ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮತದಾನ ಬೆಳಗ್ಗೆ ಏಳು ಗಂಟೆಗೆ ಆರಂಭವಾದಾಗ ಮಂದವಾಗಿತ್ತು. 10 ಗಂಟೆ ನಂತರ ತುಸು ಚುರುಕಾಯಿತಾದಾರೂ ಮಧ್ಯಾಹ್ನ ಮತ್ತೆ ನೀರಸವಾಯಿತು. ಎರಡು ಗಂಟೆ ನಂತರ ಮತ್ತೆ ಚುರುಕಾಯಿತು. ಶಿಕ್ಷಕರು ಸರತಿಯಲ್ಲಿ ನಿಂತು ಮತ ಚಲಾಯಿಸುವ ದೃಶ್ಯ ಸಾಮಾನ್ಯವಾಗಿತ್ತು. ಬೇರೆ ತಾಲೂಕಿಗಿಂತ ಹೊಳಲ್ಕೆರೆಯಲ್ಲಿ ಹೆಚ್ಚು ಮತದಾನವಾಗಿದೆ.
ಮೊಳಕಾಲ್ಮೂರು ತಾಲೂಕಿನ ತಾಲೂಕು ಆಡಳಿತ ಸೌಧದ ಮತಗಟ್ಟೆಯಲ್ಲಿ 222 ಪುರುಷರು ಹಾಗೂ 46 ಮಹಿಳಾ ಮತದಾರರು ಸೇರಿದಂತೆ ಒಟ್ಟು 268 ಶಿಕ್ಷಕ ಮತದಾರರಿದ್ದು, ಇದರಲ್ಲಿ 214 ಪುರುಷರು 44 ಮಹಿಳೆಯರು ಸೇರಿ ಒಟ್ಟು 258 ಶಿಕ್ಷಕ ಮತದಾರರು ಮತ ಚಲಾಯಿಸಿದ್ದಾರೆ. ಶೇ.96.27ರಷ್ಟು ಮತದಾನವಾಗಿದೆ.ಚಳ್ಳಕೆರೆ ತಾಲೂಕಿನಲ್ಲಿ 754 ಪುರುಷರು ಹಾಗೂ 265 ಮಹಿಳಾ ಮತದಾರರು ಸೇರಿದಂತೆ ಒಟ್ಟು 1019 ಶಿಕ್ಷಕ ಮತದಾರರು ಇದ್ದು, ಇದರಲ್ಲಿ 710 ಪುರುಷರು 253 ಮಹಿಳೆಯರು ಸೇರಿ ಒಟ್ಟು 963 ಶಿಕ್ಷಕ ಮತದಾರರು ಮತ ಚಲಾಯಿಸಿದ್ದಾರೆ. ಶೇ.94.50ರಷ್ಟು ಮತದಾನವಾಗಿದೆ.
ಹಿರಿಯೂರು ತಾಲೂಕಿನ ತಾಲೂಕು ಆಡಳಿತ ಸೌಧದ ಮತಗಟ್ಟೆಯಲ್ಲಿ 601 ಪುರುಷರು ಹಾಗೂ 264 ಮಹಿಳಾ ಮತದಾರರು ಸೇರಿದಂತೆ ಒಟ್ಟು 865 ಶಿಕ್ಷಕ ಮತದಾರರು ಇದ್ದು, ಇದರಲ್ಲಿ 589 ಪುರುಷರು 258 ಮಹಿಳೆಯರು ಸೇರಿ ಒಟ್ಟು 847 ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.92ರಷ್ಟು ಮತದಾನವಾಗಿದೆ.
ಹೊಳಲ್ಕೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಯ ಮತಗಟ್ಟೆಯಲ್ಲಿ 367 ಪುರುಷರು ಹಾಗೂ 110 ಮಹಿಳಾ ಮತದಾರರು ಸೇರಿದಂತೆ ಒಟ್ಟು 477 ಶಿಕ್ಷಕ ಮತದಾರರು ಇದ್ದು, ಇದರಲ್ಲಿ 351 ಪುರುಷರು 105 ಮಹಿಳೆಯರು ಸೇರಿ ಒಟ್ಟು 456 ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.95.60ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಗೊಂದಲಗಳು ಮೂಡದೆ ಶಾಂತಿಯುತ ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.