- ಹೈಸ್ಕೂಲ್ ಮೈದಾನದಲ್ಲಿ ಹಂದರಗಂಬಕ್ಕೆ ಪೂಜೆ ಸಲ್ಲಿಸಿ ಸಂಸದ ಸಿದ್ದೇಶ್ವರ ಹೇಳಿಕೆ । ಜಗತ್ತು ಮೆಚ್ಚಿದ ನಾಯಕ ಮೋದಿ ಎಂದು ಬಣ್ಣನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಹಾವೇರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಸಮಾವೇಶದಲ್ಲಿ ಏ.28ರಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ನಗರದ ಹೈಸ್ಕೂಲ್ ಮೈದಾನದಲ್ಲಿ ಹಂದರ ಕಂಬದ ಪೂಜೆ ನಡೆಯಿತು.
ದಾವಣಗೆರೆ ಬಳಿಕ ಕಾರವಾರ:
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಏ.28ರಂದು ದಾವಣಗೆರೆ, ಹಾವೇರಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಆಗಮಿಸಲಿದ್ದಾರೆ. ಇದಕ್ಕಾಗಿ ಹೈಸ್ಕೂಲ್ ಮೈದಾನದಲ್ಲಿ ಸಿದ್ಥತೆ ಕೈಗೊಂಡಿದ್ದೇವೆ. ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. 1 ಗಂಟೆಗೆ ಪ್ರಧಾನಿ ಮೋದಿ ನಗರಕ್ಕೆ ಆಗಮಿಸಿ, ಮಾತನಾಡಲಿದ್ದಾರೆ. ದಾವಣಗೆರೆ ಸಮಾವೇಶದ ನಂತರ ನರೇಂದ್ರ ಮೋದಿ ಅವರು ಕಾರವಾರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದರು.ಲಕ್ಷಾಂತರ ಜನರ ನಿರೀಕ್ಷೆ:
ಸ್ವಾತಂತ್ರ್ಯ ಬಂದ ಮೇಲೆ ದೀಪಾವಳಿ ಹಬ್ಬವನ್ನು ಸೈನಿಕರೊಂದಿಗೆ ಆಚರಿಸಿದ ಮೊದಲ ಪ್ರಧಾನಿ ನರೇಂದ್ರ ಮೋದಿ. ಭಾರತೀಯ ಸೈನ್ಯವನ್ನು ಬಲಪಡಿಸುವುದರ ಜೊತೆಗೆ 2047ಕ್ಕೆ ಭಾರತವನ್ನು ವಿಶ್ವದ ನಂಬರ್-1 ದೇಶ ಮಾಡುವುದು ಮೋದಿ ಮತ್ತು ಬಿಜೆಪಿ ಕನಸು ಹಾಗೂ ಗುರಿಯಾಗಿದೆ. ಇಡೀ ವಿಶ್ವವೇ ಇಂದು ನರೇಂದ್ರ ಮೋದಿ ಅತ್ಯುತ್ತಮ ಜಾಗತಿಕ ನಾಯಕ ಎಂದು ಬಣ್ಣಿಸುತ್ತಿದೆ. ಪ್ರತಿ ಕ್ಷೇತ್ರದಲ್ಲೂ ಭಾರತವು ಸಾಧನೆ ಮಾಡುವಲ್ಲಿ ನರೇಂದ್ರ ಮೋದಿ ಕೊಡುಗೆ ಇದೆ. ಆದರೆ, ವಿಪಕ್ಷಗಳಿಗೆ ಮೋದಿ ಸಾಧನೆ, ಬದ್ಧತೆ, ಇಚ್ಛಾಶಕ್ತಿ, ಕಾಳಜಿ ಅದ್ಯಾವುದೂ ಕಾಣುತ್ತಿಲ್ಲ ಎಂದು ಕಿಡಿಕಾರಿದರು.
- - - ಕೋಟ್ ದಾವಣಗೆರೆ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ, ಪಾಸ್ ಪೋರ್ಟ್ ಕಚೇರಿ, ಇಎಸ್‌ಐ ಆಸ್ಪತ್ರೆಗೆ ₹25 ಕೋಟಿ ಮಂಜೂರು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸಂಸದರು ಅಭಿವೃದ್ಧಿ ಮಾಡಿಲ್ಲವೆಂದು, ಖಾಲಿ ಚೊಂಬು ಕೊಟ್ಟಿದ್ದಾರೆಂದು ಕಾಂಗ್ರೆಸ್ಸಿನವರು ಟೀಕಿಸುತ್ತಾರೆ. ನಾನೇನು ಸಾಧನೆ ಮಾಡಿದ್ದೇನೆಂಬುದು ನನ್ನ ಲೋಕಸಭಾ ಕ್ಷೇತ್ರ, ದಾವಣಗೆರೆ ಜಿಲ್ಲೆಯ ಜನರಿಗೆ ತಿಳಿದಿದೆ
- - - ದಾವಣಗೆರೆಯಲ್ಲಿ ಏ.28ರಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವ ಬಿಜೆಪಿ ಪ್ರಚಾರ ಸಮಾವೇಶದಲ್ಲಿ 2 ಲಕ್ಷಕ್ಕೂಅಧಿಕ ಜನರು ಸೇರುವ ನಿರೀಕ್ಷೆ ಇದೆ. ಮಹಿಳೆಯರು, ವಕೀಲರು, ವೈದ್ಯರು ವಿಶೇಷವಾಗಿ ಭಾಗವಹಿಸಲಿದ್ದಾರೆ. ಅತ್ಯಂತ ಯಶಸ್ವಿ ಕಾರ್ಯಕ್ರಮ ದಾವಣಗೆರೆ ಪ್ರಚಾರ ಸಮಾವೇಶ ಆಗಲಿದೆ
- - - -24ಕೆಡಿವಿಜಿ1, 2, 3: