ಕುರುಬಹಳ್ಳಿ, ಪೂವನಹಳ್ಳಿಯಲ್ಲಿ ಶಾಸಕರಿಂದ ದಿನಸಿ ಉಪಕೇಂದ್ರ ಉದ್ಘಾಟನೆ

KannadaprabhaNewsNetwork |  
Published : Jun 01, 2025, 02:26 AM IST
31ಕೆಎಂಎನ್ ಡಿ15 | Kannada Prabha

ಸಾರಾಂಶ

ಅನೇಕ ಬಾರಿ ಎರಡು ಗ್ರಾಮಗಳಿಗೆ ಉಪ ಕೇಂದ್ರಗಳ ಅವಶ್ಯಕತೆ ಇದೆ ಎಂದು ಮನವಿ ಮಾಡುತ್ತಿದ್ದರು. ಇದಕ್ಕೆ ಸ್ಪಂದಿಸಿ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳ ಜೊತೆಗೆ ಚರ್ಚಿಸಿ ಕೊನೆಗೆ ಗ್ರಾಮಸ್ಥರ ಅನುಕೂಲಕ್ಕಾಗಿ ಉಪಕೇಂದ್ರ ತೆರೆದು ಸ್ಥಳೀಯ ಆಡಳಿತ ಮಂಡಳಿ, ಗ್ರಾಮದ ಮುಖಂಡರು ಜೊತೆಗೆ ಉದ್ಘಾಟಿಸಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಗಂಜೀಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕುರುಬಹಳ್ಳಿ ಹಾಗೂ ಪೂವನಹಳ್ಳಿಗಳಲ್ಲಿ ದಿನಸಿ ಉಪ ಕೇಂದ್ರವನ್ನು ಶಾಸಕ ಎಚ್.ಟಿ.ಮಂಜು ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು, ಹಲವು ವರ್ಷಗಳಿಂದ ಎರಡೂ ಗ್ರಾಮಗಳ ಜನರು ಮಳೆ, ಚಳಿ, ಗಾಳಿ ಎನ್ನದೇ ದೂರದ ಗಂಜಿಗೆರೆ ಗ್ರಾಮಕ್ಕೆ ಆಗಮಿಸಿ ಸೊಸೈಟಿಯಲ್ಲಿ ನೀಡುವ ಅಕ್ಕಿ, ಸೀಮೆಎಣ್ಣೆ, ಗೋಧಿ, ರಾಗಿ ತೆಗೆದುಕೊಂಡು ಹೋಗಲು ಕಷ್ಟ ಪಡಬೇಕಾಗಿತ್ತು ಎಂದರು.

ಗಂಜೀಗೆರೆ ಸೊಸೈಟಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಮ್ಮ ಪಕ್ಷದ ಮುಖಂಡ ನಾಗೇಶ್ ಅವರು ನನಗೆ ಅನೇಕ ಬಾರಿ ಎರಡು ಗ್ರಾಮಗಳಿಗೆ ಉಪ ಕೇಂದ್ರಗಳ ಅವಶ್ಯಕತೆ ಇದೆ ಎಂದು ಮನವಿ ಮಾಡುತ್ತಿದ್ದರು. ಇದಕ್ಕೆ ಸ್ಪಂದಿಸಿ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳ ಜೊತೆಗೆ ಚರ್ಚಿಸಿ ಕೊನೆಗೆ ಗ್ರಾಮಸ್ಥರ ಅನುಕೂಲಕ್ಕಾಗಿ ಉಪಕೇಂದ್ರ ತೆರೆದು ಸ್ಥಳೀಯ ಆಡಳಿತ ಮಂಡಳಿ, ಗ್ರಾಮದ ಮುಖಂಡರು ಜೊತೆಗೆ ಉದ್ಘಾಟಿಸಿದ್ದೇನೆ ಎಂದರು.

ಸಹಕಾರ ಸಂಘಗಳು ಪಕ್ಷ ರಾಜಕಾರಣದಿಂದ ದೂರವಿದ್ದು, ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಈ ಭಾಗದ ಜನತೆ ತಮಗೆ ಸಿಕ್ಕಿರುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಈ ವೇಳೆ ಸೊಸೈಟಿ ಅಧ್ಯಕ್ಷ ಕುರುಬಹಳ್ಳಿ ನಾಗೇಶ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಜಿಪಂ ಮಾಜಿ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಗ್ರಾಪಂ ಅಧ್ಯಕ್ಷ ಮುದುಗೆರೆ ಪರಮೇಶ್, ಸುಧಾಶಿವರಾಜು, ಪರಮೇಶ್, ಆನಂದ್, ಶಂಕರ್ ನಾಗ್, ರಾಮು, ನಂಜುಂಡಪ್ಪ, ಕಟ್ಟಹಳ್ಳಿ ಗಂಗಾಧರ್, ಮಾವಿನಕೆರೆ ಗಂಗಾಧರ್, ಜವರಪ್ಪ, ಜಯಮ್ಮ ದೇವೇಗೌಡ, ಡೇರಿ ಅಧ್ಯಕ್ಷ ರೀತಾ ಜಯರಾಂ, ರೀಟಾ ಶಿವಲೋಕೇಶ್, ಗ್ರಾಪಂ ಮಾಜಿ ಸದಸ್ಯ ಲೋಕೇಶ್, ಶಿವರಾಮ್, ಬೋರೇಗೌಡ, ದೇವೇಗೌಡ, ಡೇರಿ ಸ್ವಾಮಣ್ಣ, ಕೆ.ಲೋಕೇಶ್, ನಿಂಗರಾಜು, ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಎಂ.ಆರ್.ನಾಗೇಶ್, ಧನಂಜಯ್ ಸೇರಿದಂತೆ ಹಲವು ಗ್ರಾಮಸ್ಥರು ಇದ್ದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು