ಮಾರಲದಿನ್ನಿ ಡ್ಯಾಮ್‌ ಬಳಿ ಪ್ರಗತಿ ಪರಿಶೀಲನಾ ಸಭೆ

KannadaprabhaNewsNetwork |  
Published : Sep 24, 2025, 01:00 AM IST
23-ಎಂ ಎಸ್ ಕೆ -01:  | Kannada Prabha

ಸಾರಾಂಶ

ತಾಲೂಕಿನಲ್ಲಿ ಮಳೆ ನಿಂತ ತಕ್ಷಣ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸರ್ವೇ ನಡೆಸಿ ಬೆಳೆ ಹಾನಿಯಾಗಿರುವ ಬಗ್ಗೆ ಸಮಗ್ರ ವರದಿ ಸಲ್ಲಿಸಿ ಎಂದು ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ತಾಲೂಕಿನಲ್ಲಿ ಮಳೆ ನಿಂತ ತಕ್ಷಣ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸರ್ವೇ ನಡೆಸಿ ಬೆಳೆ ಹಾನಿಯಾಗಿರುವ ಬಗ್ಗೆ ಸಮಗ್ರ ವರದಿ ಸಲ್ಲಿಸಿ ಎಂದು ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.

ತಾಲೂಕಿನ ಮಾರಲದಿನ್ನಿ ಜಲಾಶಯದ ಬಳಿ ಮಂಗಳವಾರ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಮಳೆಯಿಂದ ಯಾವ ಯಾವ ಬೆಳೆಗಳು ಹಾನಿಯಾಗಿವೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ರೈತರಿಗೆ ಏನೇನ್ ವಿತರಣೆ ಮಾಡಿದ್ದೀರಿ ಎಷ್ಟು ವಿತರಣೆ ಮಾಡಿದ್ದೀರಿ ಯಾರಿಗೆ ಕೊಟ್ಟಿದ್ದೀರಿ ಮಾಹಿತಿ ಕೊಡಿ.

ಸರ್ಕಾರದಿಂದ ಬರುವ ಯೋಜನೆಗಳನ್ನು ಶಾಸಕರ ಗಮನಕ್ಕೆ ತಂದು ಕಾರ್ಯಕ್ರಮ ರೂಪಿಸಿ ಯೋಜನೆ ಅನುಷ್ಠಾನಕ್ಕೆ ತನ್ನಿ ಎಂದು ಹೇಳಿದರು.

ಮಸ್ಕಿ ತಾಲೂಕಿನಲ್ಲಿ ಈ ಭಾರಿ 50 ಪ್ರತಿಶತ ಅಧಿಕ ಮಳೆಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲದೇ ಮಸ್ಕಿ ತಾಲೂಕು ಕೇಂದ್ರ ಇದ್ದರು ಇಲ್ಲದಂತೆ ಆಗಿದೆ, ತಾಲೂಕು ಅಧಿಕಾರಿಗಳು ಮಸ್ಕಿ ತಾಲೂಕು ನಿಮಗೆ ಸಂಬಂಧ ಇಲ್ಲ ಎನ್ನುವಂತೆ ಇದ್ದೀರಿ ಇದನ್ನು ಬಿಟ್ಟು ಕೆಲಸ ಮಾಡಿ ಎಂದರು. ಸಭೆಗೆ ಗೈರಾದವರಿಗೆ ನೋಟೀಸ್ ಜಾರಿ ಮಾಡಿ ಎಂದರು.

ಕಾಮಗಾರಿ ಪರಿಶೀಲನೆ: ತಾಲೂಕಿನಲ್ಲಿ ಕೆ ಆರ್ ಡಿ ಐ ಎಲ್ ಇಲಾಖೆಗೆ ನೀಡಿದ ಕಟ್ಟಡ ಕಾಮಗಾರಿ ಮುಗಿಸಲು ಏಳು ವರ್ಷಬೇಕಾ ನಿಮಗೆ 2018 ರಿಂದ ಈವರೆಗೆ ಕಾಮಗಾರಿ ಪೆಂಡಿಂಗ್ ಇಟ್ಟು ಕೊಂಡು ಸರ್ಕಾರದ ಹಣದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತೀರಾ ಎಂದು ಪ್ರಶ್ನಿಸಿದರು.

ವೈರಲ್ ಜ್ವರ ಹರಡದಂತೆ ನೋಡಿಕೊಳ್ಳಿ: ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಬಂದೀನಿ ಎಂದು ಮನೆಯಲ್ಲಿ ಕುಳಿತುಕೊಳ್ಳಲು ಆಗುತ್ತಾ ಅರೋಗ್ಯ ಕೇಂದ್ರದಲ್ಲಿ ಇದ್ದು ಕೆಲಸ ಮಾಡಿ ಇಲ್ಲದಿದ್ದರೆ ಬೇರೆ ಕಡೆ ಹೋಗಿ ಎಂದರು. ವೈರಲ್ ಜ್ವರ ಇದೆ ಆದ್ದರಿಂದ ಮುಂಜಾಗೃತೆ ವಹಿಸಿ ಎಂದರು. ತಾಲೂಕಿನಲ್ಲಿ ಮಳೆಯಿಂದ ರಸ್ತೆಗಳು ಹದಗೆಟ್ಟಿವೆ ಅವುಗಳನ್ನು ದುರಸ್ಥಿ ಮಾಡಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಿ ಎಂದು ಜಿಪಂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಮಕ್ಕಳ ಹಾಜರಾತಿ ಕಡೆ ಗಮನ ಹರಿಸಿ: ಮಸ್ಕಿ ತಾಲೂಕಿನಲ್ಲಿ ಕಾರ್ಯಕ್ರಮಗಳಿಗೆ ಬಂದು ಹೋಗಲು ಆಗುತ್ತೆ ಆದರೆ ನಿಮಗೆ ಸರ್ಕಾರಿ ಶಾಲೆಗೆ ಭೇಟಿ ಕೊಡಲು ಆಗುವುದಿಲ್ಲ ತಾಲೂಕಿನಲ್ಲಿ ಶಿಕ್ಷಣ ಕುಂಠಿತವಾಗುತ್ತದೆ. ಆದ್ದರಿಂದ ಮೊದಲು ಅಧಿಕಾರಿಗಳು ಕೆಲಸ ಮಾಡಿ, ಮಕ್ಕಳ ಹಾಜರಾತಿ ಕಡಿಮೆಯಾಗದಂತೆ ನೋಡಿಕೋಳ್ಳಿ ಎಂದರು.

ಕಾಮಗಾರಿ ಕಳಪೆ ಬ್ಲಾಕ್ ಲಿಸ್ಟ್ ಹಾಕಿ: ಮಸ್ಕಿ ತಾಲೂಕಿನ ವಿವಿಧ ಇಲಾಖೆಯಿಂದ ನಡೆದಿರುವ ಕಾಮಗಾರಿಗಳು ಕಳಪೆಯಾಗಿ ಮಾಡಿರುವ ಗುತ್ತಿಗೆದಾರರ ಲೈಸೆನ್ಸ್ ಒಂದು ತಿಂಗಳ ಅವಧಿಯಲ್ಲಿ ಕಪ್ಪು ಪಟ್ಟಿಗೆ ಹಾಕಿ ಆಗ ಅವರಿಗೆ ಗೊತ್ತಾಗುತ್ತೆ ಎಂದರು.

ಸಭೆಯಲ್ಲಿ ತಹಸೀಲ್ದಾರ್ ಮಂಜುನಾಥ್ ಭೋಗಾವತಿ, ತಾಪಂ ಇಒ ಅಮರೇಶ ಯಾದವ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಮಹಿಬೂಬ ಸಾಬ್ ಮುದ್ದಾಪುರ, ಕೆಡಿಪಿ ಸದಸ್ಯರಾದ ರಾಜೇಶ್ವರಿ, ಕರಿಯಪ್ಪ ಹಾಲಾಪುರ, ದೇವಪ್ಪ ರಾಠೋಡ್, ಬಸನಗೌಡ, ನೂರ ಅಹಮ್ಮದ್ ಸಂತೆಕಲ್ಲೂರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ರೈತ ಸಂಪರ್ಕ ಕೇಂದ್ರ ಹಳೆ ಕಟ್ಟಡಕ್ಕೆ ಶಿಫ್ಟ್ ಮಾಡಿ

ಮಸ್ಕಿ ಪಟ್ಟಣದಲ್ಲಿರುವ ರೈತ ಸಂಪರ್ಕ ಕೇಂದ್ರವನ್ನು ಕೂಡಲೇ ಹಳೆ ಕಚೇರಿಗೆ ಶಿಫ್ಟ್ ಮಾಡಿ ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಸಿಬ್ಬಂದಿಗಳನ್ನು ತೆಗೆದು ಬೇರೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಎಂದು ಸೂಚನೆ ನೀಡಿದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ