಿ ಹಿಂದುಳಿದ ಪ್ರದೇಶವಾದ ಎಮ್ಮೆದೊಡ್ಡಿ ಭಾಗಕ್ಕೆ ರಸ್ತೆ ಸಂಪರ್ಕದ ಸಮಸ್ಯೆ ಕಂಡ ಶಾಸಕ ಕೆ.ಎಸ್.ಆನಂದ್ ಗ್ರಾಮೀಣ ರಸ್ತೆಗಳನ್ನು ಗುರುತಿಸಿ ಕಾಮಗಾರಿಗೆ ಅನುದಾನ ನೀಡಿರುತ್ತಾರೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ. ಟಿ ಕಲ್ಲೇಶ್ ತಿಳಿಸಿದರು.ತಾಲೂಕಿನ ಎಚ್.ರಾಂಪುರ ಗ್ರಾಪಂ ವ್ಯಾಪ್ತಿಯ ರಾಂಪುರದಿಂದ ಹರಳಘಟ್ಟ ಮೂಲಕ ಹೆಳವರ ಕಾಲೋನಿಗೆ ಸಂಪರ್ಕಿಸುವ ರಸ್ತೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಎಚ್.ರಾಂಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುವ ಜನರು ಪಟ್ಟಣದ ಸಂಪರ್ಕದ ಸಮಸ್ಯೆ ನಿವಾರಿಸುವಂತೆ ಗ್ರಾಮಸ್ಥರು ಮಾಡಿದ ಮನವಿಗೆ ಶಾಸಕರು ಸ್ಪಂಧಿಸಿ ರಸ್ತೆ ನಿರ್ಮಾಣಕ್ಕೆ ₹50 ಲಕ್ಷ ರು.ಗಳನ್ನು ಮಂಜೂರು ಮಾಡಿಸಿದ್ದು ಕಾಲೋನಿಯ ತನಕ ರಸ್ತೆ ನಿರ್ಮಿಸಲು ಇನ್ನು ಹೆಚ್ಚಿನ ಹಣದ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ರಸ್ತೆ ನಿರ್ಮಿಸಿಕೊಡಲಿದ್ದಾರೆ ಎಂಬ ಭರವಸೆ ನೀಡಿದರು.ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ ಮಾತನಾಡಿ ಈ ಭಾಗ ಹಿಂದುಳಿದ ಪ್ರದೇಶವಾಗಿದ್ದು ಈ ಹಿಂದೆ ಹೆಚ್ಚಿನ ಅನುದಾನ ಇಲ್ಲದೆ ರಸ್ತೆಗಳು ದುರಸ್ತಿ ಕಾಣದೆ ಇದ್ದವು ಶಾಸಕ ಆನಂದ್ ಅವರು ಹೆಚ್ಚಿನ ಮುತುವರ್ಜಿ ವಹಿಸಿ ಬಡವರು, ಹಿಂದುಳಿದವರು ವಾಸಿಸುವ ಗ್ರಾಮಗಳನ್ನು ಗುರುತಿಸಿ ರಸ್ತೆ ನಿರ್ಮಿಸಲು ಅನುದಾನ ನೀಡಿರುತ್ತಾರೆ. ಈಗಾಗಲೆ ಗ್ರಾಮ ಪಂಚಾಯಿತಿ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದ್ದು ಇದಕ್ಕೂ ಸಹ ಅನುದಾನವನ್ನು ಶಾಸಕರು ನೀಡಿದ್ದರು. ಗ್ರಾಮೀಣ ಭಾಗಗಳ ರಸ್ತೆ, ಕುಡಿಯುವ ನೀರು ಮುಂತಾದ ಸೌಲಭ್ಯಗಳನ್ನು ಇವರ ಅವಧಿಯಲ್ಲಿ ಕಾಣುತ್ತಿವೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಂತಮ್ಮ ಬಸವರಾಜು, ಉಪಾಧ್ಯಕ್ಷ ಶ್ರೀನಿವಾಸ್ ಡಿ. ಸದಸ್ಯರಾದ ಸುಧಾಕಾಂತ್, ಆಶಮ್ಮ, ಲಕ್ಷ್ಮಮ್ಮ, ಕವಿತಾ, ಸರಸ್ವತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ, ಮಾಜಿ ಅಧ್ಯಕ್ಷ ರಂಗಸ್ವಾಮಿ, ಬಸವರಾಜ್, ಅನಿತಾ ರಂಗಸ್ವಾಮಿ, ಗ್ರಾಮದ ಮುಖಂಡ ತಿಮ್ಮೇಗೌಡರು, ಶಿವರುದ್ರಪ್ಪ, ಮನು, ಲಿಂಗಪ್ಪ, ಸೋಮೇಶ್ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಇದ್ದರು.22ಕೆಕೆಡಿಯು2ಕಡೂರು ತಾಲೂಕು ಎಚ್.ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ ಹೆಳವರ ಕಾಲೋನಿ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಟಿ.ಕಲ್ಲೇಶ್ ಭೂಮಿ ಪೂಜೆ ನೆರವೇರಿಸಿದರು. ದಾಸಯ್ಯನ ಗುತ್ತಿ ಚಂದ್ರಪ್ಪ, ಗ್ರಾ.ಪಂ.ಅಧ್ಯಕ್ಷೆ ಕಾಂತಮ್ಮ ಬಸವರಾಜು ಮತ್ತಿತರರು ಇದ್ದರು.