ವಿಶ್ವಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸಿದ ಮೋದಿ-ಮಾಜಿ ಸಚಿವ ಬಿ.ಸಿ. ಪಾಟೀಲ್‌

KannadaprabhaNewsNetwork |  
Published : Sep 18, 2024, 01:50 AM IST
ಪೋಟೊ ಶಿರ್ಷಕೆ೧೭ಎಚ್ ಕೆ ಅರ್ ೦೨ | Kannada Prabha

ಸಾರಾಂಶ

ವಿಶ್ವಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸುವ ದಿಕ್ಕಿನಲ್ಲಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಿಗೆ ನರೇಂದ್ರ ಮೋದಿ ಕಾರಣಿಬೂತರಾಗಿದ್ದಾರೆ. ಅವರ ಹುಟ್ಟುಹಬ್ಬವನ್ನು ಸಾಮಾಜಿಕ ಕಾರ್ಯಗಳ ಮೂಲಕ ಆಚರಿಸುವ ಮೂಲಕ ಈ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಹಿರೇಕೆರೂರು: ವಿಶ್ವಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸುವ ದಿಕ್ಕಿನಲ್ಲಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಿಗೆ ನರೇಂದ್ರ ಮೋದಿ ಕಾರಣಿಬೂತರಾಗಿದ್ದಾರೆ. ಅವರ ಹುಟ್ಟುಹಬ್ಬವನ್ನು ಸಾಮಾಜಿಕ ಕಾರ್ಯಗಳ ಮೂಲಕ ಆಚರಿಸುವ ಮೂಲಕ ಈ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.ಪಟ್ಟಣದ ಗುರುಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ೭೪ನೇ ಜನ್ಮ ದಿನದ ನಿಮಿತ್ತ ಬಿಜೆಪಿ ಯುವ ಮೋರ್ಚಾ, ನಮೋ ಭಾರತ ಹಿರೇಕೆರೂರ ಮತ್ತು ದಾವಣಗೆರೆಯ ಕರ್ನಾಟಕ ಹಿಮೊಫಿಲಿಯಾ ಸೊಸೈಟಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.ರಕ್ತದಾನ ಜೀವದಾನವಾಗಿದೆ. ರಕ್ತದಾನದ ಬಗೆಗಿನ ತಪ್ಪು ಕಲ್ಪನೆಗಳಿಂದ ಹೊರಬಂದು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯವೃದ್ಧಿ, ಹೊಸ ರಕ್ತ ಉತ್ಪತ್ತಿ ಚೈತನ್ಯ ಮತ್ತು ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದರು.ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಜಗದೀಶ ದೊಡ್ಡಗೌಡ್ರ ಮಾತನಾಡಿ, ದೇಶಕ್ಕಾಗಿ ಸ್ವಾರ್ಥವನ್ನು ಮರೆತು ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಯುವಕರ ಕಣ್ಮಣಿಯಾಗಿದ್ದಾರೆ. ಅವರ ಜನ್ಮ ದಿನದ ಅಂಗವಾಗಿ ನಾವೆಲ್ಲರೂ ಸೇರಿ ರಕ್ತದಾನವನ್ನು ಮಾಡುವ ಮೂಲಕ ಸಣ್ಣದೊಂದು ಸೇವಾ ಕಾರ್ಯವನ್ನು ನಾವು ಮಾಡುತ್ತಿದ್ದೇವೆ ಎಂದರು. ಕರ್ನಾಟಕ ಹಿಮೊಫಿಲಿಯಾ ಸೊಸೈಟಿ ಅಧ್ಯಕ್ಷ ಡಾ| ಸುರೇಶ ಹನಗವಾಡಿ ಮಾತನಾಡಿದರು. ಶಿಬಿರದಲ್ಲಿ ೭೪ ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮಂಡಳ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ಅಪೆಕ್ಸ್ ಬ್ಯಾಂಕ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಭಿಷೇಕ ಗುಡಗೂರ, ನಿಂಗಾಚಾರಿ ಮಾಯಾಚಾರಿ, ಶಿವಕುಮಾರ ಪ್ಯಾಟೇರ, ರವಿ ಖಂಡಿಬಾಗೂರ, ನಟರಾಜ ಪಾಟೀಲ, ರುದ್ರೇಶ ಬೇತೂರ, ಪ್ರವೀಣ್ ಸಣ್ಣಕ್ಕಿ, ರವಿ ಬಡಳ್ಳೇರ, ವೀರೇಶ ಗೌಡ್ರ, ಮಾರುತಿ ಮಾಸೂರ, ಅಖಿಲ್ ಪಾಟೀಲ, ಪರಮೇಶಪ್ಪ ಹಾವಳಿ, ರವಿ ಉಣಕಲ್, ಸಂಜೀವ ಹಕ್ಕಳ್ಳಿ, ಸುಪ್ರೀದ ಧಾರವಾಡಕರ, ಬಸವರಾಜ ಅರಕೇರಿ, ಗುರು ಕಡದಕಟ್ಟಿ, ರವಿ ಕಡೂರ, ನವೀನ್ ಹಾವಳಿ, ನವೀನ್ ಅಬಲೂರು.ರಾಮಚಂದ್ರ ಅಣಜೇರ್.ಸೇರಿದಂತೆ ಮುಖಂಡರು ಅಭಿಮಾನಿಗಳು ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ