ರೋಲ್ ಕಾಲ್ ಪತ್ರಕರ್ತರ ಮೇಲೆ ಶಾಸಕ ಎಸ್ ಆರ್ ಶ್ರೀನಿವಾಸ್ ಕಿಡಿ

KannadaprabhaNewsNetwork | Published : Jan 8, 2025 12:17 AM

ಸಾರಾಂಶ

ತಾಲೂಕಿನಲ್ಲಿ ರೋಲ್ ಕಾಲ್ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು ಪತ್ರಕರ್ತರ ಸಂಘ ರೋಲ್ ಕಾಲ್ ಪತ್ರಕರ್ತರಿಗೆ ಕಡಿವಾಣ ಹಾಕಬೇಕೆಂದು ಶಾಸಕ ಎಸ್ ಆರ್ ಶ್ರೀನಿವಾಸ್ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನಲ್ಲಿ ರೋಲ್ ಕಾಲ್ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು ಪತ್ರಕರ್ತರ ಸಂಘ ರೋಲ್ ಕಾಲ್ ಪತ್ರಕರ್ತರಿಗೆ ಕಡಿವಾಣ ಹಾಕಬೇಕೆಂದು ಶಾಸಕ ಎಸ್ ಆರ್ ಶ್ರೀನಿವಾಸ್ ಹರಿಹಾಯ್ದರು.ಪಟ್ಟಣದಲ್ಲಿ 3.47 ಕೋಟಿ ರುಗಳ ವಿವಿಧ ಅನುದಾನದಲ್ಲಿ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರುಪತ್ರಕರ್ತರ ಹೆಸರಿನಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ನೀಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಯಾವುದೇ ಸಣ್ಣ ಕಪ್ಪು ಚುಕ್ಕೆ ಇಲ್ಲ ನಿಷ್ಠಾವಂತ ರಾಜಕಾರಣಿ. ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ ಬಾಯಿ ಬಿಟ್ಟರೆ ಸುಳ್ಳು ಹೇಳುವ ಕೆಲಸ ಅವರದು ಎಂದರು ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡಲಾಗಿದ್ದು ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯಿಂದಲೂ ಹೊರೆಯಾಗಿಲ್ಲ. ಈ ಹಿಂದೆಯೂ ಕೂಡ ಆರ್ ಅಶೋಕ್ ಅವರ ಬಿಜೆಪಿ ಸರ್ಕಾರದಲ್ಲಿ ಬಿಜೆಪಿ ನಾಲ್ಕು ಬಾರಿ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಪೆಟ್ರೋಲ್ ದರ ಬಸ್ಸಿನ ಬಿಡಿ ಭಾಗಗಳು ದರ ಹಾಗೂ ನೌಕರರ ವೇತನ ನೀಡಬೇಕಾಗಿರುವುದರಿಂದ ಬಸ್ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ವಿರೋಧ ಪಕ್ಷದವರು ವಿನಾಕಾರಣ ಇದನ್ನು ರಾಜಕೀಯವಾಗಿ ಎಳೆದ ತರುತ್ತಿದ್ದಾರೆ ಎಂದು ವಿರುದ್ಧ ಹರಿಹಾಯ್ದರು.

ನನ್ನ 25 ವರ್ಷದ ರಾಜಕೀಯದಲ್ಲಿ ದಲಿತರಿಗೆ ಯಾವುದೇ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತಿದ್ದೇನೆ ಅವರ ಮೇಲೆ ದೌರ್ಜನ್ಯ ನಡೆದ ಪಕ್ಷದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು. ಗುಬ್ಬಿ ಪಟ್ಟಣದಲ್ಲಿ ಎಲ್ಲೆಲ್ಲಿ ಕೆಲಸ ಆಗಬೇಕಾಗಿದ್ಯೋ ಅಲ್ಲಲ್ಲಿ ಕೆಲಸ ಬೇಗನೆ ಆಗುತ್ತದೆ ಹಾಗೆಯೆ ಸವಿತ ಸಮಾಜ, ನೇಕಾರರ ಸಮಾಜ ಈಗಾಗಲೇ ಹಣ ಬಿಡುಗಡೆಯಾಗಿದೆ ಎಂದರು. 18 ಕೋಮಿಗೆ ಸೇರಿದ ಗ್ರಾಮ ದೇವತೆ ದೇವಸ್ಥಾದ ಹೊಸ ಕಟ್ಟಡಕ್ಕೆ ನಿರ್ಮಾಣವಾಗುತ್ತಿರುವ 10 ಲಕ್ಷ ನೀಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಜಿಪಂ ಮಾಜಿ ಸದಸ್ಯ ಜಿ ಎಚ್ ಜಗನ್ನಾಥ್, ಪಪಂ ಸದಸ್ಯರು ಸೇರಿದಂತೆ ಮುಖಂಡರು ಹಾಜರಿದ್ದರು.

Share this article