ಕನ್ನಡಪ್ರಭ ವಾರ್ತೆ ಗದಗ
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆಯಲ್ಲಿ ಅವ್ಯವಹಾರ, ಕೇಂದ್ರದಲ್ಲಿ ಅಸಮರ್ಪಕ ಆಡಳಿತ, ಚುನಾವಾಣಾ ಆಯೋಗ ಹುನ್ನಾರ, ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ, ಶಿಕ್ಷಣ ಪದ್ಧತಿಯಲ್ಲಿ ವೈಫಲ್ಯ, ಯುವಕರ ಬದುಕು ನಾಶ ಮಾಡಿದ ಎನ್‌ಇಪಿ, ಅಸ್ತವ್ಯಸ್ತಗೊಂಡ ದೇಶದ ಆಡಳಿತದ ವಿರುದ್ಧ ಜೆನ್‌ಜಿಗಳು ಅಸಮಾಧಾನಗೊಂಡಿದ್ದಾರೆ. ಸ್ವಯಂ ಪ್ರೇರಣೆಯಿಂದ ಮತದಾನಕ್ಕೆ ನೋಂದಣಿ ಮಾಡಿಸಿದ್ದಾರೆ ಎಂದರು.
ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ, 6 ತಿಂಗಳಿಂದ ನಾಲ್ಕು ಜಿಲ್ಲೆಗಳಲ್ಲಿ ಸಂಚರಿಸಿ, ಶಿಕ್ಷಕರು, ಕಾರ್ಯಕರ್ತರು ಹಾಗೂ ಪದವೀಧರನ್ನು ಸಂಪರ್ಕಿಸಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿರುವೆ. ಶಾಲಾ-ಕಾಲೇಜಿಗೆ ಭೇಟಿ, ಶಿಕ್ಷಕರ ಮನವೊಲಿಸುವಿಕೆ, ಕಾರ್ಯಕರ್ತರ ಸಭೆಯಂತಹ ಚಟುವಟಿಕೆ ನಡೆಸಲಾಗಿದೆ. ಕ್ಷೇತ್ರದಲ್ಲಿ 16 ಕಾಂಗ್ರೆಸ್ ಶಾಸಕರೊಂದಿಗೆ ಶಿವರಾಮ ಹೆಬ್ಬಾರ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮನೆ ಮನೆ ಪ್ರಚಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.22 ಸಾವಿರ ಶಿಕ್ಷಕರ ಹುದ್ದೆಗಳು ಸೇರಿ 74 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ, ಯುವನಿಧಿ ಯೋಜನೆ, ಸರ್ಕಾರಿ ನೌಕರರ ಆಗ್ರಹದಂತೆ ಒಪಿಎಸ್ ಜಾರಿಗಾಗಿ ತಜ್ಞರ ಸಮಿತಿ ರಚನೆಯಂತಹ ರಾಜ್ಯ ಸರ್ಕಾರದ ಕಾರ್ಯಗಳು ಈ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಕಾರಿಯಾಗಿವೆ ಎಂದರು.