ಪಿಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಾಸಕರು, ಬೆಂಬಲಿಗರ ಪ್ರತಿಭಟನೆ

KannadaprabhaNewsNetwork |  
Published : Nov 12, 2025, 02:45 AM IST
ಪೋಟೊ-೧೧ ಎಸ್.ಎಚ್.ಟಿ. ೨ಕೆ- ಲಂಬಾಣಿ ವ್ಯಕ್ತಿ ಮೇಲೆ ಪಿಎಸ್‌ಐ ಈರಪ್ಪ ರಿತ್ತಿ ಮನಸೋ ಇಚ್ಚೆ ಅರೆಬೆತ್ತಲೆ ಮಾಡಿ ಥಳಿಸಿರುವ ಕ್ರಮ ಖಂಡಿಸಿ ಮಪಿಎಸ್‌ಐ ಮೇಲೆ ಕ್ರಮ ಕೈಗೊಳ್ಳುವಂತೆ ಠಾಣೆ ಎದುರು ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಬಂಜಾರ ವ್ಯಕ್ತಿಯ ಮೇಲೆ ಅಮಾನುಷ ಹಲ್ಲೆ ಮಾಡಿದ ಪಿಎಸ್‌ಐ ಮೇಲೆ ಪ್ರಕರಣ ದಾಖಲಿಸಿಕೊಳ್ಳದೇ ತನಿಖೆ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ. ಬೆಂಬಲಿಗರೆಲ್ಲರೂ ಸೇರಿ ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ಕೈಗೊಳ್ಳುವುದಾಗಿ ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.

ಶಿರಹಟ್ಟಿ: ಇಸ್ಪೀಟ್ ಆಟದಲ್ಲಿ ತೊಡಗಿದ್ದಾನೆ ಎಂಬ ಕಾರಣ ಮುಂದಿಟ್ಟುಕೊಂಡು ತಾಲೂಕಿನ ದೇವಿಹಾಳ ಗ್ರಾಮದ ೪೦ ವರ್ಷದ ಯುವಕನ ಮೇಲೆ ಪಿಎಸ್‌ಐ ಅಮಾನುಷವಾಗಿ ಅರೆಬೆತ್ತಲೆ ಮಾಡಿ ಹೊಡೆದಿದ್ದು, ಪಿಎಸ್‌ಐ ಕ್ರಮಕ್ಕೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಬೆಂಬಲಿಗರು ಶಿರಹಟ್ಟಿ ಪೊಲೀಸ್ ಠಾಣೆ ಎದುರು ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದರು.ಭಾನುವಾರವೇ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಸೋಮೇಶ ಬೂದೆಪ್ಪ ಲಮಾಣಿ ಎಂಬಾತನ ಪತ್ನಿ ಗಂಗವ್ವ ಲಮಾಣಿ ಹಾಗೂ ಬಂಜಾರ ಸಮಾಜದ ಮುಖಂಡರು ದೂರು ನೀಡಲು ಬಂದರೂ ಪಡೆಯದೇ ಕಳಿಸಿದ್ದಾರೆ ಎಂದು ಶಾಸಕರು ದೂರಿದರು.

ಪಿಎಸ್‌ಐಯಿಂದ ಹೊಡೆಸಿಕೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾನೆ. ತಕ್ಷಣ ಕ್ರಮ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ.ಪಿಎಸ್‌ಐ ವಿರುದ್ದ ಕಾನೂನು ಕ್ರಮ ಆಗಲೇಬೇಕು. ಮೂರು ಜನ ಪೊಲೀಸ್ ಸಿಬ್ಬಂದಿಗಳು ವ್ಯಕ್ತಿಯ ಖಾಸಗಿ ಅಂಗಾಂಗಗಳಿಗೆ ಹೊಡೆದಿದ್ದಾರೆ. ಪಿಎಸ್‌ಐ ಮೇಲೆ ಪ್ರಕರಣ ದಾಖಲಿಸಲು ಮುಂದಾದರೆ ಸಿಪಿಐ ಪರಿಶೀಲನೆ ಮಾಡಿ ಪಿಎಸ್‌ಐ ವಿರುದ್ಧ ಎಫ್‌ಐಆರ್ ಮಾಡುವುದಾಗಿ ಇಲ್ಲವೇ ಅಮಾನತು ಮಾಡುವುದಾಗಿ ಹೇಳಿದ್ದರು. ಬಂಜಾರ ವ್ಯಕ್ತಿಯ ಮೇಲೆ ಅಮಾನುಷ ಹಲ್ಲೆ ಮಾಡಿದ ಪಿಎಸ್‌ಐ ಮೇಲೆ ಪ್ರಕರಣ ದಾಖಲಿಸಿಕೊಳ್ಳದೇ ತನಿಖೆ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ. ಬೆಂಬಲಿಗರೆಲ್ಲರೂ ಸೇರಿ ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ಕೈಗೊಳ್ಳುವುದಾಗಿ ತಿಳಿಸಿದರು.ಪ್ರತಿಭಟನೆ ವೇಳೆ ಮುಖಂಡರಾದ ಜಾನು ಲಮಾಣಿ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಶಂಕರ ಮರಾಠೆ, ಪುಂಡಲೀಕ ಲಮಾಣಿ, ಪರಶುರಾಮ ಡೊಂಕಬಳ್ಳಿ, ರಾಮಣ್ಣ ಕಂಬಳಿ, ಫಕ್ಕಿರೇಶ ಕರಿಗಾರ, ಶ್ರೀನಿವಾಸ ಬಾರಬರ, ಸಂತೋಷ ತೋಡೇಕಾರ, ಅಪ್ಪಣ್ಣ ಕುಬೇರ, ವಿಠಲ ಬಿಡವೆ, ಅಕ್ಬರ್ ಯಾದಗಿರಿ ಇತರರು ಇದ್ದರು.

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ