ಜಿಎಸ್‌ಟಿ ಇಳಿಸಿ ಬಡವರಿಗೆ ಆರ್ಥಿಕ ಶಕ್ತಿ ತುಂಬಿರುವ ಮೋದಿ

KannadaprabhaNewsNetwork |  
Published : Sep 24, 2025, 01:00 AM IST
ಪೊಟೊ-23ಕೆಎನ್‌ಎಲ್‌ಎಮ್‌1- ಸಂಭ್ರಮಾಚರಣೆ: ನೆಲಮಂಗಲ ನಗರದ ಬಸ್ ನಿಲ್ದಾಣ ಬಳಿಬಿಜೆಪಿ ಮುಂಖಡರ ಹಾಗೂ ಕಾರ್ಯಕರ್ತರು ಜಿಎಸ್‌ಟಿ ಇಳಿಕೆ ಹಿನ್ನಲೆ ಸಂಭ್ರಮಾಚರಣೆ ನಡೆಸಿದರು. ಬಿಜೆಪಿ  ಜಿಲ್ಲಾಧ್ಯಕ್ಷ ರಾಮ ಕೃಷ್ಣಪ್ಪ, ತಾಲೂಕು ಅದ್ಯಕ್ಷ ಜಗದೀಶ್‌ಚೌದರಿ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನೆಲಮಂಗಲ: ಜಿಎಸ್‌ಟಿ ತೆರಿಗೆ ಇಳಿಸಿ ಬಡವರ ಬದುಕಿಗೆ ಆರ್ಥಿಕ ಶಕ್ತಿ ತುಂಬಿ ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನೆಲಮಂಗಲ: ಜಿಎಸ್‌ಟಿ ತೆರಿಗೆ ಇಳಿಸಿ ಬಡವರ ಬದುಕಿಗೆ ಆರ್ಥಿಕ ಶಕ್ತಿ ತುಂಬಿ ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನಗರದ ಬಸ್ ನಿಲ್ದಾಣ ಮುಂದೆ ಬಿಜೆಪಿ ತಾಲೂಕು ಅದ್ಯಕ್ಷ ಜಗದೀಶ್ ಚೌಧರಿ ನೇತೃತ್ವದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ನಗರದ ವರ್ತಕರು ಮತ್ತು ಸಾರ್ವಜನಿಕರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿ ಪ್ರಧಾನಿ ಮೋದಿಗೆ ಜೈಕಾರ ಹಾಕಿದರು.

ಬಳಿಕ ಮಾತನಾಡಿದ ಚೌದರಿ, ದಿನನಿತ್ಯದ ವಸ್ತುಗಳು, ವಾಹನಗಳು ಸೇರಿದಂತೆ 375 ಉತ್ಪನ್ನಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಿರುವುದು ಸ್ವಾಗತಾರ್ಹ. ದಸರಾ ಹಬ್ಬಕ್ಕೆ ಕೇಂದ್ರ ಸರ್ಕಾರ ವಿಶೇಷ ಉಡುಗೊರೆ ನೀಡಿದೆ. ಜಿಎಸ್‌ಟಿ ಇಳಿಕೆಯಿಂದ ಹಾಲಿನ ಉತ್ಪನ್ನಗಳು, ಕುರುಕಲು ತಿಂಡಿ, ಪಾತ್ರೆ, ಹೊಲಿಗೆ ಯಂತ್ರಗಳ ಬೆಲೆ ಇಳಿಕೆಯಾಗಿದೆ. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಶೇ.18ರಿಂದ ಶೇ.5ಕ್ಕೆ ಇಳಿಸಿದೆ ಎಂದರು.

ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮ ಕೃಷ್ಣಪ್ಪ, ಮುಖಂಡ ಸಪ್ತಗಿರಿ ಶಂಕರ್‌ನಾಯಕ್, ಪುರಸಭೆ ಮಾಜಿ ಅಧ್ಯಕ್ಷ ರವಿ, ನಗರಸಭೆ ಹೆಚ್ಚುವರಿ ಸದಸ್ಯ ಅಂಜನಮೂರ್ತಿ, ರಾಮಮೂರ್ತಿ, ಕೃಪಾನಂದ್, ಮುನಿರಾಜು, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರಂಗನಾಥ್ ಬಾಬು, ಸತೀಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ಪ್ರಧಾನಕಾರ್ಯದರ್ಶಿ ಶೀಲಾ, ಎಸ್ಟಿ ಮೋರ್ಚಾ ಅಧ್ಯಕ್ಷ ಕೆಂಪರಾಮಯ್ಯ, ಒಬಿಸಿ ಮೋರ್ಚಾ ಅಧ್ಯಕ್ಷ ಲೋಕೇಶ್, ಮುಖಂಡ ಸ್ಟುಡಿಯೋ‌ ಮಂಜುನಾಥ್, ಅರುಣ್‌ಗೌಡ , ಎಂ.ಎಂ.ಗೌಡ, ಡಿ.ಸಿದ್ದರಾಜು, ಮಂಜುನಾಥ್, ಶರಣಪ್ಪ‌ಗೌಡರ್, ರಾಜಮ್ಮಪ್ರಕಾಶ್, ಸೌಮ್ಯ, ನೀಲಮ್ಮ, ಸುಮ, ಶಾಂತಕುಮಾರಿ ಮತ್ತಿತರರಿದ್ದರು. ‌

ಪೊಟೊ-23ಕೆಎನ್‌ಎಲ್‌ಎಮ್‌1- ಸಂಭ್ರಮಾಚರಣೆ:

ನೆಲಮಂಗಲದ ಬಸ್ ನಿಲ್ದಾಣ ಬಳಿ ಬಿಜೆಪಿ ಮುಂಖಡರು ಹಾಗೂ ಕಾರ್ಯಕರ್ತರು ಜಿಎಸ್‌ಟಿ ಇಳಿಕೆಯ ಸಂಭ್ರಮಾಚರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಜಗದೀಶ್‌ ಚೌದರಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ