
ಕನ್ನಡಪ್ರಭ ವಾರ್ತೆ ತುಮಕೂರು
ಪೂಜ್ಯರು ಮುಂದುವರಿದು, ಆಧುನೀಕರಣವೆಂದರೆ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಹಾಗೂ ಮನೋನಿಗ್ರಹದ ಮಹತ್ವವನ್ನು ಕಡೆಗಣಿಸಬೇಕೆಂದಿಲ್ಲ. ಆಧುನೀಕರಣವು ಚೈತನ್ಯದಾಯಕವಾಗಬೇಕಾದರೆ ಅದು ಆತ್ಮಬಲದ ಶಕ್ತಿಯನ್ನು ಪಡೆಯುವುದರಿಂದಷ್ಟೇ ಸಾಧ್ಯ. ಅಲ್ಲದೆ ವಿದ್ಯಾರ್ಥಿಗಳು ಸೋಲಿನ ಭಯ, ಆಷಾಢಭೂತಿತನ, ಹುಸಿ ಅಹಂಕಾರ, ಸತ್ಯವನ್ನು ನುಡಿಯುವುದರಲ್ಲಿ ಧೈರ‍್ಯದ ಕೊರತೆ ಮತ್ತು ಇತರರಿಂದ ಎದುರಾಗಬಹುದಾದ ಟೀಕೆಯ ಭಯ ಇವುಗಳನ್ನು ಸಮರ್ಪಕವಾಗಿ ಎದುರಿಸಲು ಯೋಗ್ಯವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಇಂದಿನ ವಿದ್ಯಾರ್ಥಿಗಳೇ ರಾಷ್ಟ್ರದ ಭವಿಷ್ಯದ ಸಂಪನ್ಮೂಲ ಎಂದರು.ಆ್ಯಪಲ್ ಸಂಸ್ಥೆಯ ಹಿರಿಯ ಇಂಜಿನಿಯರ್ ಪ್ರೀತಿರವರು ವಿಶೇಷ ಆಹ್ವಾನಿತರಾಗಿದ್ದರು. ಸ್ವಾಮಿ ಧೀರಾನಂದರು ವಿಶೇಷ ಆಹ್ವಾನಿತರಾಗಿದ್ದರು. ಮೈಸೂರು ಮಾಳವಿ ಮಂಜುನಾಥ್ ಮತ್ತು ಮೈಸೂರು ಸುಮಂತ್ ಮಂಜುನಾಥ್ ರವರಿಂದ ವಯೊಲಿನ್ ವಾದನವು ಅತ್ಯದ್ಭುತವಾಗಿ ಮೂಡಿಬಂದಿತು. ಶಿಕ್ಷಣತಜ್ಞ ವಿದ್ಯಾಶಂಕರ್ ಸ್ವಾಗತಿಸಿದರೆ ವಿವೇಕಾನಂದ ಯುವಕ ಸಂಘದ ಸುನೀಲ್ ಹುಲಿಕಲ್ ವಂದಿಸಿದರು. ಯುವ ಸಮ್ಮೇಳನದಲ್ಲಿ ನಗರದ ವಿವಿಧ ಪ್ರೌಢಶಾಲೆಗಳಿಂದ ಆರುನೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು.