ಹಣ, ಆಸ್ತಿ, ಅಂತಸ್ತು ಕ್ಷಣಿಕ, ಸತ್ಕಾರ್ಯ ಶಾಶ್ವತ

KannadaprabhaNewsNetwork |  
Published : Jan 20, 2026, 03:15 AM IST
ಮುದ್ದೇಬಿಹಾಳ ಪಟ್ಟಣದಲ್ಲಿ ಗವಿಸಿದ್ದೇಶ್ವರ ವೇದಿಕೆಯಲ್ಲಿ ನಡೆದ ಜಂಗಮದೆಡೆಗೆ ನಾಟಕವನ್ನು ಕುಂಟೋಜಿ ಭಾವೈಕತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಹಾಗೂ ವಿವಿಧಗಣ್ಯರು ಡೋಲು ಬಾರಿಸುವ ಉದ್ಘಾಟಿಸಿದರು. | Kannada Prabha

ಸಾರಾಂಶ

ಹಣ, ಆಸ್ತಿ, ಅಂತಸ್ತು ಯಾವುದು ಮನುಷ್ಯನ ಕೊನೆಗಾಲದಲ್ಲಿ ಬರುವುದಿಲ್ಲ. ಆದರೇ ನಾವು ಮಾಡುವ ಸತ್ಕಾರ್ಯಗಳು, ಸಾಮಾಜಿಕ ಚಿಂತನೆ ಬದುಕು ಮತ್ತು ದಾನ-ಧರ್ಮಗಳು ಶಾಶ್ವತವಾಗಿ ಎಲ್ಲರ ಮನಸ್ಸಲ್ಲಿ ಅಚ್ಚಳಿಯದೇ ಉಳಿದುಕೊಳ್ಳುತ್ತವೆ ಎಂದು ಕುಂಟೋಜಿ ಭಾವೈಕತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಹಣ, ಆಸ್ತಿ, ಅಂತಸ್ತು ಯಾವುದು ಮನುಷ್ಯನ ಕೊನೆಗಾಲದಲ್ಲಿ ಬರುವುದಿಲ್ಲ. ಆದರೇ ನಾವು ಮಾಡುವ ಸತ್ಕಾರ್ಯಗಳು, ಸಾಮಾಜಿಕ ಚಿಂತನೆ ಬದುಕು ಮತ್ತು ದಾನ-ಧರ್ಮಗಳು ಶಾಶ್ವತವಾಗಿ ಎಲ್ಲರ ಮನಸ್ಸಲ್ಲಿ ಅಚ್ಚಳಿಯದೇ ಉಳಿದುಕೊಳ್ಳುತ್ತವೆ ಎಂದು ಕುಂಟೋಜಿ ಭಾವೈಕತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ತುಮಕೂರ ಸಿದ್ದಗಂಗಾ ಮಠದ ಡಾ.ಶಿವಕುಮಾರ ಮಹಾಸ್ವಾಮೀಜಿ ಜನ್ಮದಿನೋತ್ಸವ ಹಾಗೂ ತಾಲೂಕಿನ ಮಡಿಕೇಶ್ವರದ ಜಾನಪದ ಹಿರಿಯ ಕಲಾವಿದ ದಿ.ಚನ್ನಣ್ಣ ದೇಸಾಯಿ 5ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ ಕಲಾ ತಂಡದವರಿದಂದ ಹುಡ್ಕೋ ಬಡಾವಣೆಯಲ್ಲಿ ನಡೆದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಪಂಡಿತಾರಾಧ್ಯ ಶಿವಾಚಾರ್ಯರು ರಚನೆಯ ಹಾಗೂ ಆರ್‌.ಜಗದೀಶ ನಿರ್ದೇಶನದ ಜಂಗಮದೆಡೆಗೆ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸಾಕಷ್ಟು ಶ್ರೀಮಂತರಿದ್ದಾರೆ. ಆದರೇ ಅವರಿಗೆಲ್ಲ ಇನ್ನಷ್ಟು ಆಸ್ತಿ ಹಣ, ಅಂತಸ್ತು ಗಳಿಸುವ ಮನಸ್ಸಿರುತ್ತದೆ ವಿನಃ ಸಾಮಾಜಿಕ ಚಿಂತನೆ ಪರಿವರ್ತನೆ ಬಗ್ಗೆ ಕಾಳಜಿ ಬಹಳ ಕಡಿಮೆ. ಇಂತಹ ಸಂದರ್ಭದಲ್ಲಿ ಇಂದು ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುವು ಕಾಲಘಟ್ಟದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ತಮ್ಮ ತಂದೆ ನೆನಪಿಗಾಗಿ ತುಮಕೂರ ಸಿದ್ದಗಂಗಾಮಠದ ಡಾ.ಶಿವಕುಮಾರ ಮಹಾಸ್ವಾಮೀಜಿ ಜನ್ಮ ದಿನೋತ್ಸವದಂದೆ ದಾಸೋಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

13ನೇ ಬಾರಿಗೆ ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ ಕಲಾ ತಂಡದವರು ಧಾರ್ಮಿಕ ನಾಟಕಗಳನ್ನು ಆಯೋಜಿಸಿ ಜನರಿಗೆ ಮನರಂಜನೆ ಜತೆಗೆ ಧಾರ್ಮಿಕ ಧರ್ಮದ ದಾರಿಯತ್ತ ಸಾಗುವಂತೆ ಮಾಡುವ ಕಾರ್ಯ ನಿಜಕ್ಕೂ ಶ್ಲಾಘನಿಯವಾದುದು. ಇತ್ತೀಚಿಗೆ ಮೊಬೈಲ್‌ ಹಾಗೂ ತಂತ್ರಜ್ಞಾನ ಕಾಲದಲ್ಲಿ ನಾಟಕಗಳು ಮರಿಚಿಕೆಯಾಗುತ್ತಿವೆ. ಸಾಣೇಹಳ್ಳಿ ಕಲಾ ತಂಡದವರು ನಡೆಸಿಕೊಡುವ ಎಲ್ಲ ನಾಟಕಗಳು ಮನಸ್ಸಿನ ಒತ್ತಡ ಹಾಗೂ ಬದುಕಿನ ಜಂಜಾಟ ಮರೆಸುವಲ್ಲಿ ನೆರೆವಾಗುತ್ತದೆ. ಕಲಾಭಿರುಚಿ ಹೊಂದಿರುವ ಜನತೆ ಸಂಗೀತ ನಾಟಕ ಇತ್ಯಾದಿ ಲಲಿತ ಕಲೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.ಹಿರಿಯ ಸಾಹಿತಿ ಪ್ರೊ.ಬಿ.ಎಂ ಹಿರೇಮಠ, ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಬಿ ನಾವದಗಿ ಮಾತನಾಡಿದರು. ಗಣ್ಯರಾದ ಬಸವರಾಜ ಮೋಟಗಿ, ದಾನಪ್ಪ ನಾಗಾಠಾಣ, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ವಾಸುದೇವ ಶಾಸ್ತ್ರಿ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ವೆಂಕನಗೌಡ ಪಾಟೀಲ, ನ್ಯಾಯವಾದಿ ಎಂ.ಎಚ್ ಹಾಲಣ್ಣವರ, ಎಂ.ಎಸ್ ನಾವದಗಿ, ಎಸ್‌.ಎಸ್ ಮಾಲಗತ್ತಿ, ಮಾಣಿಕ ದಂಡಾವತಿ, ಸಾಹಿತಿ ಬಾಪುಗೌಡ ಪಾಟೀಲ ವೈದ್ಯ ಡಾ.ಕರೇಕಲ್ಲ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ