ಮಠಗಳು ಸಂಸ್ಕೃತಿ, ಸಂಸ್ಕಾರ ಬಿತ್ತುವ ಕೇಂದ್ರಗಳು: ಡಾ. ವೈ.ಎನ್. ಪಾಪಣ್ಣವರ

KannadaprabhaNewsNetwork |  
Published : Jan 07, 2026, 02:30 AM IST
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವುದರಿಂದ ಜೀವನದಲ್ಲಿ ಒತ್ತಡ ಮುಕ್ತರಾಗಿ ಸಂತೋಷದ ಜೀವನವನ್ನು ನಡೆಸಬಹುದು. ಅದು ಜೀವನದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.

ನರಗುಂದ: ಮಠ- ಮಾನ್ಯಗಳು ಸಂಸ್ಕೃತಿ- ಸಂಸ್ಕಾರ ಬಿತ್ತುವ ಕೇಂದ್ರಗಳು. ಸಂಸ್ಕೃತಿ ನಾಶವಾದರೆ ದೇಶದ ಸಮೃದ್ಧತೆ ನಾಶವಾದಂತೆ. ಬದಲಾದ ಜನಜೀವನ ಶೈಲಿಯ ವ್ಯವಸ್ಥೆಗೆ ಮಠ- ಮಾನ್ಯಗಳ ಅವಶ್ಯಕತೆ ಬಹುಮುಖ್ಯವಾಗಿದೆ ಎಂದು ರೋಣದ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವೈ.ಎನ್. ಪಾಪಣ್ಣವರ ತಿಳಿಸಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವುದರಿಂದ ಜೀವನದಲ್ಲಿ ಒತ್ತಡ ಮುಕ್ತರಾಗಿ ಸಂತೋಷದ ಜೀವನವನ್ನು ನಡೆಸಬಹುದು. ಅದು ಜೀವನದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಪಾಶ್ಚಿಮಾತ್ಯೀಕರಣದ ಅನುಕರಣೆಯನ್ನು ದೂರವಿಟ್ಟು ಸಾತ್ವಿಕ ಜೀವನವನ್ನು ನಡೆಸಬೇಕೆಂದು ಹೇಳಿದರು.ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಮಾತನಾಡಿ, ಭಾರತದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸಿದ ಮತ್ತು ಸಾಮಾಜಿಕ ತಾರತಮ್ಯ ಪದ್ಧತಿಗಳ ಸಂಕೋಲೆಗಳಿಂದ ಮುಕ್ತರಾಗಲು ಹಾಗೂ ಸರ್ವರೂ ಶಿಕ್ಷಣವನ್ನು ಪಡೆಯಲು, ಮಹಿಳೆಯರನ್ನು ಪ್ರೋತ್ಸಾಹಿಸಿದ ದಿಟ್ಟ ಮಹಿಳೆ ಸಾವಿತ್ರಿ ಬಾಯಿ ಫುಲೆಯವರು ಎಂದರು.ತಮ್ಮ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಮಹಾರಾಷ್ಟ್ರದಲ್ಲಿ 1848ರಲ್ಲಿ ದೇಶದ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿ, ಜಾತಿ- ಲಿಂಗ ತಾರತಮ್ಯದ ವಿರುದ್ಧ ಹೋರಾಡಿ, ಕೆಳವರ್ಗದವರು ಮತ್ತು ಮಹಿಳೆಯರಿಗೆ ಶಿಕ್ಷಣವನ್ನು ಒದಗಿಸಿದರು. ವಿಧವೆಯರ ಕೇಶಮುಂಡನ, ಜಾತಿ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಅವರು ಸಮಾನತೆಗಾಗಿ ಶ್ರಮಿಸಿದ್ದರು ಎಂದರು.

ಶಾಂತಲಿಂಗ ಶ್ರೀಗಳು ಮಾತನಾಡಿ, ಮಹಿಳೆಯರ ಶಿಕ್ಷಣಕ್ಕಾಗಿ ಧ್ವನಿ ಎತ್ತಿ ಮೊಟ್ಟಮೊದಲು ಸರ್ವರಿಗೂ ಶಿಕ್ಷಣವನ್ನು ನೀಡಿದ ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆಯವರ ಜಯಂತಿಯನ್ನು ಸರ್ಕಾರ ಕಾರ್ಯಕ್ರಮದಲ್ಲಿ ಆಚರಿಸುತ್ತಿರುವುದು ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ಪ್ರೇರಣೆಯ ಪ್ರತಿಫಲವಾಗಿದೆ ಎಂದರು.

ಇತ್ತೀಚೆಗೆ ಪಿಎಚ್‌ಡಿ ಪದವಿ ಭಾಜನರಾದ ಡಾ. ವೈ.ಎನ್. ಪಾಪಣ್ಣವರ, ಕೌಶಲ್ಯ ಕರ್ನಾಟಕ- 2025 ಅತ್ಯುತ್ತಮ ಪ್ರಶಸ್ತಿ ಪಡೆದ ಶಿರೋಳದ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಮತ್ತು ಶಿಕ್ಷಕಿಯರಾದ ಶಿವಲೀಲಾ ವಸ್ತ್ರದ ಹಾಗೂ ಸರಸ್ವತಿ ಗಾಣಿಗೇರ ಅವರನ್ನು ಶ್ರೀಮಠದಿಂದ ಶಾಂತಲಿಂಗ ಶ್ರೀಗಳು ಸನ್ಮಾನಿದರು.

ಡಾ. ವೈ.ಎಂ. ಭಜಂತ್ರಿ, ಪ್ರೊ ಪಿ.ಎಸ್. ಅಣ್ಣಿಗೇರಿ, ಪಿ.ಎಫ್. ಆನಂದ್ರಭಾವಿ, ಜೀನದತ್ತ ಹಡಗಲಿ, ಬಿ.ಎಂ. ಗೊಜನೂರ, ಮಹಾಂತೇಶ ಸಾಲಿಮಠ, ಚಂದ್ರಕಾಂತ ಕಾಡದೇವರಮಠ, ಶ್ರೀಕಾಂತ ದೊಡಮನಿ, ಶ್ರೀಧರ ಬೇವಿನಕಟ್ಟಿ, ಅಶೋಕ ಆಳಗುಂಡಿ, ಶಿವಾನಂದ ಪೂಜಾರ, ಪ್ರೊ. ಆರ್.ಬಿ. ಚಿನಿವಾಲರ, ಪ್ರೊ. ಆರ್.ಕೆ. ಐನಾಪೂರ ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ