ಲಕ್ಷ್ಮೇಶ್ವರ: ಭಾರತೀಯರಿಗೆ ಮುಂಗಾರು ಎನ್ನುವುದು ಕೇವಲ ಮಳೆಯಲ್ಲ, ಅದೊಂದು ಹಬ್ಬ. ಉತ್ಸವ, ಸಂಭ್ರಮ ಮತ್ತು ಇಡೀ ದೇಶದ ಜೀವಾಳ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗುರುರಾಜ ಹವಳದ ತಿಳಿಸಿದರು.
ಎಂ.ಎನ್. ಭರಮಗೌಡರ ಹಾಗೂ ಚಂಬಣ್ಣ ಬಾಳಿಕಾಯಿ ಮಾತನಾಡಿ, ತಾಲೂಕು ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಸಾಹಿತ್ಯದ ಜತೆಗೆ ಸರ್ವರನ್ನು ಬೆರೆಸುವ ವಿಶಿಷ್ಟ ಕಾರ್ಯ ಮಾಡುತ್ತಿವೆ. ಅದಕ್ಕಾಗಿ ಸಾಹಿತ್ಯ ಪರಿಷತ್ತಿಗೆ ಅಭಿನಂದನೆಗಳು ಎಂದರು.ವಿಶೇಷ ಆಹ್ವಾನಿತರಾಗಿದ್ದ ವಿಶ್ರಾಂತ ಮುಖ್ಯೋಪಾಧ್ಯಾಯ ಬಿ.ಎಸ್. ಹರ್ಲಾಪುರ ಹಾಗೂ ಜಿ.ಎಂ. ಪೂಜಾರ ಅವರು ಮಾತನಾಡಿ, ಬದುಕಿನ ಆರಂಭದಿಂದ ಬದುಕಿನುದ್ದಕ್ಕೂ ಸಂಗೀತ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಗಾನಕ್ಕೆ ಒಲಿಯದ ಮನವಿಲ್ಲ ಎಂಬುದು ದಿಟವಾದ ಮಾತು ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧರಣೇಂದ್ರಗೌಡ ಪಾಟೀಲ, ಬೀನಾ ಧರಣೇಂದ್ರಗೌಡ ಪಾಟೀಲ, ಅನ್ನಪೂರ್ಣ ಹರ್ಲಾಪುರ, ಶಂಕರ ಶೇಳಕೆ ಇದ್ದರು. ನಂತರ ಜರುಗಿದ ಗಾನ ಮುಂಗಾರು ಸಂಗೀತ ಕಾರ್ಯಕ್ರಮದಲ್ಲಿ ಡಾ. ಎಸ್.ಸಿ. ನೇಕಾರ, ಮಂಜುನಾಥ ಉಮಚಗಿ, ಮಂಜುನಾಥ ಕೊಡ್ಲಿ, ನವೀನ ಅಂಗಡಿ, ರವಿರಾಜ ಶಿಗ್ಲಿ, ಕು. ಅಮೋಘ ಹರಕುಣಿ ಅವರು ಭಾವ ತುಂಬುವ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. .