ದೊಡ್ಡಬಳ್ಳಾಪುರ: ಪ್ರಧಾನ ಮಂತ್ರಿ ಧನ- ಧಾನ್ಯ ಕೃಷಿ ಯೋಜನೆ ಮತ್ತು ದ್ವಿದಳ ಧಾನ್ಯಗಳ ಸ್ವಾವಲಂಬನಾ ಮಿಷನ್‌ಗಳ ಚಾಲನೆ ಮತ್ತು ಕೃಷಿ ಮೂಲ ಸೌಕರ್ಯ ನಿಧಿ, ಪಶುಪಾಲನೆ, ಮೀನುಗಾರಿಕೆ, ಆಹಾರ ಸಂಸ್ಕರಣಾ ವಲಯಗಳ 1100ಕ್ಕೂ ಅಧಿಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆ ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಇದೇ ವೇಳೆ ಕೇಂದ್ರ ಸಚಿವ ಸಂಪುಟ ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ ಅನ್ನು ಅನುಮೋದಿಸಿ, ಇದು ದೇಸೀಯ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿರುವ ಐತಿಹಾಸಿಕ ಉಪಕ್ರಮವಾಗಿದೆ. ಈ ಮಿಷನ್ 2025- 26ರಿಂದ 2030- 31ರವರೆಗೆ 6 ವರ್ಷಗಳ ಅವಧಿಯಲ್ಲಿ ₹11,440 ಕೋಟಿ ರು. ವೆಚ್ಚದಲ್ಲಿ ಕಾರ‍್ಯಗತಗೊಳಿಸಲಾಗುವುದು. ಭಾರತದ ಆಹಾರ ವ್ಯವಸ್ಥೆ ಮತ್ತು ಆಹಾರ ಪದ್ಧತಿಯಲ್ಲಿ ದ್ವಿದಳ ಧಾನ್ಯಗಳು ವಿಶೇಷ ಮಹತ್ವವನ್ನು ಹೊಂದಿವೆ. ಭಾರತ ವಿಶ್ವದ ಅತಿದೊಡ್ಡ ದ್ವಿದಳ ಧಾನ್ಯಗಳ ಉತ್ಪಾದನೆ ಮತ್ತು ಬಳಸುವ ರಾಷ್ಟ್ರವಾಗಿದೆ. 2025- 26 ರ ಬಜೆಟ್‌ನಲ್ಲಿ "ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ " ಘೋಷಿಸಲಾಗಿದೆ ಎಂದರು.ಈ ಮಿಷನ್ ಸಂಶೋಧನೆ, ಬೀಜ ವ್ಯವಸ್ಥೆಗಳು, ಪ್ರದೇಶ ವಿಸ್ತರಣೆ, ಸಂಗ್ರಹಣೆ ಮತ್ತು ಬೆಲೆ ಸ್ಥಿರೀಕರಣವನ್ನು ಒಳಗೊಂಡಿರುವ ಸಮಗ್ರ ಕಾರ‍್ಯತಂತ್ರವನ್ನು ಅಳವಡಿಸಿಕೊಳ್ಳುತ್ತದೆ ಎಂಬುದನ್ನು ವಿವರಿಸಿದರು. ಈ ನೇರ ಪ್ರಸಾರದ ವೀಕ್ಷಣೆ ಕಾರ್ಯಕ್ರಮದಲ್ಲಿ ಸುಮಾರು 185 ರೈತರು, ರೈತ ಮಹಿಳೆಯರು, ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಕೇಂದ್ರದ ವಿಜ್ಞಾನಿಗಳು ಭಾಗವಹಿಸಿದ್ದರು.
11ಕೆಡಿಬಿಪಿ3-ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಿಎಂ ಧನ- ಧಾನ್ಯ ಕೃಷಿ ಯೋಜನೆ ಮತ್ತು ದ್ವಿದಳ ಧಾನ್ಯಗಳ ಸ್ವಾವಲಂಬನಾ ಮಿಷನ್‌ಗಳ ಚಾಲನೆ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆ ನಡೆಯಿತು.