ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್‌ಎನ್‌ಎಲ್‌ನಲ್ಲಿನ ಘಟನಾವಳಿಗಳ ಕುರಿತು ಇಲಾಖೆಯಲ್ಲಿ ಆಂತರಿಕ ತನಿಖೆ ನಡೆಸಿಲಾಗಿದ್ದು, ಈ ವೇಳೆ ನೌಕರರು ನೀಡಿದ ಹೇಳಿಕೆಗಳನ್ನೇ ನಿಜವೆಂದು ನಂಬಿ ಅವರ ಮೇಲೆ ಕ್ರಮ ಕೈಗೊಳ್ಳದೆ ಬಿಡಲಾಗಿದೆ. ಇದರ ಬಗ್ಗೆ ಈಗಾಗಲೇ ಬಿಜೆಪಿ ಸಂಸದರಿಗೆ, ನಾಯಕರಿಗೆ ತಿಳಿಸಿದ್ದೇನೆ. ನಿಗಮದಲ್ಲಿ ಕಮ್ಯೂನಿಸ್ಟ್ ಯುನಿಯನ್ ಟೀಂನಲ್ಲಿರುವ ಕೆಲವರು ಪ್ರಧಾನಿ ಬಗ್ಗೆಯೇ ಅವಹೇಳನ ಮಾಡುತ್ತಿದ್ದಾರೆ. ದೇಶದ ಪ್ರಧಾನಿ ಮೋದಿಯವರಿಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದರೂ ಬಿಜೆಪಿ ನಾಯಕರು ಯಾಕೆ ಸುಮ್ಮನಿದ್ದಾರೆ?. ಹೀಗೆಯೇ ಮುಂದುವರಿದರೆ ರಾಜ್ಯಾದ್ಯಂತ ಸಂಚರಿಸಿ ಪ್ರತಿ ಜಿಲ್ಲೆಯಲ್ಲೂ ಸುದ್ದಿಗೋಷ್ಠಿ ನಡೆಸಿ, ದಾಖಲೆಗಳನ್ನು ಬಿಡುಗಡೆಗೊಳಿಸಿ ಬಿಜೆಪಿಗರ ಮೌನದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತೇನೆ. ದೇಶದ ಪ್ರಧಾನಿಗೆ ಅವಮಾನಿಸಿದವರನ್ನು ಹಾಗೂ ಇಲಾಖೆಯಲ್ಲಿ ಅಕ್ರಮದ ಆರೋಪ ಹೊತ್ತಿರುವವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.