ಕನ್ನಡಪ್ರಭ ವಾರ್ತೆ ವಿಜಯಪುರ:
ನಗರದ ಬಿಎಲ್‌ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸುದ್ದಿಗೋಷ್ಠಿಯ ನಡೆಸಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಘೋಷಿಸಿದಾಗ ಇದನ್ನು ನಿಗಿಸೋದು ಇವರಿಂದ ಆಗಲ್ಲ, ಇದು ಅಸಾಧ್ಯದ ಮಾತು ಎಂದಿದ್ದರು. ನಾವು ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿ ಇದೀಗ ಕೇವಲ 10ತಿಂಗಳಿನಲ್ಲಿ 90ರಷ್ಟು ಯಶಸ್ವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಮೋದಿ ಅವರು ರಾಜ್ಯಕ್ಕೆ ಬರ ಬಂದಾಗ ರಾಜ್ಯ ಸರ್ಕಾರಕ್ಕೆ ಅಡಚಣೆ ಮಾಡಬೇಕು ಎಂದು ಒಂದು ಪೈಸೆ ಬರ ಪರಿಹಾರ ಕೊಡಲಿಲ್ಲ, ಕೊಟ್ಟಿದ್ದರೆ ಬರ ಪೀಡಿತ ಕುಟುಂಬಗಳಿಗೆ ತಲಾ ₹13ಸಾವಿರ ಪರಿಹಾರ ಕೊಡಬಹುದಾಗಿತ್ತು. ದುರ್ದೈವ ಬರ ಪರಿಹಾರ ಕೊಡುವುದರಲ್ಲಿ ಕೇಂದ್ರದವರು ರಾಜಕಾರಣ ಮಾಡಿದರು ಎಂದು ಆರೋಪಿಸಿದರು.ಕೇಂದ್ರದಲ್ಲು ಕಾಂಗ್ರೆಸ್ ಭರವಸೆ
ಕಾಂಗ್ರೆಸ್ ಗ್ಯಾರಂಟಿಗಳು ದೇಶದಲ್ಲಿ ಈಗಾಗಲೇ ವಿಶೇಷವಾದ ಪರಿಣಾಮ ಬೀರಿವೆ. ವಿಜಯಪುರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಸರಳ ಸಜ್ಜನಿಕೆಯ ರಾಜೂ ಆಲಗೂರಗೆ ಮತದಾರರು ಆಯ್ಕೆ ಮಾಡಲಿದ್ದು, ಜೊತೆಗೆ ಉತ್ತರ ಕರ್ನಾಟಕದಲ್ಲಿನ 12 ಸ್ಥಾನಗಳನ್ನೂ ನಾವು ಗೆಲ್ಲುತ್ತೇವೆ. ಇದಕ್ಕೆ ಕಾರಣ ನಮ್ಮ ಗ್ಯಾರಂಟಿಗಳ ಸಾಧನೆ ಜೊತೆಗೆ ಜನಪರ ಕಾನೂನು ಜಾರಿಗೆ ತರಲು ಕಾಂತ್ರಿಕಾರಕ ಹೆಜ್ಜೆ ಇಟ್ಟಿದ್ದೇವೆ. ವಿಳಂಬವಾಗುತ್ತಿದ್ದ ಬಡವರ ಪ್ರಕರಣಗಳಿದ್ದರೆ ಅನವಶ್ಯಕವಾಗಿ ಮುದ್ದತ್ತುಗಳನ್ನು ಕೊಡದೆ ಆದ್ಯತೆ ಮೇಲೆ 6 ತಿಂಗಳಲ್ಲಿ ನಿಕಾಲಿ ಮಾಡುವ ಮಾಡಿದ್ದೇವೆ ಎಂದರು.
ಬಾಕ್ಸ್
ಎಲೆಕ್ಟ್ರಾಲ್ ಬಾಂಡ್ ಜಾರಿಗೆ ತರುವ ಮೂಲಕ ದೇಣಿಗೆ ನೀಡಿದವರ ಮಾಹಿತಿ ಲಭ್ಯವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಎಕ್ಸಟ್ರಾನ್ಷನ್ ಮಾಡುವ ಮೂಲಕ ಕೆಟ್ಟ ಹೆಜ್ಜೆ ಇಟ್ಟು, ನೀಚ ಮಟ್ಟಕ್ಕೆ ಬಿಜೆಪಿಯವರು ಇಳಿದಿದ್ದಾರೆ. ಬಿಜೆಪಿಯವರು ₹16,600 ಕೋಟಿ ಹಣ ಸಂಗ್ರಹ ಮಾಡಿದ್ದಾರೆ. ಇದರ ಇತಿಹಾಸ ನೋಡಿದರೆ ಇಡಿ, ಸಿಬಿಐ ಕೇಸ್ ಇದ್ದವರು ಇವರಿಗೆ ಹಣ ಕೊಟ್ಟಿದಾರೆ. ಅವರು ಹಣ ಕೊಟ್ಟ ತಕ್ಷಣ ಇಡಿ, ಸಿಬಿಐ ಕೇಸ್‌ಗಳು ಕ್ಲೋಸ್ ಆಗುತ್ತವೆ ಎಂದರೆ ಅರ್ಥ ಏನು?, ಇದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಚುನಾವಣಾ ಆಯೋಗ ಕೂಡ ಗಂಭೀರವಾಗಿ ಪರಿಗಣಿಸಬೇಕಿದೆ.ಸುಳ್ಳು ಹೇಳುವ ಮೂಲಕ ದೇಶದ ದೊಡ್ಡ ಪ್ರಜಾಪ್ರಭುತ್ವವನ್ನು ಅಶಕ್ತಗೊಳಿಸುವ ಷಡ್ಯಂತ್ರ ನಡೆದಿದೆ. ಮತದಾರರು ಎಚ್ಚೆತ್ತುಕೊಂಡು ಕಾಂಗ್ರೆಸ್ ಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಚಂಬು ಯಾರು ಕೊಟ್ಟಿದ್ದಾರೆ ಎಂಬುದನ್ನು ನಾವು ಅಂಕಿ ಸಂಖ್ಯೆಗಳ ಸಮೇತ ಹೇಳಿದ್ದೇವೆ. ಬರ ಪರಿಹಾರ ಕೊಡುವಲ್ಲಿ ಯಾರು ಚಂಬು ಕೊಟ್ಟರು. ಕೃಷ್ಣಾ ನದಿ ನೀರನ್ನು ಕೃಷ್ಣ ಬೇಸ್‌ವರಿಗೆ ಕೊಡಬೇಕು. ಈ ಭಾಗಕ್ಕೆ734 ಟಿಎಂಸಿ ನೀರು ಬಚಾವತ್ ಆಯೋಗದಿಂದ ಬಂದಿದ್ದರೂ 5 ಟಿಎಂಸಿ ಮದ್ರಾಸ್ ಭಾಗಕ್ಕೆ ಕೊಡುತ್ತಿದ್ದೇವೆ. ಕುಡಿಯುವ ನೀರು ಬೇಕಾದರೆ ಕೃಷ್ಣ ಕಣಿವೆ ಜನ ಸಂತೋಷದಿಂದ ಕೊಡುತ್ತಾರೆ. ನೀರಾವರಿಗೆ ಇಲ್ಲಿಂದ ನೀರು ಒಯ್ಯುತ್ತೇವೆ ಎಂದರೆ, ಅಲ್ಲಿನ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.ಎಚ್.ಕೆ.ಪಾಟೀಲ, ಸಚಿವ