ಮೋದಿ ಸರ್ಕಾರದಿಂದ ದೇಶದ ಏಕತೆಗೆ ಬಲ ತುಂಬುವ ಕೆಲಸ: ಕಾಗೇರಿ

KannadaprabhaNewsNetwork |  
Published : Jun 13, 2026, 02:30 AM IST
ಮಧುಕೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ದೇಶದ ಇತಿಹಾಸದಲ್ಲಿ ಸುದೀರ್ಘ ಅವಧಿಯ ಆಡಳಿತ ನಡೆಸಿದ ಪ್ರಧಾನಮಂತ್ರಿಗಳ ಸಾಲಿನಲ್ಲಿ ಹೊಸ ದಾಖಲೆ ನಿರ್ಮಿಸಿರುವುದು ದೇಶದ ಅಭಿವೃದ್ಧಿ ಮತ್ತು ಸ್ಥಿರ ನಾಯಕತ್ವದ ಪ್ರತೀಕವಾಗಿದೆ.

ಬನವಾಸಿಯ ಶ್ರೀ ಮಧುಕೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

ಮಧುಕೇಶ್ವರ ದೇವಾಲಯದಲ್ಲಿ ಪೂಜೆ

ಕನ್ನಡಪ್ರಭ ವಾರ್ತೆ ಬನವಾಸಿ

ಪ್ರಧಾನಿ ನರೇಂದ್ರ ಮೋದಿಯವರು ದೇಶದ ಇತಿಹಾಸದಲ್ಲಿ ಸುದೀರ್ಘ ಅವಧಿಯ ಆಡಳಿತ ನಡೆಸಿದ ಪ್ರಧಾನಮಂತ್ರಿಗಳ ಸಾಲಿನಲ್ಲಿ ಹೊಸ ದಾಖಲೆ ನಿರ್ಮಿಸಿರುವುದು ದೇಶದ ಅಭಿವೃದ್ಧಿ ಮತ್ತು ಸ್ಥಿರ ನಾಯಕತ್ವದ ಪ್ರತೀಕವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇಲ್ಲಿನ ಬನವಾಸಿಯ ಶ್ರೀ ಮಧುಕೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮೋದಿ ಅವರ ನಾಯಕತ್ವದಲ್ಲಿ ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದ್ದು, ವಿಶ್ವದ ರಾಷ್ಟ್ರಗಳು ಭಾರತದತ್ತ ಗೌರವದಿಂದ ನೋಡುವಂತಾಗಿದೆ ಎಂದರು.

ಜಗತ್ತು ವಿವಿಧ ಕಾರಣಗಳಿಂದ ಪರಸ್ಪರ ಸಂಬಂಧಗಳಿಂದ ದೂರವಾಗುತ್ತಿರುವ ಈ ಸಂದರ್ಭದಲ್ಲಿ ಭಾರತವು ವಸುದೈವ ಕುಟುಂಬಕಂ ಎಂಬ ಮೌಲ್ಯದ ಮೂಲಕ ವಿಶ್ವಕ್ಕೆ ಏಕತೆ ಮತ್ತು ಸಹಬಾಳ್ವೆಯ ಸಂದೇಶ ನೀಡುತ್ತಿದೆ. ಇದೇ ಭಾರತದ ಸಂಸ್ಕೃತಿಯ ಶ್ರೇಷ್ಠತೆಯಾಗಿದ್ದು, ಅದನ್ನು ಪ್ರಧಾನಿ ಮೋದಿ ಅವರು ವಿಶ್ವ ವೇದಿಕೆಯಲ್ಲಿ ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ತುಷ್ಟೀಕರಣ ಮತ್ತು ಓಲೈಕೆಯ ರಾಜಕಾರಣಕ್ಕೆ ಅವಕಾಶ ನೀಡದೆ ದೇಶದ ಏಕತೆಗೆ ಬಲ ತುಂಬುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಇದರ ಫಲವಾಗಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ರಾಷ್ಟ್ರೀಯ ಏಕೀಕರಣಕ್ಕೆ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ರಮೇಶ್ ನಾಯ್ಕ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ ನಾಯ್ಕ್, ಬಿಜೆಪಿ ಮುಖಂಡ ಶಿವಕುಮಾರ್ ದೇಸಾಯಿ ಗೌಡ್ರು, ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಗೌಡ್ರು ಹಾಗೂ ಮಂಜುನಾಥ್ ನಾಯ್ಕ, ಮಂಡಲ ಉಪಾಧ್ಯಕ್ಷ ರಾಘು ನಾಯ್ಕ, ಪಕ್ಷದ ಮುಖಂಡ ಗಣೇಶ್ ಶಣ್ಣಲಿಂಗಣ್ಣ, ಮಂಡಲ ಉಪಾಧ್ಯಕ್ಷ ಮುತ್ತಣ್ಣ ಚೌದ್ರಿ, ಮಹಾಶಕ್ತಿಕೇಂದ್ರ ಅಧ್ಯಕ್ಷ ಮಂಜುನಾಥ್ ಪಾಟೀಲ್, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಪುಟ್ಟರಾಜ ಸವಣೂರ, ಪ್ರಮುಖರಾದ ಅರವಿಂದ ಶೆಟ್ಟಿ ಹಾಗೂ ಸಾಯಿರಾಂ ಕಾನಳ್ಳಿ, ವಿಶ್ವನಾಥ ಹಾದಿಮನಿ, ಚಂದ್ರಶೇಖರ ಗೌಡ್ರು, ಶಂಬು ಗೌಡ, ರವಿ ನಾಯ್ಕ, ವಿ.ಎಂ. ಹೆಗಡೆ, ವಿಜಯಕುಮಾರ ರಾಯ್, ಮುತ್ತಣ್ಣ ದಾವಣಗೆರೆ, ಮಣಿ ಪಾಟೀಲ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂತಾ ಎಂ. ಸಣ್ಣಲಿಂಗಣ್ಣನವರ, ಗೀತಾ ಬೆಂಗಳೆ, ಪ್ರವೀಣ ಕಂತ್ರಾಜಿ, ಜೈಶಂಕರ್ ತಂಬಿ, ಬಸವರಾಜ್ ನಾಯ್ಕ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಬೆಟ್ಟ ವರ್ತಕರ ಸಂಘ ವಿಶ್ವ ಪರಿಸರ ದಿನಾಚರಣೆ
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ಸುಧಾರಣೆ ಆಗ್ರಹ