ಮೋದಿ, ಶಾ ಜೋಡಿ ದೇಶದಲ್ಲೆ ಮಾಡಿದೆ ಮೋಡಿ

KannadaprabhaNewsNetwork |  
Published : Feb 09, 2025, 01:16 AM IST
ಪೊಟೋ: 08ಟಿಟಿಎಚ್‌01ತೀರ್ಥಹಳ್ಳಿ ಪಟ್ಟಣದ ಕೊಪ್ಪ ಸರ್ಕಲ್‌ನಲ್ಲಿ ಶನಿವಾರ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದ ಹಿನ್ನೆಲೆ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ತೀರ್ಥಹಳ್ಳಿ: ಅತ್ಯಂತ ಸಂತೋಷದ ಕ್ಷಣದಲ್ಲಿ ನಾವಿದ್ದೇವೆ. ಒಂದು ಕಾಲು ಶತಮಾನಕ್ಕಿಂತ ಹೆಚ್ಚು ದೆಹಲಿಯಲ್ಲಿ ಅಧಿಕಾರ ವಂಚಿತರಾಗಿದ್ದವು. ಜನಸಂಘ ಕಾಲದಲ್ಲಿ ಮೊದಲು ದೆಹಲಿಯಲ್ಲಿಯೇ ಅಧಿಕಾರ ಸಿಕ್ಕಿದ್ದು. ಆಗಿನ ಸಂದರ್ಭದಲ್ಲಿ ಎಲ್ಲಿಯೂ ಅಧಿಕಾರ ಇಲ್ಲದಿದ್ದರೂ ದೆಹಲಿಯಲ್ಲಿ ಅಧಿಕಾರ ಇದೆ ಎಂದು ನಾವೆಲ್ಲರೂ ಬೀಗುತ್ತಿದ್ದೆವು. ಅಲ್ಲಿನ ಅಧಿಕಾರವನ್ನು ಉಪಯೋಗಿಸಿಕೊಂಡು ಇಡೀ ದೇಶದಲ್ಲೇ ಬಿಜೆಪಿ ಗೆಲುವು ಕಂಡಿತ್ತು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತೀರ್ಥಹಳ್ಳಿ: ಅತ್ಯಂತ ಸಂತೋಷದ ಕ್ಷಣದಲ್ಲಿ ನಾವಿದ್ದೇವೆ. ಒಂದು ಕಾಲು ಶತಮಾನಕ್ಕಿಂತ ಹೆಚ್ಚು ದೆಹಲಿಯಲ್ಲಿ ಅಧಿಕಾರ ವಂಚಿತರಾಗಿದ್ದವು. ಜನಸಂಘ ಕಾಲದಲ್ಲಿ ಮೊದಲು ದೆಹಲಿಯಲ್ಲಿಯೇ ಅಧಿಕಾರ ಸಿಕ್ಕಿದ್ದು. ಆಗಿನ ಸಂದರ್ಭದಲ್ಲಿ ಎಲ್ಲಿಯೂ ಅಧಿಕಾರ ಇಲ್ಲದಿದ್ದರೂ ದೆಹಲಿಯಲ್ಲಿ ಅಧಿಕಾರ ಇದೆ ಎಂದು ನಾವೆಲ್ಲರೂ ಬೀಗುತ್ತಿದ್ದೆವು. ಅಲ್ಲಿನ ಅಧಿಕಾರವನ್ನು ಉಪಯೋಗಿಸಿಕೊಂಡು ಇಡೀ ದೇಶದಲ್ಲೇ ಬಿಜೆಪಿ ಗೆಲುವು ಕಂಡಿತ್ತು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಶನಿವಾರ ಪಟ್ಟಣದ ಕೊಪ್ಪ ಸರ್ಕಲ್‌ನಲ್ಲಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ ನಂತರ ಅವರು ಮಾತನಾಡಿದರು.ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಜೋಡಿ ಬಹಳ ದೊಡ್ಡದಾದ ಮೋಡಿ ಮಾಡಿದೆ. ಅರವಿಂದ ಕೇಜ್ರಿವಾಲ್ ಎಂಬ ಐಎಎಸ್ ಅಧಿಕಾರಿ ಬಹಳ ದೊಡ್ಡ ಭ್ರಮೆಯನ್ನ ದೇಶದಲ್ಲಿ ಹುಟ್ಟು ಹಾಕಿದ್ದರು. ಎಲ್ಲಾ ರಾಷ್ಟ್ರೀಯ ಪಕ್ಷಗಳು ಭ್ರಷ್ಟರು, ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದರು. ಅದನ್ನ ಹೇಳಿಯೇ ಹೇಳಿಯೇ ಪಕ್ಷ ಕಟ್ಟುವುದರ ಒಳಗಾಗಿ ಅಧಿಕಾರದಿಂದಲೇ ಇಳಿದರು ಎಂದು ಆಪ್ ಪಕ್ಷವನ್ನು ಟೀಕಿಸಿದರು.ಅಲ್ಪನಿಗೆ ಐಶ್ವರ್ಯ ಬಂದರೆ ಚಂದ್ರನಿಗೆ ಕೊಡೆ ಹಿಡಿದರು ಎಂಬ ಗಾದೆ ಮಾತಿದೆ. ಇವರ ಪರಿಸ್ಥಿತಿಯು ಹಾಗೆಯೇ ಆಯಿತು. ಏಕಾಏಕಿ ದೆಹಲಿ, ಪಂಜಾಬ್ ರಾಜ್ಯಗಳು ಅವರ ಪಾಲಿಗೆ ಸಿಕ್ಕವು. ಈ ಚುನಾವಣೆ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಮಹಾರಾಷ್ಟ್ರ ಹರಿಯಾಣದ ಚುನಾವಣೆಯ ಗೆಲುವು ದೆಹಲಿಗೆ ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ತಂದು ಕೊಟ್ಟಿತ್ತು. ಇದರಿಂದ ದೆಹಲಿ ಕೂಡ ಬಿಜೆಪಿಯ ಪಾಲಾಗಿದೆ ಎಂದು ಸಂಭ್ರಮಪಟ್ಟರು.ಕಳೆದ ಹತ್ತು ವರ್ಷಗಳಿಂದ ಅರವಿಂದ್ ಕೇಜ್ರಿವಾಲ್ ದೆಹಲಿಯನ್ನು ಬದಲಾವಣೆ ಮಾಡುತ್ತೇನೆ ಎಂದು ಹೇಳುತ್ತಾ ಬಂದಿದ್ದಾರೆ, ಆದರೆ ಯಾವುದೇ ಅಭಿವೃದ್ಧಿ ಸಹ ಆಗಿಲ್ಲ, ಅವರು ಕೊಟ್ಟಂತಹ ಗ್ಯಾರಂಟಿಯ ಭ್ರಮೆಯಿಂದ ಜನರು ಮತ ನೀಡುತ್ತಿದ್ದರು. ಯಮುನಾ ನದಿಗೆ ಹರಿಯಾಣ ವಿಷ ಹಾಕಿದೆ ಎಂದು ಸುಳ್ಳು ಹೇಳಿದ್ದರು, ಸುಳ್ಳು ಹೇಳಿ ಚುನಾವಣೆ ಗೆಲ್ಲಬಹುದೆಂದು ಅವರು ಭಾವಿಸಿದ್ದರು. ಆದರೆ ಅದೇ ಈಗ ಅವರಿಗೆ ತಿರುಗು ಬಾಣವಾಗಿದೆ ಎಂದರು.ಈ ದೇಶವನ್ನು ಅರವತ್ತರಿಂದ ಎಪ್ಪತ್ತು ವರ್ಷಗಳ ಕಾಲ ಆಳಿದ್ದಂತಹ, ನನ್ನ ನಂತರ ಯಾರಿಲ್ಲ ನನಗೆ ಸೋಲೆ ಇಲ್ಲ ಎಂದು ಬೀಗುತ್ತಿದ್ದ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದೆ. ಒಂದು ಸ್ಥಾನವನ್ನು ಗೆಲ್ಲಲು ಆಗದಂತಹ ನಾಚಿಕೆಗೇಡಿನ ಸಂಗತಿ ಇವತ್ತು ದೇಶದ ಎದುರುಗಡೆಗೆ ನಿಂತಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ