ಕನ್ನಡಪ್ರಭ ವಾರ್ತೆ ಬೀಳಗಿಪ್ರಧಾನಿ ನರೇಂದ್ರ ಮೋದಿಯವರು 2026ರ ಅಕ್ಟೋಬರ್ 7ರಂದು ಸಾರ್ವಜನಿಕ ಸೇವೆ ಹಾಗೂ ಸುಶಾಸನದ ಪಯಣದಲ್ಲಿ 25 ವರ್ಷ ಪೂರ್ಣಗೊಳಿದ್ದು, 2001ರ ಅ.7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ದೇಶದ ಆಡಳಿತ ಮತ್ತು ಜನಕಲ್ಯಾಣ ಕ್ಷೇತ್ರಗಳಲ್ಲಿ ಹಲವು ಬದಲಾವಣೆಗಳಿಗೆ ಕಾರಣರಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಡಾ.ಮುರುಗೇಶ ಆರ್. ನಿರಾಣಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ಪ್ರಧಾನಿ ನರೇಂದ್ರ ಮೋದಿಯವರು 2026ರ ಅಕ್ಟೋಬರ್ 7ರಂದು ಸಾರ್ವಜನಿಕ ಸೇವೆ ಹಾಗೂ ಸುಶಾಸನದ ಪಯಣದಲ್ಲಿ 25 ವರ್ಷ ಪೂರ್ಣಗೊಳಿದ್ದು, 2001ರ ಅ.7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ದೇಶದ ಆಡಳಿತ ಮತ್ತು ಜನಕಲ್ಯಾಣ ಕ್ಷೇತ್ರಗಳಲ್ಲಿ ಹಲವು ಬದಲಾವಣೆಗಳಿಗೆ ಕಾರಣರಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಡಾ.ಮುರುಗೇಶ ಆರ್. ನಿರಾಣಿ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಬೀಳಗಿ ಮಂಡಲದಿಂದ ಆಯೋಜಿಸಿದ್ದ ಸೇವಾ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದರು.
ನರೇಂದ್ರ ಮೋದಿಯವರ ಜನಸೇವೆಯ ಬದ್ಧತೆ ಹಾಗೂ ಸೇವಾ ಮನೋಭಾವ ಕಾರ್ಯಕರ್ತರಿಗೆ ಸ್ಫೂರ್ತಿದಾಯಕವಾಗಿದೆ. ಅವರ ಜನ್ಮದಿನದ ಅಂಗವಾಗಿ ತಿಂಗಳ ಕಾಲ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಸೇವಾ ಮನೋಭಾವದಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜನಸೇವೆಯನ್ನೇ ಸರ್ವೋನ್ನತ ಧ್ಯೇಯವನ್ನಾಗಿಸಿಕೊಂಡು ವಿಕಸಿತ ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣದತ್ತ ಸಾಗುತ್ತಿರುವುದು ಪ್ರೇರಣಾದಾಯಕವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಜನಪರ ಕಲ್ಯಾಣ ಯೋಜನೆಗಳು ಹಾಗೂ ರಾಷ್ಟ್ರೀಯ ಪ್ರತೀಕಗಳನ್ನು ರಂಗೋಲಿ ಚಿತ್ತಾರಗಳ ಮೂಲಕ ಪ್ರದರ್ಶಿಸಲಾಯಿತು.
ಮಂಡಲ ಪ್ರಧಾನ ಕಾರ್ಯದರ್ಶಿ ಮಿಥುನ ನಾಯಕ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಠ್ಠಲ ಯತ್ನಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ದಾಕ್ಷಾಯನಿ ಜಂಬಗಿ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಛಬ್ಬಿ, ಹಿರಿಯರಾದ ಮಲ್ಲಪ್ಪ ಶಂಭೋಜಿ, ಮಲ್ಲಿಕಾರ್ಜುನ ಅಂಗಡಿ, ಬಸವರಾಜ ಉಮಚಗಿಮಠ, ನಿಂಗಪ್ಪ ದಂಧರಗಿ, ಸಂತೋಷ ನಿಂಬಾಳ್ಕರ್, ಸಿದ್ದು ಮಾದರ, ಮುತ್ತಣ್ಣ ಅಂಗಡಿ, ಪ್ರಕಾಶ ಕಟಗೇರಿ, ಮುತ್ತು ಬೋರ್ಜಿ, ಸಲಬಣ್ಣ ಡಂಗಿ, ರಶ್ಮಿ ಬೋರ್ಜಿ, ಮೀನಾಕ್ಷಿ ಮರಾಠೆ, ಮಾಲತಿ ಪತ್ತಾರ ಹಾಗೂ ರೇಣುಕಾ ಬಡಿಗೇರ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.