ಅಧಿಕಾರಿಗಳ ಕಾರ್ಯ ವೈಖರಿಗೆ ಶಾಸಕರ ಬೇಸರ

KannadaprabhaNewsNetwork |  
Published : Dec 01, 2025, 01:00 AM IST
ಮಧುಗಿರಿಯ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಶಕ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.  | Kannada Prabha

ಸಾರಾಂಶ

ಶಾಲಾ ಮಕ್ಕಳಿಗೆ ವಿರ್ದ್ಯಾರ್ಥಿ ವೇತನ ಕೊಡಿಸುವ ಅಂಕಿ-ಸಂಖ್ಯೆಯಲ್ಲಿ ಲೋಪದೋಶ ಎಸಗಿದ್ದು, ಎಲ್ಲ ವರ್ಗದ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರಕಿಸಿ ಕೊಡುವಲ್ಲಿ ಸರಿಯಾದ ಮಾಹಿತಿ ನೀಡದ ಶಿಕ್ಷಣ ಇಲಾಖೆಯ ಬಿಇಓ,ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಶಾಸಕ ಕೆ.ಎನ್‌.ರಾಜಣ್ಣ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಶಾಲಾ ಮಕ್ಕಳಿಗೆ ವಿರ್ದ್ಯಾರ್ಥಿ ವೇತನ ಕೊಡಿಸುವ ಅಂಕಿ-ಸಂಖ್ಯೆಯಲ್ಲಿ ಲೋಪದೋಶ ಎಸಗಿದ್ದು, ಎಲ್ಲ ವರ್ಗದ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರಕಿಸಿ ಕೊಡುವಲ್ಲಿ ಸರಿಯಾದ ಮಾಹಿತಿ ನೀಡದ ಶಿಕ್ಷಣ ಇಲಾಖೆಯ ಬಿಇಓ,ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಶಾಸಕ ಕೆ.ಎನ್‌.ರಾಜಣ್ಣ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಸ್ಕಾಲರ್ ಶೀಪ್ ಪಡೆಯಲು ಎಷ್ಟು ಜನ ಮಕ್ಕಳಿದ್ದಾರೆ ಎಂದು ಬಿಇಓ,ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಒಬ್ಬೂಬ್ಬರು ಒಂದೊಂದು ಅಂಕಿ -ಸಂಖ್ಯೆ ನೀಡಿದಾಗ ಶಾಸಕ ಕೆ.ಎನ್.ರಾಜಣ್ಣ ಬಡ ಮಕ್ಕಳಿಗೆ ಸರ್ಕಾರದಿಂದ ಬರುವ ವಿದ್ಯಾರ್ಥಿ ವೇತನ ಕೊಡಿಸಲು ವಿಳಂಬ ಏಕೆ ಎಲ್ಲರೂ ಏನು ಮಾಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಶಿರಾ, ಬಡವನಹಳ್ಳಿ, ಮಧುಗಿರಿ ಹಾಗೂ ಭೈರೇನಹಳ್ಳಿ ನ್ಯಾಷನಲ್ ಹೈವೇ ಪೋರ್ ಲೈನ್ ರಸ್ತೆ ಸರ್ವೆ ಕಾರ್ಯ ಮುಗಿದಿದ್ದು,ಕಾಮಗಾರಿ ಕೈಗೊಳ್ಳಬೇಕಿದೆ ಈ ವಿಚಾರದಲ್ಲಿ ತೋಟಗಾರಿಕೆ,ಕೃಷಿ,ಅರಣ್ಯ ಇಲಾಖೆಯ ಸಹಕಾರ ಬೇಕು ಎಂದು ಹೆದ್ದಾರಿ ಎಇಇ ಲಕ್ಷ್ಮೀಕಾಂತ್ ಸಭೆಗೆ ತಿಳಿಸಿ , ರೈತರಿಗೆ ಸರಿಯಾಗಿ ಪರಿಹಾರ ಕೊಟ್ಟು ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ರಾಜಣ್ಣ ಸೂಚಿಸಿದರು.

ಬೇಸಿಗೆ ಸಮೀಪಿಸುತ್ತಿದ್ದು,ತಾಲೂಕಿನಲ್ಲಿ ಕುಡಿವ ನೀರು ಮೇವಿಗೆ, ಸಮಸ್ಯೆ ಉಲ್ಬಣವಾಗದಂತೆ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಿ, ಸಮಸ್ಯೆ ಎದುರಾಗುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಿವಾರಿಸಲು ಮುಂದಾಗಿ , ಬೇಸಿಗೆಯಲ್ಲಿ ರೈತರಿಗೆ ತೊಂದರೆಯಾಗದಂತೆ ವಿದ್ಯುತ್‌ ಪೂರೈಸಲು ತಿಳಿಸಿದ್ದು, ರೈತರಿಗೆ ನಿರಂತರ ವಿದ್ಯುತ್, ನೀಡಲು ತಾಲೂಕಿನ ಕವಣದಾಲ,ಬ್ರಹ್ಮದೇವರಹಳ್ಳಿ ಗಳಲ್ಲಿ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ಬೆಸ್ಕಾಂ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ರಾಜಣ್ಣ ತಾಕೀತು ಮಾಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪೆಂಡಿಗ್ ಇರುವ ಅರ್ಜಿಗಳನ್ನು ಬೇಗ ಮುಗಿಸಿ ಗುಂಡ್ಲಹಳ್ಳಿ ,ಸೋಮಲಾರ ಗ್ರಾಮಗಳಿಗೆ ಹೊಸ ಪಡಿತರ ಕೇಂದ್ರ ಪ್ರಾರಂಭಿಸಿ ಇವುಗಳ ಜತೆಗೆ ವಿಎಸ್‌ಎಸ್‌ಎನ್‌ಗಳಲ್ಲಿ ವಿತರಿಸುಲ ಕ್ರಮ ಕೈಗೊಳ್ಳಿ ಎಂದರು.

ಅಬಕಾರಿ,ಕೃಷಿ,ತೋಟಗಾರಿಕೆ, ರೇಷ್ಮೆ, ಸಬ್ ರಿಜಸ್ಟಾರ್, ಕಂದಾಯ, ಪುರಸಭೆ, ಎತ್ತಿನಹೊಳೆ, ಅರಣ್ಯ ಇನ್ನೂ ಹಲವು ಇಲಾಖೆಗಳಿಂದ ಮಾಹಿತಿ ಪಡೆದು ಸಾರ್ವಜನಿಕರಿಗೆ, ರೈತರಿಗೆ, ಕೃಷಿಕರಿಗೆ, ಕೂಲಿಕಾರ್ಮಿಕರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸಕಾಲದಲ್ಲಿ ಅರ್ಹ ಬಡ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಕಾಳಾಜಿ ವಹಿಸಿ ಕೆಲಸ ಮಾಡಬೇಕು ಎಂದು ಶಾಸಕ ರಾಜಣ್ಣ ತಾಕೀತು ಮಾಡಿದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಸಂಜೀವಯ್ಯ,ಎಸಿ ಗೋಟೂರು ಶಿವಪ್ಪ ತಹಸೀಲ್ದಾರ್ ಎಚ್.ಶ್ರೀನಿವಾಸ್,ತಾಪಂ ಇಓ ಲಕ್ಷ್ಮಣ್‌, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್‌ ಬಾಬು, ಟಿಎಪಿಸಿಎಂ ಅಧ್ಯಕ್ಷ ಮಲ್ಲಿಕಾರ್ಜುನಯ್ಯ,ಗ್ಯಾರಂಟಿ ಸಮಿತಿ ಅಧ್ಯಕ್ಷ ಚೌಡಪ್ಪ, ಡಿವೈಎಸ್ಪಿ ಮಂಜುನಾಥ್ ಕೆಡಿಪಿ ಸದಸ್ಯರಾದ ಹೊಸಕೆರೆ ದೇವರಾಜು,ಜಯಲಕ್ಷ್ಮೀ, ಗೌಡ ,ಇಇ ಹನುಮಂತರಾವ್, ಅರಣ್ಯ ಇಲಾಖೆ ಸುರೇಶ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ
ರಾಜ್ಯ ರಾಜಕೀಯ ವಿಚಾರ : ಹೊಸ ಬಾಂಬ್ ಸಿಡಿಸಿದ ಎಚ್.ಡಿ.ಕುಮಾರಸ್ವಾಮಿ