ಗದಗ: ವಿಶ್ವಗುರು ಬಸವಣ್ಣನವರ ಧರ್ಮ,ವಿಶ್ವಧರ್ಮ ಅಂತೆಯೇ ಅವರ ಸಂದೇಶ ವಿಶ್ವ ಸಂದೇಶವಾಗಿದೆ ಎಂದು ಎಂದು ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಂದ್ರ.ಎಸ್. ಗಡಾದ ಹೇಳಿದರು.
ಕರ್ನಾಟಕ ಸರ್ಕಾರ ಯಾವ ಯಾವ ಕಾರಣಗಳಿಂದ ಬಸವಣ್ಣರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ ಎಂಬುದನ್ನು ಅವರ ಜೀವನ ಸಾಧನೆ ಹಾಗೂ ವಿವಿಧ ಮಗ್ಗುಲಗಳನ್ನು ಪರಿಚಯಿಸುವ ಮೂಲಕ ಸಮರ್ಥನೆ ನೀಡಿದರು .
ಸಾಮಾಜಿಕ ಕಾರ್ಯಕರ್ತ ಬಸವರಾಜ ಹಿರೇಹಡಗಲಿ ಹಾಗೂ ನೀಲಕ್ಕ ಮಳಲಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಪ್ರಕಾಶ ಅಸುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿ.ಕೆ. ಕರಿಗೌಡರ, ಎಸ್.ಎನ್. ಹಕಾರಿ, ಎನ್.ಎಚ್. ಹಿರೇಸಕ್ಕರಗೌಡ್ರ, ಬಿ.ವಿ. ಕಾಮಣ್ಣವರ, ಎನ್.ಎಸ್. ಬಡಿಗಣ್ಣವರ, ಡಾ.ಆರ್.ಎಸ್. ದಾನರಡ್ಡಿ, ಮಲ್ಲಣ್ಣ ಜಿನಗಾ, ಮಹಾಂತೇಶ ಅಂಗಡಿ, ಮಂಜುನಾಥ ಅಸುಂಡಿ, ಶರಣು ಅಂಗಡಿ, ಅಲ್ಲಮ ಬಡಿಗಣ್ಣವರ, ಸರೋಜಕ್ಕ ಲಿಂಗಧಾಳ, ಲಕ್ಷ್ಮೀ ಅಂಗಡಿ, ಮಂಗಳಕ್ಕ ಕಾಮಣ್ಣವರ, ಮಂಜುಳಾ ಹಾಸಿಲಕರ, ಸಹನಾ ಆಲತಗಿ, ರೇಣುಕಾ ಹಾಸಿಲಕರ, ಶಿಲ್ಪಾ ಬಡಿಗಣ್ಣವರ, ಭಾಗ್ಯಶ್ರೀ ಬಡಿಗಣ್ಣವರ ಮುಂತಾದವರು ಇದ್ದರು.
ಭಕ್ತಿ ಆಲತಗಿ ವಚನ ಪಠಿಸಿದರು. ಗಂಗಮ್ಮ ಹೂಗಾರ ವಚನ ಪ್ರಾರ್ಥನೆಗೈದರು. ಎಂ.ಬಿ. ಲಿಂಗಧಾಳ ಸ್ವಾಗತಿಸಿದರು. ಎಸ್.ಎ. ಮುಗದರವರು ನಿರೂಪಿಸಿದರು. ಗೌರಕ್ಕ ಬಡಿಗಣ್ಣವರ ವಂದಿಸಿದರು.