ಹಣ ವರ್ಗಾವಣೆ : ಗೇಮ್ಸ್‌ ಕ್ರಾಫ್ಟ್‌ ಕಂಪನಿಯ ಮೂರು ಮಂದಿ ಬಂಧನ

KannadaprabhaNewsNetwork |  
Published : May 09, 2026, 03:30 AM ISTUpdated : May 09, 2026, 07:05 AM IST
arrest

ಸಾರಾಂಶ

ಹಣ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದಡಿ ಆನ್‌ಲೈನ್‌ ಗೇಮಿಂಗ್‌ ಗೇಮ್ಸ್‌ ಕ್ರಾಫ್ಟ್‌ನ ಬೆಂಗಳೂರು ಮತ್ತು ದೆಹಲಿಯ 17 ಸ್ಥಳಗಳಿಗೆ ಗುರುವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ(ಇ.ಡಿ.) ಇದೀಗ ಸಂಸ್ಥೆಯ 3 ಸದಸ್ಯರನ್ನು ಶುಕ್ರವಾರ ಬಂಧಿಸಿದೆ.  

ನವದೆಹಲಿ: ಹಣ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದಡಿ ಆನ್‌ಲೈನ್‌ ಗೇಮಿಂಗ್‌ ಗೇಮ್ಸ್‌ ಕ್ರಾಫ್ಟ್‌ನ ಬೆಂಗಳೂರು ಮತ್ತು ದೆಹಲಿಯ 17 ಸ್ಥಳಗಳಿಗೆ ಗುರುವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ(ಇ.ಡಿ.) ಇದೀಗ ಸಂಸ್ಥೆಯ 3 ಸದಸ್ಯರನ್ನು ಶುಕ್ರವಾರ ಬಂಧಿಸಿದೆ. ದೀಪಕ್‌ ಸಿಂಗ್‌, ಪೃಥ್ವಿ ರಾಜ್‌ ಸಿಂಗ್‌ ಮತ್ತು ವಿಕಾಸ್‌ ತನೇಜಾ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಇ.ಡಿ. ಬಂಧಿಸಿದೆ.

ದೀಪಕ್‌ ಸಿಂಗ್‌ ಮತ್ತು ಪೃಥ್ವಿರಾಜ್‌ ಸಿಂಗ್‌ ಬಂಧನ

ದೀಪಕ್‌ ಸಿಂಗ್‌ ಮತ್ತು ಪೃಥ್ವಿರಾಜ್‌ ಸಿಂಗ್‌ ಅವರನ್ನು ದೆಹಲಿ-ಎನ್‌ಸಿಆರ್‌ ಪ್ರದೇಶದಿಂದ ಹಾಗೂ ತನೇಜಾ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಮೂವರನ್ನೂ ಬೆಂಗಳೂರು ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜಿ ಲಿ. ವಿರುದ್ಧ ಇ.ಡಿ.ಯು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಈ ಬಂಧನ ನಡೆದಿದೆ. ಹಲವು ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ. ತನಿಖೆ ನಡೆಸುತ್ತಿದೆ.

17 ಕಡೆ ದಾಳಿ ನಡೆಸಿತ್ತು

ಗುರುವಾರವಷ್ಟೇ ಇ.ಡಿ.ಯು ದೆಹಲಿ ಮತ್ತು ಕರ್ನಾಟಕದ 17 ಕಡೆ ದಾಳಿ ನಡೆಸಿ ಕೋಟ್ಯಂತರ ರುಪಾಯಿ ಹಣ ಹಾಗೂ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಕಂಪನಿಯು ರಮ್ಮಿ ಕಲ್ಚರ್‌, ರಮ್ಮಿ ಟೈಮ್‌ನಂಥ ಆನ್‌ಲೈನ್ ಗೇಮ್‌ಗಳನ್ನು ನಡೆಸುತ್ತಿತ್ತು. ಈ ಸಂಸ್ಥೆ ವಿರುದ್ಧ ಹಲವು ವಂಚನೆ ಪ್ರಕರಣಗಳು ದಾಖಲಾಗಿವೆ. ವಂಚನೆ ಬಳಿಕ ಕೆಲವರು ಆತ್ಮಹತ್ಯೆ ಮಾಡಿಕೊಂಡ ಕುರಿತೂ ಎಫ್‌ಐಆರ್‌ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ