ಮೋದಿ-ನನ್ನದು ಜನ್ಮಜನ್ಮದ ಸಂಬಂಧ: ದೇವೇಗೌಡ!

KannadaprabhaNewsNetwork |  
Published : Mar 08, 2024, 01:49 AM ISTUpdated : Mar 08, 2024, 02:03 PM IST
7ಎಚ್ಎಸ್ಎನ್16 : ಸಂಸದ ಪ್ರಜ್ವಲ್್‌ ರೇವಣ್ಣ ಅವರ 5 ವರ್ಷಗಳ ಸಾಧನೆ ಕುರಿತ ಪುಸ್ತಕವನ್ನು ದೇವೇಗೌಡರು ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಪ್ರಧಾನಿ ಮೋದಿ ಮತ್ತು ನನ್ನದು ಯಾವುದೋ ಜನ್ಮಾಂತರದ ಸಂಬಂಧ. ನನ್ನ ಬಗ್ಗೆ ಅವರು ತುಂಬಾ ಗೌರವ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಪ್ರಧಾನಿ ಮೋದಿ ಮತ್ತು ನನ್ನದು ಯಾವುದೋ ಜನ್ಮಾಂತರದ ಸಂಬಂಧ. ನನ್ನ ಬಗ್ಗೆ ಅವರು ತುಂಬಾ ಗೌರವ ಇಟ್ಟುಕೊಂಡಿದ್ದಾರೆ. ಅದೇ ಕಾಂಗ್ರೆಸ್ ನನ್ನನ್ನು ಅಧಿಕಾರದಿಂದ ಕಿತ್ತು ಹಾಕಿತು. ನಾನು ಒಂದೇ ಒಂದು ರುಪಾಯಿ ದುರುಪಯೋಗ ಮಾಡಿಲ್ಲ. ಇಡೀ ಹಿಂದುಸ್ಥಾನದಲ್ಲಿ ನನ್ನ ಬಗ್ಗೆ ಯಾರೂ ಆರೋಪ ಮಾಡಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ 5 ವರ್ಷಗಳ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನೊಳಗೊಂಡ ಪುಸ್ತಕವನ್ನು ಗುರುವಾರ ಬಿಡುಗಡೆ ಮಾಡಿ ದೇವೇಗೌಡ ಮಾತನಾಡಿದರು. ಹಾಸನದಲ್ಲಿ ಸಮಸ್ಯೆಗಳು ಸಾಕಷ್ಟು ಇದೆ. ಆದರೂ ಪ್ರಜ್ವಲ್ ಶಕ್ತಿಮೀರಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ. ವಾರದ ಹಿಂದೆ ಕಾಂಗ್ರೆಸ್ಸಿಗರು ಅರಸೀಕೆರೆ, ಹಾಸನದಲ್ಲಿ ಸಭೆ ಮಾಡಿದ್ದಾರೆ. ಹಾಸನದ ಮೆಡಿಕಲ್ ಕಾಲೇಜು ನೂತನ ಕಟ್ಟಡ ಉದ್ಘಾಟನೆ ಮಾಡಿದ್ದಾರೆ. ಆದರೆ ಈ ಕಾಲೇಜು ಆಗಿದ್ದು ಯಾವಾಗ? ಮೆಡಿಕಲ್ ಕಾಲೇಜು ಉಳಿಸಲು ರೇವಣ್ಣ ಮಾಡಿದ ಪ್ರಯತ್ನ ಗೊತ್ತಿದೆಯಾ? ಎಂದರು.ಇತ್ತೀಚೆಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಮ್ಮ ಅವಧಿಯಲ್ಲಿ ಆದ ಕೆಲಸಗಳನ್ನು ಈಗ ಉದ್ಘಾಟನೆ ಮಾಡುತ್ತಿದ್ದಾರೆ. ಪ್ರಜ್ವಲ್ ಮಾಡಿರೋ ಕೆಲಸ ಜನರಿಗೆ ಮುಟ್ಟಿಸಲು ನಾವು ಹಿಂದೆ ಬಿದ್ದರೆ ಮುಂದಿನ ೧೦೦ ದಿನಗಳಲ್ಲಿ ನಮ್ಮ ಎದುರಾಳಿಗಳು ನಮ್ಮನ್ನ ರಾಜಕೀಯವಾಗಿ ಮುಗಿಸುತ್ತಾರೆ. ಇಷ್ಟೆಲ್ಲಾ ಕೆಲಸ ಮಾಡಿರೋ ಸಂಸದರನ್ನು ಸೋಲಿಸಲೇಬೇಕು ಎಂದು ಕೆಲಸ ಮಾಡುತ್ತಿದ್ದಾರೆ.

ನಾನು ಪ್ರಧಾನಿಯಾಗಿ ದೇಶದ ಹಲವಾರು ಸಮಸ್ಯೆ ಬಗೆಹರಿಸಿದ್ದೇನೆ. ನೇಗಿಲ ಗೆರೆ ಪುಸ್ತಕ ಓದಬೇಕು. ನನಗೆ ಇನ್ನೂ ಎರಡು ವರ್ಷ ರಾಜ್ಯಸಭೆ ಅವಕಾಶ ಇದೆ. ನಾನು ಪ್ರಜ್ವಲ್ ಹಿಂದೆ ನಿಲ್ಲುತ್ತೇನೆ, ಸಲಹೆ ಕೊಡುತ್ತೇನೆ ಎಂದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ