ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ ಬೆಲ್ಲದಾರತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ನಮ್ಮನ್ನು ಕಾಡುತ್ತಿರುವ ನವಗ್ರಹಗಳೆಂದರೆ ವ್ಯಕ್ತಿ ಚಾರಿತ್ರ್ಯದ ದಾರಿದ್ರ್ಯ, ಜಾಗತೀಕರಣದ ಜೂಜು, ಹಣ ಮತ್ತು ಅಧಿಕಾರದ ಹುಚ್ಚು, ಬುದ್ಧಿಜೀವಿಗಳ ಮೂರ್ಖತನ, ನೈಸರ್ಗಿಕ ಸಂಪತ್ತಿನ ದುರ್ಬಳಕೆ, ಮತಾಂಧತೆಯ ಮತಿಹೀನತೆ, ರಾಜಕೀಯ ವ್ಯವಸ್ಥೆಯ ಅರಾಜಕತ್ವ, ಧರ್ಮದ ಅಪವ್ಯಾಖ್ಯಾನ ಮತ್ತು ಆಧ್ಯಾತ್ಮಿಕತೆಯ ಅಭಾವ. ಇವುಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದರು.ಈ ಅನಿಷ್ಠ ನವಗ್ರಹಗಳ ಹಾವಳಿಯಲ್ಲಿ ನಮ್ಮ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸ್ವಾರ್ಥದ ಸಿಕ್ಕು, ಸ್ಥಾನದ ಸೊಕ್ಕು, ಸೇಡಿನ ಹಠ, ಅಸಹನೀಯತೆ, ಭಯೋತ್ಪಾದನೆ ಭ್ರಷ್ಟಾಚಾರ, ಲೈಂಗಿಕ ಲಾಲಸೆ, ವಿಶ್ವಾಸದ್ರೋಹ ಇತ್ಯಾದಿ ಅವಘಡಗಳು ತುಂಬಿಕೊಂಡಿವೆ. ಪರಿಣಾಮ ನಮ್ಮ ಬದುಕು ಬಾಹ್ಯ ಸನ್ನಿವೇಶದ ಸುಳಿಗೆ ಸಿಲುಕಿ ನೆಮ್ಮದಿಯನ್ನೇ ಕಳೆದುಕೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ನಮಗೆ ಮಾರ್ಗದರ್ಶಕವಾಗಿದೆ. ಯಾವುದೇ ದೇಶಕ್ಕೆ ಸಾಹಿತ್ಯ-ಸಂಸ್ಕೃತಿಯಲ್ಲಿ ಸ್ಥಾನ-ಮಾನವಿಲ್ಲದಿದ್ದರೆ ಆ ದೇಶದ ಬದುಕು ಬರಡಾಗಿ ಹೋಗುತ್ತದೆ ಎಂದು ನುಡಿದರು.
ಕನ್ನಡದ ಪ್ರಾತಿನಿಧಿಕ ಸಂಸ್ಥೆಯ ಪಾವಿತ್ರ್ಯ, ಘನತೆ, ಗೌರವಗಳಿಗೆ ಯಾವುದೇ ರೀತಿಯಲ್ಲಿ ಭಂಗ ಉಂಟಾಗದಂತೆ ನೋಡಿಕೊಳ್ಳಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಆ ಎಚ್ಚರವನ್ನೂ ಸಮ್ಮೇಳನ ನೀಡಿದೆ. ಸಮ್ಮೇಳನದ ನಂತರ ಪರಿಷತ್ತಿನಲ್ಲಾದ ಬೆಳವಣಿಗೆಗಳು ನಿಜಕ್ಕೂ ನನಗೆ ನೋವುಂಟುಮಾಡಿದೆ. ಪರಿಷತ್ತಿನಂತಹ ಸ್ವಾಯತ್ತ ಸಂಸ್ಥೆ ಗೊಂದಲಗಳ ಗೂಡಾಗಬಾರದು. ಅದರ ಘನತೆ-ಗಾಂಭೀರ್ಯಗಳು ಹಾದಿ ಬೀದಿಯಲ್ಲಿ ಚೆಲ್ಲಾಡುವ ಸರಕುಗಳಾಗಬಾರದು. ಪರಿಷತ್ತು ಕೇವಲ ಕನ್ನಡದ ನುಡಿದೇಗುಲವಲ್ಲ, ನಡೆದೇಗುಲವೂ ಹೌದು. ಪರಿಷತ್ತಿನ ಪರಂಪರೆ, ಪಾವಿತ್ರ್ಯತೆ, ಪ್ರಾಮುಖ್ಯತೆಗಳಿಗೆ ಕಳಂಕ ಬಾರದಂತೆ ನೋಡಿಕೊಳ್ಳಬೇಕು. ಪರಿಷತ್ತಿನ ಕಾರ್ಯಭಾರದ ಹೊಣೆ ಹೊತ್ತಿರುವ ಪದಾಧಿಕಾರಿಗಳು ಇದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.
ಸಮ್ಮೇಳನದ ಸುದೀರ್ಘ ವರದಿ ಇಲ್ಲದ ಕೊರತೆ:
ಜಿಲ್ಲೆಯ ಸಾಂಸ್ಕೃತಿಕ ವಿಶ್ವರೂಪ ದರ್ಶನ:
ಕರ್ನಾಟಕ ಸಾಹಿತ್ಯ ಸಮ್ಮೇಳನಾಧ್ಯಕ್ಷರು, ಕರ್ನಾಟಕ- ಭಾರತ ಕುರಿತ ಲೇಖನಗಳು, ವಿಶ್ವ ಕರ್ನಾಟಕದ ಲೇಖನಗಳು, ಅಭಿವೃದ್ಧಿ ಭಾರತದ ಲೇಖನಗಳು, ಮಧುರ ಮಂಡ್ಯ ಕುರಿತಂತೆ ಒಟ್ಟು ೧೩೨ ಲೇಖನಗಳಿವೆ. ಇದರ ಜೊತೆಗೆ ಮಂಡ್ಯ ಜಿಲ್ಲೆಯ ಸಮಕಾಲೀನ ಬದುಕು, ಜನಜೀವನ, ಅಭಿವೃದ್ಧಿ, ಜಾನಪದ, ವೈಶಿಷ್ಟ್ಯ, ಇತಿಹಾಸ, ಸಾಂಸ್ಕೃತಿಕ ಸಂಪತ್ತು, ಆಗಿಹೋದ ಪ್ರಮುಖರು, ಪ್ರವಾಸಿಸ್ಥಳಗಳನ್ನು ದಾಖಲಿಸಲಾಗಿದೆ. ಒಟ್ಟಾರೆ ಬೆಲ್ಲದಾರತಿ ಮಹತ್ವದ ದಾಖಲೆಯ ಪ್ರಕಟಣೆಯಾಗಿದೆ. ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ವಿಶ್ವರೂಪ ದರ್ಶನ ಎಂದು ಬಣ್ಣಿಸಿದರು.
ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿಗಾಗಿ ಹೊರತಂದಿರುವ ಬೆಲ್ಲದಾರತಿ ಸ್ಮರಣ ಸಂಚಿಕೆಯನ್ನು ಎಂಟು ತಿಂಗಳ ಬಳಿಕ ವಿಶೇಷ ರೀತಿಯಲ್ಲಿ ಬಿಡುಗಡೆ ಮಾಡಲಾಯಿತು. ಮಂಗಳವಾದ್ಯ ಸಮೇತವಾಗಿ ಸುಮಂಗಲಿಯರು ಬೆಲ್ಲದಾರತಿಯೊಂದಿಗೆ ಸಾಗಿದರೆ ಬುಟ್ಟಿಯಲ್ಲಿ ಸ್ಮರಣಸಂಚಿಕೆಯನ್ನು ಹೊತ್ತು ತಂದು ಗಣ್ಯರಿಗೆ ಸಮರ್ಪಿಸುವುದರೊಂದಿಗೆ ಸ್ಮರಣಸಂಚಿಕೆ ಬಿಡುಗಡೆಗೊಳಿಸಲಾಯಿತು. ಆ ಸಮಯದಲ್ಲಿ ಅಂಬೇಡ್ಕರ್ ಭವನದ ದೀಪಗಳೆಲ್ಲವನ್ನೂ ಆರಿಸಲಾಗಿತ್ತು. ಬೆಲ್ಲದಾರತಿಯ ಬೆಳಕಿನಲ್ಲೇ ಸ್ಮರಣ ಸಂಚಿಕೆಯನ್ನು ಅರ್ಥಪೂರ್ಣವಾಗಿ ಬಿಡುಗಡೆಗೊಳಿಸಲಾಯಿತು.ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಗೈರು
ಇವೆಲ್ಲಾ ಕಾರಣಗಳಿಂದ ಸ್ಮರಣಸಂಚಿಕೆ ಸಮಾರಂಭಕ್ಕೆ ಅವರನ್ನು ಆಹ್ವಾನಿಸದಂತೆ ಜಿಲ್ಲಾಡಳಿತಕ್ಕೆ ಸಾಹಿತಿಗಳು, ಸಂಘಟನೆಗಳ ಪ್ರಮುಖರು ಒತ್ತಾಯಿಸಿದ್ದರು. ಒಮ್ಮೆ ಸಮಾರಂಭಕ್ಕೆ ಅವರು ಬಂದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಈ ಕಾರಣದಿಂದ ಡಾ.ಮಹೇಶ್ ಜೋಶಿ ಸಮಾರಂಭದಿಂದ ದೂರವೇ ಉಳಿದರು. ಸಮ್ಮೇಳನ ಮುಗಿದು ಎಂಟು ತಿಂಗಳಾದರೂ ಡಾ.ಮಹೇಶ್ ಜೋಶಿ ಅವರು ಇದುವರೆಗೆ ಒಮ್ಮೆಯೂ ಜಿಲ್ಲೆಗೆ ಕಾಲಿಡುವ ಧೈರ್ಯ ಮಾಡಿಲ್ಲ.