ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ಅಣಕು ಸಂಸತ್ ಚುನಾವಣೆ

KannadaprabhaNewsNetwork |  
Published : Jul 26, 2024, 01:32 AM IST
25ಕೆಎಂಎನ್ ಡಿ15  | Kannada Prabha

ಸಾರಾಂಶ

ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಮತ್ತು ಪ್ರಜಾಪ್ರಭುತ್ವದ ಮೌಲ್ಯ ತಿಳಿಸಿಕೊಡುವ ಉದ್ದೇಶದಿಂದ ಶಾಲೆಯಲ್ಲಿ ಸಂಸತ್ ಚುನಾವಣೆ ನಡೆಸಲಾಗುತ್ತಿದೆ. ಚುನಾವಣೆಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕು. ಯಾವ ಮಾದರಿಯಲ್ಲಿ ಚುನಾವಣೆ ನಡೆಯುತ್ತದೆ. ಅದರ ಉಪಯೋಗವೇನು. ಪ್ರಜಾಪ್ರಭುತ್ವವನ್ನು ಹೇಗೆ ಮೌಲ್ಯಾಧಾರಿತದಿಂದ ನಡೆಸಿಕೊಂಡು ಹೋಗಬೇಕೆಂಬುವುದನ್ನು ಅರಿತುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಭಾರತೀನಗರ

ಕೇಂ ಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಮತ್ತು ವಿದ್ಯಾರ್ಥಿಗಳಲ್ಲಿ ನೈಜ್ಯ ನಾಯಕತ್ವ ಗುಣವನ್ನು ಮೂಡಿಸುವ ಉದ್ದೇಶದಿಂದ ಅಣಕು ಸಂಸತ್ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ 25 ವಿದ್ಯಾರ್ಥಿಗಳು ಅಭ್ಯರ್ಥಿಯಾಗಿ ಕಣದಲ್ಲಿದ್ದು, 1ರಿಂದ 10ನೇತರಗತಿ ವಿದ್ಯಾರ್ಥಿಗಳು ಮತ್ತು ಮಕ್ಕಳ ಪೋಷಕರು ಮತಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಶೇ.95 ರಷ್ಟು ಮತದಾನ ನಡೆಯಿತು.

ಮತ ಚಲಾಯಿಸಲು ವಿದ್ಯಾರ್ಥಿಗಳು ಮತ್ತು ಪೋಷಕರು ಆಧಾರ್‌ ಕಾರ್ಡ್ ಹಿಡಿದು ಮತಗಟ್ಟೆಯಲ್ಲಿ ಸರಥಿನಲ್ಲಿ ನಿಂತಿದ್ದು ಕಂಡು ಬಂತು. ದೊಡ್ಡವರ ಚುನಾವಣೆಗಳು ಯಾವ ರೀತಿ ನಡೆಯುವುದೋ ಅದೇ ರೀತಿ ಮಕ್ಕಳ ಸಂಸತ್ ಚುನಾವಣೆ ಅಚ್ಚುಕಟ್ಟಾಗಿ ಮಾಡಲಾಯಿತು.

ಮಕ್ಕಳೆಲ್ಲರೂ ಹರ್ಷದಿಂದ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಮತ ಚಲಾಯಿಸಿದರು. ಚುನಾವಣೆ ಮೊದಲು ಅಭ್ಯರ್ಥಿಗಳು ಮುಖ್ಯ ಚುನಾವಣಾಧಿಕಾರಿಗೆ ನಾಮ ಪತ್ರವನ್ನು ಸಲ್ಲಿಸಿದರು. ಮಕ್ಕಳ ಪ್ರತಿನಿಧಿಗಳು ಮತಯಾಚನೆ ಮಾಡಿದರು. ಎಲ್ಲಾ ಪ್ರತಿನಿಧಿಗಳಿಗೆ ಚಿಹ್ನೆ ನೀಡಲಾಗಿತ್ತು. ಶಾಲೆ ಮುಖ್ಯ ಚುನಾವಣಾ ಆಯುಕ್ತರಾಗಿ ಮುಖ್ಯ ಶಿಕ್ಷಕಿ ಆಯಷ ಕಾರ್ಯನಿರ್ವಹಿಸಿದರು. ಚುನಾವಣಾ ಅಧಿಕಾರಿ ನವೀನ್‌ಕುಮಾರ್ ಭಾಗವಹಿಸಿದ್ದರು. ಶುಕ್ರವಾರ ಮತ ಏಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಶಾಲೆ ಮುಖ್ಯಸ್ಥೆ ನಾಗರತ್ನ ಬಲ್ಲೇಗೌಡ ಮಾತನಾಡಿ, ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಮತ್ತು ಪ್ರಜಾಪ್ರಭುತ್ವದ ಮೌಲ್ಯ ತಿಳಿಸಿಕೊಡುವ ಉದ್ದೇಶದಿಂದ ಶಾಲೆಯಲ್ಲಿ ಸಂಸತ್ ಚುನಾವಣೆ ನಡೆಸಲಾಗುತ್ತಿದೆ. ಚುನಾವಣೆಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕು ಎಂದರು.

ಯಾವ ಮಾದರಿಯಲ್ಲಿ ಚುನಾವಣೆ ನಡೆಯುತ್ತದೆ. ಅದರ ಉಪಯೋಗವೇನು. ಪ್ರಜಾಪ್ರಭುತ್ವವನ್ನು ಹೇಗೆ ಮೌಲ್ಯಾಧಾರಿತದಿಂದ ನಡೆಸಿಕೊಂಡು ಹೋಗಬೇಕೆಂಬುವುದನ್ನು ಅರಿತುಕೊಳ್ಳಬೇಕೆಂದು ವಿವರಿಸಿದರು.

ಅತೀ ಹೆಚ್ಚು ಯಾರು ಮತವನ್ನು ಪಡೆದು ಆಯ್ಕೆಗೊಳ್ಳುವವರನ್ನು ಮಂತ್ರಿಮಂಡಲ ರಚನೆಗೆ ಒಳಪಡುತ್ತಾರೆ. ಮಕ್ಕಳ ಚುನಾವಣಾ ಕಾರ್ಯಕ್ರಮದಲ್ಲಿ ಶಾಲೆ ಸಂಸ್ಥಾಪಕ ಅಧ್ಯಕ್ಷ ಎ.ಟಿ.ಬಲ್ಲೇಗೌಡ ಭಾಗವಹಿಸಿ ಚುನಾವಣೆಯಲ್ಲಿ ನಿಂತ ಅಭ್ಯರ್ಥಿಗಳಿಗೆ ಶುಭ ಕೋರಿದರು.

ಮತಕಟ್ಟೆ ಅಧಿಕಾರಿಗಳಾಗಿ ಶಿಕ್ಷಕರಾದ ವಿಶ್ವ, ಕುಣಾಮೂರ್ತಿ, ದಿನೇಶ್, ಸಿದ್ದರಾಮು, ರಾಣಿ, ಗೌರಮ್ಮ, ಶಿಕ್ಷಕರಾದ ನಟರಾಜು, ದಿನೇಶ್, ಲೀಲಾವತಿ, ತಾರಾ, ನಿರ್ಮಲ, ದಿವ್ಯ, ಮಂಜುನಾಥ್, ಗೌತಮಿ, ನೇತ್ರಾವತಿ, ವಿಶಾಲಾಕ್ಷಿ, ಆಶಾ, ದಿನೇಶ್, ಪುಷ್ಪ, ರಾಣಿ, ದಿವ್ಯ ಸೇರಿದಂತೆ ಹಲವರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌