ಕೂಡ್ಲಿಗಿ: ದೇಶದ ಪ್ರಗತಿಗೆ ಮೋದಿಯೇ ಪ್ರಧಾನಿಯಾಗುವುದು ಸೂಕ್ತ ಎಂದು ದೇಶದ ಜನತೆ ಅತೀ ದೊಡ್ಡ ಪಕ್ಷವಾಗಿ ಮೂರನೇ ಬಾರಿಗೆ ಆಯ್ಕೆ ಮಾಡಿರುವುದು ಈ ದೇಶದಲ್ಲಿ ಮೋದಿಯ ಅಗತ್ಯತೆ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದು ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಬಣವಿಕಲ್ಲು ರಾಜು ಹೇಳಿದರು.
ಮೋದಿ ಭಾರತಕ್ಕಷ್ಟೇ ಅಲ್ಲದೇ ಇಡೀ ಜಗತ್ತಿಗೆ ಬೇಕಾದ ಶಕ್ತಿಯಾಗಿದ್ದು ನಮ್ಮ ದೇಶವನ್ನು ಇಡೀ ಜಗತ್ತೇ ಬೆರಗಾಗುವಂತೆ ನೋಡುವಂತೆ ಮಾಡಿದ ಕೀರ್ತಿ ಮೋದಿಯವರದ್ದಾಗಿದೆ. ಇಲ್ಲಿಯವರೆಗೂ ನನೆಗುದಿಗೆ ಬಿದ್ದಿದ್ದ ಬೃಹತ್ ಯೋಜನೆಗಳನ್ನು ಸಾಕಾರ ಮಾಡುವ ಮೂಲಕ ಭಾರತ ಜಗತ್ತಿನಲ್ಲಿಯೇ ಮುಂಚೂಣಿ ರಾಷ್ಟ್ರವಾಗಲು ಕಾರಣವಾಗಿದ್ದಾರೆ. ಇಂತಹ ವ್ಯಕ್ತಿ ಮೂರನೇ ಬಾರಿಗೆ ಪ್ರಧಾನಿಯಾಗಿರುವುದು ನಮ್ಮೆಲ್ಲರ ಪುಣ್ಯ ಎಂದರು.
ಬಿಜೆಪಿ ಯುವ ಮುಖಂಡ ಕೆ.ಎಚ್.ಎಂ.ಸಚಿನ್ ಕುಮಾರ್ ಮಾತನಾಡಿ, ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿರುವುದು, ನಮ್ಮ ರಾಜ್ಯದ ಐವರಿಗೆ ಮಂತ್ರಿಗಿರಿ ನೀಡುವ ಮೂಲಕ ಕರ್ನಾಟಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ನಮ್ಮ ಸಂತಸ ಇಮ್ಮಡಿಸಿದೆ. ಮುಂದಿನ ದಿನಗಳಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿಯಾಗಲಿದೆ ಎಂದರು.ಮೋದಿ ದೂರದೃಷ್ಟಿ, ದೇಶರಕ್ಷಣೆ ಬಗ್ಗೆ ಅವರು ತಳೆದಿರುವ ನೀತಿ ಈಗ್ಗೆ 10 ವರ್ಷಗಳಿಂದ ದೇಶದ ಜನತೆ ನೋಡಿದ್ದಾರೆ. ಈಗಾಗಿಯೇ ಮೂರನೇ ಬಾರಿಗೆ ಅವಕಾಶ ನೀಡಿದ್ದರೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತಕರು ಪರಸ್ಪರ ಸಿಹಿತಿನಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಸ್.ದುರುಗೇಶ್, ಸಚಿನ್, ಅಂಬಲಿ ನಾಗರಾಜ, ಗಿರೀಶ್, ವಾಗೀಶಮೂರ್ತಿ, ಗುರಿಕಾರ ರಾಘವೇಂದ್ರ, ಅಜೇಯ್, ಭರತ್, ಪ್ರಕಾಶ್ ನಾಯ್ಕ, ಉಗ್ರಂ ಕಿಟ್ಟಿ, ರಾಘವೇಂದ್ರ ಮುಂತಾದ ಬಿಜೆಪಿ ಮುಖಂಡರು ಹಾಜರಿದ್ದರು.