ವಿವೇಕ ಸ್ಮಾರಕ ಉದ್ಘಾಟನೆ ಸಾವಿರಾರು ಭಕ್ತರು ಆಗಮನ

KannadaprabhaNewsNetwork |  
Published : Aug 02, 2026, 01:15 AM IST
22 | Kannada Prabha

ಸಾರಾಂಶ

ಕೆಲವೇ ಸೆಕೆಂಡುಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಜೋರು ಚಪ್ಪಾಳೆಯೊಂದಿಗೆ ಸ್ವಾಗತಿಸಿದರು

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಯಾದವಗಿರಿಯ ವಿದ್ಯಾಶಾಲಾವರಣದಲ್ಲಿ ಶ್ರೀ ರಾಮಕೃಷ್ಣ ಆಶ್ರಮವು ವಿವೇಕ ಸ್ಮಾರಕ ಉದ್ಘಾಟನೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಸಮಾರಂಭಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಆಗಮಿಸಿದ್ದರು.

ಶ್ರೀರಾಮಕೃಷ್ಣ ವಿದ್ಯಾಶಾಲೆ ಮೈದಾನಕ್ಕೆ ತಂಡೋಪ ತಂಡವಾಗಿ ಆಶ್ರಮದ ಭಕ್ತರು, ಮೋದಿ ಅವರ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಆಗಮಿಸಿದ್ದರು.

ಸಭಿಕರಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಸಂಸದ ಪ್ರತಾಪ ಸಿಂಹ, ಶಾಸಕ ಟಿ.ಎಸ್‌. ಶ್ರೀವತ್ಸ, ಮಾಜಿ ಶಾಸಕರಾದ ಎಸ್‌.ಎ. ರಾಮದಾಸ್, ಗೋ. ಮಧುಸೂದನ್, ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎ.ಪಿ. ಜ್ಞಾನಪ್ರಕಾಶ್, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಪಿ. ಶಿವರಾಜ್, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಪಿ. ತ್ಯಾಗರಾಜ್, ವಿಶ್ರಾಂತ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌, ಡಿಎಫ್ಒ ಪರಮೇಶ್‌, ಆರ್‌.ಎಸ್‌ಎಸ್‌ನ ಮ. ವೆಂಕಟರಾಮ್, ಬಿಎಸ್‌ಎಸ್‌ ವಿದ್ಯೋದಯ ಶಾಲೆ ಕಾರ್ಯದರ್ಶಿ ವಾಸುದೇವ ಭಟ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಡಾ.ಕೆ.ಬಿ. ಲಿಂಗರಾಜು, ಡಾ.ಕೆ. ಲೀಲಾಪ್ರಕಾಶ್, ಶಿಲ್ಪಿ ಅರುಣ್‌ಯೋಗಿರಾಜ್‌ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಅಲ್ಲದೆ ನೂರಾರು ಮಂದಿ ಮಾತಾಜಿಗಳು, ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆಗಮಿಸಿದ್ದರು.

ಮೋದಿ ಮೋದಿ ಕೂಗು

ವೇದಿಕೆಗೆ ಮೊದಲಿಗೆ ಶ್ರೀ ಗೌತಮಾನಂದಜಿ, ಶ್ರೀ ಮುಕ್ತಿದಾನಂದಜಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಕೆ. ಹರೀಶ್‌ಗೌಡ ಆಗಮಿಸಿದರು. ಈ ವೇಳೆ ಮೋದಿ ಆಗಮನಕ್ಕಾಗಿ ಸಭೀಕರೆಲ್ಲರೂ ಮೋದಿ ಮೋದಿ ಕೂಗತೊಡಗಿದರು.

ಕೆಲವೇ ಸೆಕೆಂಡುಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಜೋರು ಚಪ್ಪಾಳೆಯೊಂದಿಗೆ ಸ್ವಾಗತಿಸಿದರು. ತಮ್ಮ ಭಾಷಣವನ್ನು ಮೋದಿ ಅವರು ಮೈಸೂರು ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಆರಂಭಿಸಿದರು.

-------------------

eom/mys/dnm/

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಪ್ರಭುತ್ವದ ಭದ್ರ ಅಡಿಪಾಯಕ್ಕೆ ಎಸ್‌ಐಆರ್‌ನಲ್ಲಿ ಭಾಗಿಯಾಗಿ
ವ್ಯಸನಮುಕ್ತ ಸಮಾಜಕ್ಕೆ ಯುವಕರ ಪಾತ್ರ ಮುಖ್ಯ