ಕನ್ನಡಪ್ರಭ ವಾರ್ತೆ ವಿಜಯಪುರ
ಜೆಡಿಎಸ್ ತಾಲೂಕು ಅಧ್ಯಕ್ಷ ನಿಂಗನಗೌಡ ಸೋಲಾಪುರ ಮಾತನಾಡಿ, ಬರಪೀಡಿತ ತಾಲೂಕು ಘೋಷಿಸಿ ಅದಕ್ಕೆ ಪೂರಕವಾಗಿರುವ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಕಷ್ಟ ಕಾಲದಲ್ಲಿ ರೈತನ ಕೈಹಿಡಿಯಬೇಕಿದ್ದ ಸರ್ಕಾರ ₹2500 ಪರಿಹಾರ ಘೋಷಿಸಿದ್ದು, ರೈತನ ಭಾವನೆಯ ಮೇಲೆ ಬರೆ ಎಳದಿದೆ. ರೈತನ ಸಂಕಷ್ಟ ಅರ್ಥ ಮಾಡಿಕೊಂಡು ಸರ್ಕಾರ ಪ್ರತಿ ಎಕರೆಗೆ ಕನಿಷ್ಠ ₹25,000 ಪರಿಹಾರ ಘೋಷಿಸಿಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಎಸ್‌ಸಿ ವಿಭಾಗದ ಜಿಲ್ಲಾಧ್ಯಕ್ಷ ಸಂಜೀವ ದೊಡಮನಿ, ರಾಮಚಂದ್ರ ಚವ್ಹಾಣ, ಸುಜಾತಾ ಕಣಬೂರ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎನ್.ಪಾಟೀಲ, ದಯಾನಂದ ಕಸಮೂಳೆ, ಶಿವಾನಂದ ಹಿರೇಕುರಬರ, ಶಿವು ಕೋಳಿ, ವಿಕಾಸ ಬಿರಾದಾರ, ಕೇವಸನ ಸಾವಳೆ, ಭೀಮರಾಯ ಇಬ್ರಾಹಿಂಪುರ, ಲಾಲಬಾಶಾ ಜಮಾದಾರ ಇದ್ದರು.