ಪ್ರತಿಭಾ ಪುರಸ್ಕಾರ । ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಗೌರವ
ಪ್ರತಿಯೊಬ್ಬರ ಜೀವನದಲ್ಲಿ ಹಣ ಮುಖ್ಯವಲ್ಲ, ಬದಲಿಗೆ ಉತ್ತಮ ಶಿಕ್ಷಣ ಮುಖ್ಯವಾಗುತ್ತದೆ, ವಿದ್ಯೆ ಯಾರೂ ಕೂಡ ಕದಿಯಲಾಗದ ಸಂಪತ್ತಾಗಿದೆ ಎಂದು ಅಹಿಂದ್ ಮತ್ತು ಕುರುಬ ಸಮಾಜದ ಮುಖಂಡ ಬಿ.ಸಿದ್ದಪ್ಪ ಹೇಳಿದರು.
ಪಟ್ಟಣದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಕುರುಬ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಇಂತಹ ಪ್ರತಿಭಾ ಪುರಸ್ಕಾರಗಳು ಬೆಳೆಯುವ ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹ ನೀಡಿದಂತಾಗುತ್ತದೆ ವಿದ್ಯಾರ್ಥಿಗಳು ಕೂಡ ತಮ್ಮ ಜವಾಬ್ದಾರಿಯನ್ನು ಅರಿತು ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಸಮಾಜಕ್ಕೆ ಉತ್ತಮ ಹೆಸರು, ಕೀರ್ತಿ ತರುವಂತೆ ಶ್ರಮವಹಿಸಿ ಶಿಕ್ಷಣ ಮಾಡಿದಾಗ ಅವರು ಇಡೀ ಸಮಾಜಕ್ಕೆ ಆಸ್ತಿಯಾಗುತ್ತಾರೆ ಎಂದು ಹೇಳಿದರು.
ಸಮಾಜದಲ್ಲಿ ಮಕ್ಕಳು ಸಾಧನೆ ಮಾಡಿದಾಗ ಅವುಗಳನ್ನುಗುರುತಿಸಿ ಅವರಿಗೆ ಸನ್ಮಾನಿಸುವ ಮೂಲಕ ಜೀವನದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡುವಂತೆ ಪ್ರೇರೇಪಿಸುವುದು ಸಮಾಜದ ಕರ್ತವ್ಯವಾಗಿದೆ ಎಂದರು.
ಹೊನ್ನಾಳಿ ಟವನ್ ಸಂಘದ ಕುರುಬ ಸಮಾಜದ ನೂತನ ಸದಸ್ಯರು, ಕುರುಬ ಸಮಾಜ ಮುಖಂಡರು, ಪುರಸಭೆ ಸದಸ್ಯರು ಹಾಗೂ ಯುವ ಅಧಿಕಾರಿ ಹರೀಶ್ ಅವರನ್ನು ಸನ್ಮಾನಿಸಲಾಯಿತು.
ಕುರುಬ ಸಮಾಜದ ಗೌರವಾಧ್ಯಕ್ಷ ದಿಡಗೂರು ಪಾಲಾಕ್ಷಪ್ಪ, ಮುಖಂಡರಾದ ಎಸ್. ಎಸ್. ಬೀರಪ್ಪ, ಸೌಮ್ಯ, ಬಾಬು ಹೋಬಳದಾರ್, ಹರಿಹರ ಪ್ರಾಂಶುಪಾಲ ಸಂತೋಷ ಕುಮಾರ್,ತಿಮ್ಮೇನಹಳ್ಳಿ ಹನುಮಂತಪ್ಪ ಮುಂತಾದವರು ಮಾತನಾಡಿದರು.