ಮೊಬೈಲ್‌ಗಳಿಂದ ಮಕ್ಕಳ ಶಿಕ್ಷಣಕ್ಕೂ ನೈತಿಕ ಮೌಲ್ಯಕ್ಕೂ ಅಡ್ಡಿ

KannadaprabhaNewsNetwork |  
Published : Jun 30, 2025, 12:34 AM IST
29ಸಿಎಚ್ಎನ್‌53ಕೊಳ್ಳೇಗಾಲದಲ್ಲಿ ನಾಯಕ ಸಮಾಜ ಅಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬಸವರಾಜು, ನಾಗರತ್ನಮ್ಮ, ವೆಂಕಟನಾಯಕ, ರಘು ಇದ್ದರು. | Kannada Prabha

ಸಾರಾಂಶ

ಪ್ರಸ್ತುತ ಮೊಬೈಲ್‌ಗಳು ಮಕ್ಕಳ ಶಿಕ್ಷಣಕ್ಕೂ ನೈತಿಕ ಮೌಲ್ಯಕ್ಕೂ ಅಡ್ಡಿಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದು ತಾಲೂಕು ನಾಯಕ ಸರ್ಕಾರಿ ನೌಕರರ ಸೇವಾ ಸಂಘದ ಅಧ್ಯಕ್ಷ ಬಸವರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪ್ರಸ್ತುತ ಮೊಬೈಲ್‌ಗಳು ಮಕ್ಕಳ ಶಿಕ್ಷಣಕ್ಕೂ ನೈತಿಕ ಮೌಲ್ಯಕ್ಕೂ ಅಡ್ಡಿಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದು ತಾಲೂಕು ನಾಯಕ ಸರ್ಕಾರಿ ನೌಕರರ ಸೇವಾ ಸಂಘದ ಅಧ್ಯಕ್ಷ ಬಸವರಾಜ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಭಾನುವಾರ ನಡೆದ ತಾಲೂಕು ನಾಯಕ ಸರ್ಕಾರಿ ನೌಕರರ ಸೇವಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ , ಪ್ರಸ್ತುತ ಮೊಬೈಲ್‌ ಮಕ್ಕಳ ಶಿಕ್ಷಣಕ್ಕೆ ಬಹುಮಟ್ಟಿಗೆ ಅಡ್ಡಿಯಾಗುತ್ತಿವೆ. ಪೋಷಕರು ಮತ್ತು ಶಿಕ್ಷಕರು ಈ ಬಗ್ಗೆ ಹೆಚ್ಚು ಜಾಗರೂಕರಾಗಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರು, ಶಿಕ್ಷಕರು ಮತ್ತು ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ಕುರಿತು ಸಮಾಜದಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ '''''''' ಕಲಿಕೆನಿರತ ಮಕ್ಕಳು ಮೊಬೈಲ್ ಚಟದಿಂದ ದೂರವಿರಿ ಎಂದರು.

ಬಳಿಕ ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ ನಾಯಕ ಸಮುದಾಯದ 55 ಮಕ್ಕಳಿಗೆ ಗೌರವ ಸಲ್ಲಿನ ಪುರಸ್ಕರಿಸಲಾಯಿತು. ಉಪನ್ಯಾಸಕರು ಎಲ್.ಉಮೇಶ್, ಶಿಕ್ಷಕರು ನಾಗರತ್ನಮ್ಮ, ಸಂಗೀತ ಶಿಕ್ಷಕ ವೆಂಕಟರಂಗನಾಯಕ ಸನ್ಮಾನಿಸಿ ಗೌರವಿಸಲಾಯಿತು. ಸಮಾಜಸೇವಕರಾದ ಚಿತ್ರಕಲಾ ಇತಿಹಾಸಕಾರ ರಘು, ಭಾಗ್ಯಮ್ಮ ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ನಾಯಕ ಸರ್ಕಾರಿ ನೌಕರರ ಸೇವಾ ಸಂಘದ ಅಧ್ಯಕ್ಷರು ಬಸವರಾಜು, ಗೌರವಧ್ಯಕ್ಷರು ಶಾಂತರಾಜು, ಕಾರ್ಯದರ್ಶಿ ಬೆಟ್ಟಣಯ್ಯ, ಖಜಾಂಚಿ ರಾಜು.ಜೆ, ಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ, ಬೆಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೆಎಎಸ್ ಅಧಿಕಾರಿ ಮಹದೇವ ನಾಯಕ, ಉಪನ್ಯಾಸಕ ಆನಂದ್, ನಂಜುಂಡಪ್ಪ . ರಂಗನಾಥ್. ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ