ಕನ್ನಡಪ್ರಭ ವಾರ್ತೆ ನವದೆಹಲಿ
ಸಂಸತ್ ಭವನದ ಹಾಲ್‌ನಲ್ಲಿ ಕರ್ನಾಟಕ ಬಿಜೆಪಿ ಸಂಸದರ ಜೊತೆ ಅವರು ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಚರ್ಚೆ ವೇಳೆ, ಪ್ರಧಾನಮಂತ್ರಿ ಮ್ಯೂಸಿಯಂ ನೋಡಿದ್ದೀರಾ?, ನಿಮ್ಮ ಕುಟುಂಬಕ್ಕೆ ಈ ಮ್ಯೂಸಿಯಂನ್ನು ತೋರಿಸಿದ್ದೀರಾ?. ಡಿಜಿಟಲ್ ಮೀಡಿಯಾದಲ್ಲಿ ನೀವು ಸಕ್ರಿಯರಾಗಿದ್ದೀರಾ?, ಜನರಿಗಾಗಿ ನೀವು ಯಾರ್ಯಾರು ಏನೇನು ಮಾಡುತ್ತಿದ್ದೀರಿ? ಎಂಬುದಾಗಿ ಸಂಸದರಿಗೆ ಪ್ರಶ್ನೆಗಳ ಸುರಿಮಳೆಗರೆದರು.
ನೀವು ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಬೇಕು. ಪಕ್ಷಕ್ಕಾಗಿ ದುಡಿದವರನ್ನು, ದುಡಿಯುತ್ತಿರುವವರನ್ನು ಭೇಟಿ ಮಾಡಬೇಕು. ಕೇಂದ್ರದ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ, ಪಕ್ಷದ ಕಾರ್ಯಕರ್ತರಲ್ಲಿ ಜಾಗೃತಿ, ಅರಿವು ಮೂಡಿಸಬೇಕು. ಕೇಂದ್ರದ ಯೋಜನೆಗಳನ್ನು ನಿಮ್ಮ, ನಿಮ್ಮ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗಿ, ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದರು.- ಬಾಕ್ಸ್-
ಕುಟುಂಬಕ್ಕೆ ಸಮಯ ಕೊಡಿನಿಮ್ಮ ಕುಟುಂಬಕ್ಕೆ ಸಮಯ ಕೊಡ್ತಾ ಇದ್ದೀರಾ? ಎಂದು ಸಂಸದರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು. ಬಳಿಕ ನಿಮ್ಮ ಕುಟುಂಬದ ಸದಸ್ಯರ ಜೊತೆ ಸಮಯ ಸಿಕ್ಕಾಗಲೆಲ್ಲಾ ಕಾಲ ಕಳೆಯಿರಿ ಎಂದು ಮೋದಿ ಅವರು ಸಲಹೆ ನೀಡಿದರು.