ಪ್ರಜೆಗಳಿಗೆ ಘನತೆ ಬದುಕು ಮೋದಿ ಸಂಕಲ್ಪ

KannadaprabhaNewsNetwork |  
Published : Apr 25, 2024, 01:04 AM IST
(ಪೋಟೊ 24 ಬಿಕೆಟಿ8, ನಗರದಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ.) | Kannada Prabha

ಸಾರಾಂಶ

ವಿಕಸಿತ ಭಾರತದಲ್ಲಿ ಪ್ರತಿ ಪ್ರಜೆಗೂ ಘನತೆಯ ಬದುಕು ನೀಡುವುದು ನರೇಂದ್ರ ಮೋದಿಯವರ ಸಂಕಲ್ಪವಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿಕಸಿತ ಭಾರತದಲ್ಲಿ ಪ್ರತಿ ಪ್ರಜೆಗೂ ಘನತೆಯ ಬದುಕು ನೀಡುವುದು ನರೇಂದ್ರ ಮೋದಿಯವರ ಸಂಕಲ್ಪವಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಬಣ್ಣಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಬಾಗಲಕೋಟೆ ಕ್ಷೇತ್ರದಿಂದ ನಗರದ 12ನೇ ವಾರ್ಡ್‌ನಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದ ಪಾದಯಾತ್ರೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಭ್ರಷ್ಟಾಚಾರ ವಿರುದ್ಧ ಹೋರಾಟ, ಬಡತನ ನಿವಾರಣೆಯ ದಿಟ್ಟ ಕ್ರಮಗಳು, ಅಭಿವೃದ್ಧಿ ಯೋಜನೆಗಳು ಜನರನ್ನು ತಲುಪಿಸಿದ ಬಗೆ, ನುಡಿದಂತೆ ನಡೆದಿದ್ದರಿಂದ ಗಳಿಸಿರುವ ಜನರ ಪ್ರೀತಿ, ಕಳೆದ ಹತ್ತು ವರ್ಷಗಳಲ್ಲಿ ವೃದ್ಧಿಸಿರುವ ಭಾರತದ ವರ್ಚಸ್ಸು, ಜಗತ್ತಿನ ರಾಷ್ಟ್ರಗಳ ಪೈಕಿ 11ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆಯನ್ನು ಪ್ರಧಾನಿ ಮೋದಿ 10 ವರ್ಷಗಳಲ್ಲಿ 5ನೇ ಸ್ಥಾನಕ್ಕೆ ತಂದಿದ್ದಾರೆ. ಆದಷ್ಟು ಶೀಘ್ರ ಭಾರತ ಹೇಗೆ ವಿಶ್ವದ ಮೂರನೇ ಆರ್ಥಿಕತೆ ಆಗಬಲ್ಲದು, ಬಡತನ ವಿರುದ್ಧ ಹೋರಾಟವನ್ನು ಗೆಲ್ಲಲು ಮೋದಿ 25 ಕೋಟಿ ಜನರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದರು.

ಯಾವುದೇ ಸೌಲಭ್ಯ, ಸೌಕರ್ಯಗಳಿಲ್ಲದ ಬಡವರಿಗೆ ಬ್ಯಾಂಕ್ ಖಾತೆ, ಎಲ್ಪಿಜಿ ಗ್ಯಾಸ್ ಸಂಪರ್ಕ, ನಲ್ಲಿ ನೀರು, ಆರೋಗ್ಯ ವಿಮೆ, ಮನೆಗಳು, ಶೌಚಗೃಹಗಳ ನಿರ್ಮಾಣ ಅವಶ್ಯಕ ಸೌಕರ್ಯ ಕಲ್ಪಿಸಿ ಜನರ ಜೀವನ ಮಟ್ಟವನ್ನು ಉತ್ತಮಪಡಿಸಿದ್ದು ಪ್ರಧಾನಿ ಮೋದಿಯವರ ಬಿಜೆಪಿ ಸರ್ಕಾರ. ಬಡವರು ಚಿಂತೆಗಳಿಂದ ಸಂಪೂರ್ಣ ಮುಕ್ತರಾಗಿ, ಸಾಧ್ಯತೆಗಳಿಂದ ಉಪಯುಕ್ತ ಬದುಕು ಸಾಗಿಸುವಂತಾಗಬೇಕು. ವಿಕಸಿತ ಭಾರತದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಘನತೆ ಮತ್ತು ಸಂತೋಷದ ಜೀವನ ನಡೆಸುವಂತಾಗಬೇಕು ಎಂಬುದು ಬಜೆಪಿಯ ಸಂಕಲ್ಪವಾಗಿದೆ ಎಂದು ಮಾಹಿತಿ ನೀಡಿದರು.

ಪಾದಯಾತ್ರೆ ಬಾಗಲಕೋಟೆ ನಗರದ 12 ನೇ ವಾರ್ಡ್‌ನಲ್ಲಿ ಕೊತ್ತಲೇಶ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ಕಿಲ್ಲಾ ಓಣಿ, ಟಂಕಸಾಲಿ ಗಲ್ಲಿ ಯಲ್ಲಿ ಮನೆ ಮನೆ ತೆರಳಿ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಪರ ಮತಯಾಚನೆ ಮಾಡಲಾಯಿತು.

ಪಾದಯಾತ್ರೆಯಲ್ಲಿ ಬಸವರಾಜ ಯಂಕಂಚಿ, ರಾಜು ನಾಯ್ಕರ, ಮುತ್ತಣ್ಣ ಬೆಣ್ಣೂರ, ಸಲಿಂ ಮೋಮಿನ್, ನಗರಸಭೆ ಸದಸ್ಯ ಪ್ರದೀಪ್ ರಾಯ್ಕರ್, ಶಶಿಕಲಾ ಮಜ್ಜಗಿ, ಶೋಭಾರಾವ, ರವಿ ಧಾಮಜಿ, ಬೀಮಶಿ ಮೋರೆ, ತಾನಾಜಿ ಜಮಖಂಡಿ, ಮಮ್ಮದ್‌ ಆಸೀಫ್‌, ಆಸಿ ಗೋವೆ, ಪ್ರದೀಪ ಮೀರಜಕರ, ಸಂತೋಷ ಅರಕೇರಿ, ಸಂತೋಷ ಪಡಸಲಗಿ, ಪ್ರಜ್ವಲ ಕರಿಯಪ್ಪ ಕರಿಯಪ್ಪನ್ನವರ, ಸಂಗಣ್ಣ ಹಡಗಲಿ, ಗೀರಶ ಅಶ್ರೀತ್, ಹನಮಂತ ದೇಶಪಾಂಡೆ, ರಾಜು ಅನ್ವೇಕರ, ರಾಘವೇಂದ್ರ ಕುಲಕರ್ಣಿ, ರಾಘು ಕರಾಂಡೆ, ಮಿಥುನ ಪತ್ತಾರ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.ಬಡವರು ಚಿಂತೆಗಳಿಂದ ಸಂಪೂರ್ಣ ಮುಕ್ತರಾಗಿ, ಸಾಧ್ಯತೆಗಳಿದಿಂದ ಯುಕ್ತರಾಗಿ ಬದುಕು ಸಾಗಿಸುವಂತಾಗಬೇಕು. ವಿಕಸಿತ ಭಾರತದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಘನತೆ ಮತ್ತು ಸಂತೋಷದ ಜೀವನ ನಡೆಸುವಂತಾಗಬೇಕು ಎಂಬುದು ಬಜೆಪಿಯ ಸಂಕಲ್ಪ.

- ವೀರಣ್ಣ ಚರಂತಿಮಠ ಮಾಜಿ ಶಾಸಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್‌ ಬಿಡಿ ಪುಸ್ತಕ ಹಿಡಿ’ ಅಭಿಯಾನ
ಬಾಗಲಕೋಟೆ ಗಲಭೆಗೆ ಕೇಸರಿ ಪಡೆ ಗರಂ