ಕನ್ನಡಪ್ರಭ ವಾರ್ತೆ, ತುಮಕೂರು
ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟ, ತುಮಕೂರು ವಿಶ್ವವಿದ್ಯಾಲಯ, ದರೈ ಸ್ತ್ರೀ ಕಲ್ಚರಲ್ ಟ್ರಸ್ಟ್ ಹಾಗೂ ಸಮತಾ ಪ್ರಕಾಶನದ ವತಿಯಿಂದ ತುಮಕೂರುವ ವಿವಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಶಿವಣ್ಣ ತಿಮ್ಲಾಪುರ ಬರೆದಿರುವ ‘ತೊಗಲ ಯೋಗಿ’ ಕವನ ಸಂಕಲನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,ಇಂದಿನ ಯುವಕರ ಅಭಿರುಚಿಯೆಂದರೆ ಎಲ್ಲೇ ಕುಳಿತುಕೊಳ್ಳಲಿ ಮೊಬೈಲ್ ಹಿಡಿದಿರುತ್ತಾರೆ. ಪಕ್ಕದಲ್ಲಿ ಯಾರು ಕುಳಿತಿರುತ್ತಾರೆ ಎಂಬ ಬಗ್ಗೆ ವಿಚಾರಿಸುವುದಿಲ್ಲ. ಬಸ್ ಇಲ್ಲವೇ ಟ್ರೈನ್ ನಲ್ಲಿ ಕುಳಿತುಕೊಳ್ಳಲಿ ಅವರು ಮೊಬೈಲ್ ಹಿಡಿದುಕೊಳ್ಳುತ್ತಾರೆ. ಹೀಗಾಗಿ ಒಬ್ಬರಿಗೊಬ್ಬರಿಗೆ ಪರಿಚಯ ಮಾಡಿಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಹೊಸ ತಂತ್ರಜ್ಞಾನದಿಂದ ದುಷ್ಪರಿಣಾಮವೇ ಹೆಚ್ಚು ಆಗುತ್ತಿವೆ. ತಂತ್ರಜ್ಞಾನದಿಂದ ಯಾವ ರೀತಿ ದುರುಪಯೋಗ ಮಾಡಿಕೊಳ್ಳಬಹುದು. ಹೀಗೆ ದುರುಪಯೋಗ ಮಾಡುವುದರಿಂದ ಸ್ವಂತಕ್ಕೆ ಆಗುವ ಲಾಭವೇನು? ಈ ರೀತಿಯ ಬುದ್ದಿವಂತರೂ ಕೂಡ ಇದ್ದಾರೆ ಎಂದರು.ಕ್ರಿಪ್ಕೋ ಕರೆನ್ಸಿ ವಿಚಾರದಲ್ಲಿ ತನಿಖೆ ಎದುರಿಸುತ್ತಿರುವ ಶ್ರೀಕಿ ಅನ್ನುವ ವ್ಯಕ್ತಿ ಬಹಳ ಬುದ್ದಿವಂತ. ಅವನನ್ನು ನೋಡಲು ಪೆಕರನಂತೆ ಕಾಣುತ್ತಾನೆ. ಅಸಾಧಾರಣ ಬುದ್ದಿವಂತ ಅವನು. ಆದರೆ ಆ ಬುದ್ದಿವಂತಿಕೆಯನ್ನು ತಂತ್ರಜ್ಞಾನ ದುರುಪಯೋಗಪಡಿಸಿಕೊಳ್ಳಲು ಬಳಸಿಕೊಂಡು ಅಪರಾಧ ಎಸಗಿದ್ದಾನೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ತಿದ್ದುವ ಕೆಲಸ ಮಾಡಬೇಕು ಎಂದರು.
ಸಂಸ್ಕೃತಿ ಚಿಂತಕ ಡಾ.ನಟರಾಜ ಬೂದಾಳ್ ಅಧ್ಯಕ್ಷತೆ ವಹಿಸಿದ್ದರು. ಕವನ ಸಂಕಲನ ಕುರಿತು ಡಾ.ಜಿ.ವಿ.ಆನಂದಮೂರ್ತಿ ಮಾತನಾಡಿದರು.ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಸಾಹಿತಿ ತುಂಬಾಡಿ ರಾಮಯ್ಯ, ಕುಲಸಚಿವೆ ನಾಹಿದಾ ಜಮ್ ಜಮ್, ಚರಕ ಆಸ್ಪತ್ರೆಯ ಡಾ.ಬಸವರಾಜು, ಸಾಮಾಜಿಕ ಹೋರಾಟಗಾರ ಡ್ಯಾಗೇರಹಳ್ಳಿ ವಿರೂಪಾಕ್ಷ, ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಡಾ.ಬಿ.ಆರ್.ರೇಣುಕಪ್ರಸಾದ್, ತೊಗಲ ಯೋಗಿ ಕೃತಿಕಾರ ಡಾ.ಶಿವಣ್ಣ ತಿಮ್ಲಾಪುರ ಮತ್ತಿತರರಿದ್ದರು.