ಕನ್ನಡಪ್ರಭ ವಾರ್ತೆ ಬೆಳಗಾವಿಭಾರತ ದೇಶವನ್ನು ಸೂಪರ್ ಪವರ್ ಮಾಡಲು ಹಾಗೂ ದೇಶದ ಸುರಕ್ಷತೆಗೆ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗುವುದು ಬಹಳ ಮುಖ್ಯ ಇದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.
ಮೋದಿಯವರು 2014 ರಲ್ಲಿ ಪ್ರಧಾನಿ ಆದಾಗ ಭಾರತದ ಆರ್ಥಿಕವಾಗಿ 14ನೇ ಸ್ಥಾನದಲ್ಲಿತ್ತು. ಆದರೆ, ಕೇವಲ 10 ವರ್ಷದಲ್ಲಿ ದೇಶದ ಆರ್ಥಿಕತೆ 5ನೇ ಸ್ಥಾನಕ್ಕೆ ತಂದಿದ್ದಾರೆ. ಮೋದಿಯವರು ಮತ್ತೆ ಪ್ರಧಾನಿಯಾದರೇ ದೇಶದ ಆರ್ಥಿಕತೆ 3ನೇ ಸ್ಥಾನಕ್ಕೆ ಬರಲಿದೆ. ಇನ್ನೂ 10-15 ವರ್ಷದಲ್ಲಿ ದೇಶ ಸೂಪರ್ ಪವರ್ ಆಗಿ ಆರ್ಥಿಕವಾಗಿ ನಂ.1 ಆಗಲಿದೆ. ಹಾಗಾಗಿ ಮೋದಿಯವರು ದೇಶದ ಸುರಕ್ಷತೆಗೆ ಬಹಳ ಅವಶ್ಯಕತೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದೆ ಮಂಗಲ ಸುರೇಶ ಅಂಗಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಪ್ರಮುಖರಾದ ಶಿಲ್ಪಾ ಶೆಟ್ಟರ್, ಶ್ರದ್ಧಾ ಶೆಟ್ಟರ್, ರಾಜು ಜೋಶಿ, ಡಾ.ಕಿರಣ ಪೋತದಾರ, ಸಂಗೀತಾ ದೇಸಾಯಿ, ಬಿ.ಎಂ.ಪಾಟೀಲ್, ಡಾ.ಧನಶ್ರೀ ಕುಲಕರ್ಣಿ, ಪ್ರಿಯಾಂಕಾ ಪೂಜಾರಿ, ಡಾ.ಕೃಷ್ಣಕುಮಾರ ಕಣ್ಣೈ, ಸಾಗರ ಬಿರ್ಜೆ, ರವಿರಾಜ ಚೌಗಲಾ, ವಿಶಾಲ ಪಾಟೀಲ, ಪ್ರಸಾದ, ಪಂಚಾಕ್ಷರಿಮಠ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.